For Quick Alerts
ALLOW NOTIFICATIONS  
For Daily Alerts
 

PAK vs SL: ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಮೈಲಿಗಲ್ಲು ಸ್ಥಾಪಿಸಿದ 18ನೇ ಪಾಕ್ ಬೌಲರ್ ಶಾಹೀನ್ ಆಫ್ರಿದಿ

ಭಾನುವಾರ, ಜುಲೈ 16ರಂದು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವೇಗಿ ಶಾಹೀನ್ ಶಾ ಆಫ್ರಿದಿ 100 ಟೆಸ್ಟ್ ವಿಕೆಟ್‌ಗಳ ದಾಖಲೆಯನ್ನು ಪೂರೈಸಿದರು. ಪಂದ್ಯದ ಮೊದಲ ದಿನದಂದು ಶ್ರೀಲಂಕಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಶ್ರೀಲಂಕಾ ಆರಂಭಿಕ ನಿಶಾನ್ ಮದುಷ್ಕಾ ಅವರ ವಿಕೆಟ್ ಪಡೆದ ಶಾಹೀನ್ ಅಫ್ರಿದಿ ಮೊದಲ ಆಘಾತ ನೀಡಿದರು. ಔಟ್‌ಸ್ವಿಂಗರ್ ಹಾಕಿದ ಚೆಂಡು ಬ್ಯಾಟ್‌ನ ಅಂಚಿಗೆ ಸವರಿತು, ಇದನ್ನು ವಿಕೆಟ್‌ಕೀಪರ್ ಸರ್ಫರಾಜ್ ಅಹ್ಮದ್ ಸ್ಟಂಪ್‌ನ ಹಿಂದೆ ಉತ್ತಮವಾಗಿ ಕ್ಯಾಚ್ ಪಡೆದರು.

PAK vs SL: Shaheen Afridi Becomes 18th Pakistan Bowler To Take 100 Wickets in Test Cricket

ಮೊದಲ ವಿಕೆಟ್ ನಂತರ ಸ್ವಲ್ಪಮಟ್ಟಿಗೆ ತುಂತುರು ಮಳೆಯ ಕಾರಣ ಶ್ರೀಲಂಕಾ ಸ್ಕೋರ್ 5.5 ಓವರ್‌ಗಳ ನಂತರ 1 ವಿಕೆಟ್‌ಗೆ 18 ರನ್ ಆಗಿದ್ದಾಗ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು.

ಶಾಹೀನ್ ಅಫ್ರಿದಿ ತಮ್ಮ 26ನೇ ಟೆಸ್ಟ್ ಪಂದ್ಯದಲ್ಲಿ 100 ವಿಕೆಟ್‌ಗಳ ಸಾಧನೆ ಮಾಡಿದರು. ಯಾಸಿರ್ ಶಾ, ವಕಾರ್ ಯೂನಿಸ್, ಸಯೀದ್ ಅಜ್ಮಲ್, ಮೊಹಮ್ಮದ್ ಆಸಿಫ್ ಮತ್ತು ಫಜಲ್ ಮಹಮೂದ್, ಸಕ್ಲೈನ್ ​​ಮುಷ್ತಾಕ್, ಡ್ಯಾನಿಶ್ ಕನೇರಿಯಾ ಅವರಂತಹ ಗಣ್ಯರ ಪಟ್ಟಿಗೆ ಸೇರಿದ್ದಾರೆ. ಅತ್ಯಂತ ವೇಗವಾಗಿ 100ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಪಾಕಿಸ್ತಾನ ಬೌಲರ್ ಎನಿಸಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳ ಮೈಲಿಗಲ್ಲು ತಲುಪಲು ಶಾಹೀನ್ ಅಫ್ರಿದಿ ಅವರು ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗಿಂತ ಎರಡು ಟೆಸ್ಟ್‌ ಪಂದ್ಯಳನ್ನು ಹೆಚ್ಚು ತೆಗೆದುಕೊಂಡಿದ್ದಾರೆ. ಈ ಹೆಗ್ಗುರುತನ್ನು ತಲುಪಲು ಜಸ್ಪ್ರೀತ್ ಬುಮ್ರಾ ಕೇವಲ 24 ಟೆಸ್ಟ್‌ ಪಂದ್ಯಗಳನ್ನು ತೆಗೆದುಕೊಂಡರೆ, ಶಾಹೀನ್ ಅಫ್ರಿದಿ 26 ಟೆಸ್ಟ್‌ ಪಂದ್ಯಗಳಲ್ಲಿ ಸಾಧನೆ ಮಾಡಿದ್ದಾರೆ.

