ಟೆಸ್ಟ್ ಕ್ರಿಕೆಟ್‌ಗೆ ಬೈ ಹೇಳಿದ ಪಾಕ್ ಆಲ್ ರೌಂಡರ್ ಮುಹಮ್ಮದ್ ಹಫೀಜ್

ಕರಾಚಿ, ಡಿಸೆಂಬರ್ 4: ಪಾಕಿಸ್ತಾನದ ಆಲ್ ರೌಂಡರ್ ಆಟಗಾರ ಮುಹಮ್ಮದ್ ಹಫೀಜ್ ಅವರು ಟೆಸ್ಟ್ ಕ್ರಿಕೆಟ್‌ಗೆ ಮಂಗಳವಾರ (ಡಿಸೆಂಬರ್ 4) ನಿವೃತ್ತಿ ಘೋಷಿಸಿದ್ದಾರೆ. ಅಬುಧಾಬಿಯಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬಳಿಕ ಹಫೀಜ್ ವಿದಾಯದ ನಿರ್ಧಾರ ಪ್ರಕಟಿಸಿದರು.
ನ್ಯೂಜಿಲ್ಯಾಂಡ್ ವಿರುದ್ಧ ಇದು 55ನೇ ಟೆಸ್ಟ್ ಪಂದ್ಯ ಆಡುತ್ತಿರುವ 38ರ ಹರೆಯದ ಹಫೀಜ್ 3ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 0ಗೆ ವಿಕೆಟ್ ಒಪ್ಪಿಸಿದರು. ಈ ಪಂದ್ಯಕ್ಕೂ ಮುನ್ನ ಹಫೀಜ್ 54 ಟೆಸ್ಟ್ ಪಂದ್ಯಗಳಲ್ಲಿ 38.35 ಸರಾಸರಿಯಲ್ಲಿ 3644 ರನ್ ಕಲೆ ಹಾಕಿದ್ದರು.
ಟೆಸ್ಟ್ ನಿವೃತ್ತಿಯ ಬಗ್ಗೆ ಮಾತನಾಡುತ್ತ ಮುಹಮ್ಮದ್, 'ಇದು ನನ್ನ ವೈಯಕ್ತಿಕ ನಿರ್ಧಾರವೇ ಹೊರತು ಯಾವುದೇ ಒತ್ತಡಕ್ಕೆ ಸಿಲುಕಿ ವಿದಾಯ ಹೇಳುತ್ತಿಲ್ಲ. ಈ ನಿರ್ಧಾರವನ್ನು ಪ್ರಕಟಿಸುತ್ತಿರುವುದಕ್ಕೆ ನನಗೆ ವಿಷಾದವೂ ಅನ್ನಿಸುತ್ತಿಲ್ಲ' ಎಂದು ಹೇಳಿಕೊಂಡಿದ್ದಾರೆ.
ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮೂರನೇ ಮತ್ತು ಅಂತಿಮ ಟೆಸ್ಟ್ ನಲ್ಲಿ ಮೊದಲ ಇನ್ನಿಂಗ್ಸ್‌ಗೆ ಇಳಿದಿರುವ ಪಾಕ್, ಮಂಗಳವಾರ (ಡಿಸೆಂಬರ್ 4) ದಿನದಾಂತ್ಯಕ್ಕೆ 61 ಓವರ್‌ಗೆ 3 ವಿಕೆಟ್ ಕಳೆದು 139 ರನ್ ಗಳಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಕಿವೀಸ್ 116.1 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 274 ರನ್ ಪೇರಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications