ಅಕ್ಟೋಬರ್ 10ರಂದು ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ದಸುನ್ ಶನಕ ನಾಯತ್ವದ ಶ್ರೀಲಂಕಾ ತಂಡದ ವಿರುದ್ಧ ಬೃಹತ್ ಮೊತ್ತವನ್ನು ಬೆನ್ನತ್ತಿ ಗೆಲುವು ಸಾಧಿಸಿತು.
ಪಾಕಿಸ್ತಾನ ತಂಡದ ಸ್ಟಾರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರು ಸದ್ಯ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಬಿಕ್ಕಟ್ಟಿನ ಮಧ್ಯೆ 2023ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ತಮ್ಮ ತಂಡದ ಗೆಲುವನ್ನು "ಗಾಜಾದಲ್ಲಿರುವ ಸಹೋದರ ಸಹೋದರಿಯರಿಗೆ' ಅರ್ಪಿಸುವುದಾಗಿ ತಿಳಿಸಿದರು.

ಮಂಗಳವಾರ ಪಾಕಿಸ್ತಾನದ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಮೊಹಮ್ಮದ್ ರಿಜ್ವಾನ್ 131 ರನ್ ಗಳಿಸಿದರು ಮತ್ತು ಅಬ್ದುಲ್ಲಾ ಶಫೀಕ್ ತಮ್ಮ ಚೊಚ್ಚಲ ಏಕದಿನ ಶತಕವನ್ನು ಬಾರಿಸಿದ ನೆರವಿನಿಂದ ವಿಶ್ವಕಪ್‌ನಲ್ಲಿ ಪಾಕಿಸ್ತಾನ 345 ರನ್‌ಗಳ ದಾಖಲೆಯ ಗುರಿಯನ್ನು ಬೆನ್ನಟ್ಟಿತು.
ಮೊಹಮ್ಮದ್ ರಿಜ್ವಾನ್ ಅವರ ಶತಕದ ಪ್ರದರ್ಶನ ಅವರಿಗೆ ಸಾಕಷ್ಟು ಪ್ರಶಂಸೆ ಗಳಿಸಿ ಕೊಟ್ಟರೂ, ಸಾಮಾಜಿಕ ಮಾಧ್ಯಮ ಬಳಕೆದಾರರು ಇಸ್ರೇಲ್-ಪ್ಯಾಲೆಸ್ತೀನ್ ಬಿಕ್ಕಟ್ಟಿನ ಬಗ್ಗೆ ಅವರ ಹೇಳಿಕೆಗಳಿಂದ ಅಸಮಾಧಾನಗೊಂಡಿದ್ದಾರೆ.
ರಿಜ್ವಾನ್ ಕ್ರಿಕೆಟ್‌ನತ್ತ ಗಮನ ಹರಿಸಬೇಕು ಮತ್ತು ವಿಶ್ವ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ನೆಟ್ಟಿಗರು ಸೂಚಿಸಿದರೆ, ಕೆಲವರು ಭಾರತೀಯ ಕ್ರಿಕೆಟ್ ತಂಡದ ತಾರೆಗಳು ಎಂದಿಗೂ ಈ ರೀತಿಯ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

"ಈ ಗೆಲುವು ಗಾಜಾದಲ್ಲಿರುವ ನಮ್ಮ ಸಹೋದರ ಸಹೋದರಿಯರಿಗಾಗಿ. ಗೆಲುವಿನಲ್ಲಿ ಕೊಡುಗೆ ನೀಡಲು ಸಂತೋಷವಾಗಿದೆ. ಇಡೀ ತಂಡಕ್ಕೆ ಮತ್ತು ವಿಶೇಷವಾಗಿ, ಗೆಲುವನ್ನು ಸುಲಭಗೊಳಿಸಿದ್ದಕ್ಕಾಗಿ ಅಬ್ದುಲ್ಲಾ ಶಫೀಕ್ ಮತ್ತು ಹಸನ್ ಅಲಿ ಅವರಿಗೆ ಶ್ರೇಯಸ್ಸು