ಸುಮಾರು ಒಂದು ವರ್ಷದ ನಂತರ ಶಾಹೀನ್ ಅಫ್ರಿದಿ ಟೆಸ್ಟ್ ಕ್ರಿಕೆಟ್‌ಗೆ ಮರಳಿದ್ದಾರೆ. 2022ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಅವರದೇ ನೆಲದಲ್ಲಿ ಎರಡು ಪಂದ್ಯಗಳ ಸರಣಿಯಲ್ಲಿ ಡೀಪ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಅಫ್ರಿದಿ ಮೊಣಕಾಲು ಗಾಯ ಮಾಡಿಕೊಂಡಿದ್ದರು. ಗಾಯದ ನಂತರ ಟೆಸ್ಟ್ ಕ್ರಿಕೆಟ್‌ಗೆ ಶ್ರೀಲಂಕಾ ವಿರುದ್ಧವೇ ಮರಳುತ್ತಿರುವುದು ವಿಶೇಷವಾಗಿದೆ.

2022ರ ಟಿ20 ವಿಶ್ವಕಪ್‌ನಲ್ಲಿ ಶಾಹೀನ್ ಅಫ್ರಿದಿ ಪುನರಾಗಮನ ಮಾಡಿದರೂ, ಪಂದ್ಯವೊಂದರಲ್ಲಿ ಬೀಳುವ ಮೂಲಕ ಅವರು ತಮ್ಮ ಗಾಯವನ್ನು ಇನ್ನಷ್ಟು ಹೆಚ್ಚು ಮಾಡಿಕೊಂಡರು. 2023ರ ಪಾಕಿಸ್ತಾನ್ ಸೂಪರ್ ಲೀಗ್ ಮತ್ತು ಕೌಂಟಿ ಕ್ರಿಕೆಟ್ ಆಡಲು ಹಿಂದಿರುಗುವ ಮೊದಲು ಅವರು ಮತ್ತೆ ಪುನರ್ವಸತಿಗೆ ಒಳಗಾಗಿದ್ದರು.

2023 ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ದೊಡ್ಡ ವರ್ಷವಾಗಿದೆ. ಬಾಬರ್ ಅಜಮ್ ನಾಯಕತ್ವದ ತಂಡವು ಏಷ್ಯಾ ಕಪ್ 2023 ಮತ್ತು ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಭಾಗವಹಿಸಲಿದೆ.

ಈ ಎರಡು ಪಂದ್ಯಾವಳಿಗಳಲ್ಲಿ ತಂಡದ ಯಶಸ್ಸಿಗೆ ಶಾಹೀನ್ ಅಫ್ರಿದಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅವರು ಆರಂಭಿಕ ಓವರ್‌ಗಳಲ್ಲಿ ವಿಕೆಟ್ ಕೀಳುವ ಈ ಅದ್ಭುತ ಕೌಶಲ್ಯವನ್ನು ಹೊಂದಿದ್ದಾರೆ. ಏಕದಿನ ವಿಶ್ವಕಪ್ ವರ್ಷವಾಗಿರುವುದರಿಂದ ಈ ವರ್ಷ ಏಷ್ಯಾಕಪ್ 50 ಓವರ್ ಮಾದರಿಯಲ್ಲಿ ನಡೆಯಲಿದೆ ಎಂಬುದನ್ನು ಗಮನಿಸಬೇಕಾದ ಸಂಗತಿ.

Story first published: Sunday, July 16, 2023, 17:39 [IST]
Other articles published on Jul 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+