ಸೇರಬೇಕು. ಹೈದರಾಬಾದ್‌ನ ಜನರ ಅದ್ಭುತವಾದ ಆತಿಥ್ಯ ಮತ್ತು ಬೆಂಬಲಕ್ಕಾಗಿ ತುಂಬಾ ಕೃತಜ್ಞರಾಗಿರುತ್ತೇನೆ," ಎಂದು ಮೊಹಮ್ಮದ್ ರಿಜ್ವಾನ್ ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೊಹಮ್ಮದ್ ರಿಜ್ವಾನ್ ಅವರ ಪೋಸ್ಟ್‌ಗೆ ಪ್ರತಿಯಾಗಿ, "ರಿಜ್ವಾನ್ ಕ್ರಿಕೆಟ್ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸಬೇಕು," ಎಂದು ನೆಟ್ಟಿಗರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
"ಒಂದು ಶತಕ ಅಥವಾ ಗೆಲುವು ಗಾಜಾದಲ್ಲಿರುವವರಿಗೆ ಹೇಗೆ ಸಹಾಯ ಮಾಡುತ್ತದೆ? ಬದಲಿಗೆ, ನೀವು ಮತ್ತು ಇಡೀ ಪಾಕಿಸ್ತಾನ ತಂಡವು ವಿಶ್ವಕಪ್‌ನಿಂದ ಪ್ಯಾಲೆಸ್ತೀನಿಯಾದವರಿಗೆ ಪಂದ್ಯದ ಶುಲ್ಕ, ಪ್ರಶಸ್ತಿಗಳು, ಹಣ ಸೇರಿದಂತೆ ಎಲ್ಲಾ ರೀತಿಯ ಗಳಿಕೆಯನ್ನು ದಾನ ಮಾಡಬೇಕು. ಅದು ನಿಜವಾದ ಸಹಾಯವಾಗುತ್ತದೆ. ಇಲ್ಲದಿದ್ದರೆ ಈ ಟ್ವೀಟ್ ಕೇವಲ ಹಾಗ್‌ವಾಶ್ ಆಗಿದೆ," ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ.
ಹಮಾಸ್ ಉಗ್ರರ ದಾಳಿಯಿಂದ ದೇಶದ ಇತಿಹಾಸದಲ್ಲಿ ಇಸ್ರೇಲ್‌ನಲ್ಲಿನ ಸಾವಿನ ಸಂಖ್ಯೆಯು ಅತ್ಯಂತ ಕೆಟ್ಟ 1,200ಕ್ಕಿಂತ ಹೆಚ್ಚಿದೆ. ಆದರೆ, ಗಾಜಾ ಅಧಿಕಾರಿಗಳು ಇದುವರೆಗೆ 900 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದ್ದಾರೆ. ಇಸ್ರೇಲ್‌ನಲ್ಲಿ ಸುಮಾರು 1,500 ಹಮಾಸ್ ಉಗ್ರರ ಶವಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಗಾಜಾದಲ್ಲಿನ ಹಮಾಸ್ ಉಗ್ರರ ತಾಣಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ರಾತ್ರೋರಾತ್ರಿ ಏರ್‌ಸ್ಟ್ರೈಕ್ ನಡೆಸಿದ ದಾಳಿಯಲ್ಲಿ ಕನಿಷ್ಠ ನೂರಾರು ಜನರು ಸಾವನ್ನಪ್ಪಿದ್ದಾರೆ. ಮಿಲಿಟರಿ ವಿಮಾನಗಳನ್ನು ಗುರುತಿಸಲು ಹಮಾಸ್ ಬಳಸಿದ 'ಸುಧಾರಿತ ಪತ್ತೆ ವ್ಯವಸ್ಥೆ'ಯನ್ನು ಫೈಟರ್ ಜೆಟ್‌ಗಳು ನಾಶಪಡಿಸಿದವು ಎಂದು ಇಸ್ರೇಲ್ ಸೇನೆ ಹೇಳಿದೆ.