ವಿಶ್ವ ಟಿ20 ಪಾಕಿಸ್ತಾನ ತಂಡಕ್ಕೆ ಅಫ್ರಿದಿ ನಾಯಕ
ಕರಾಚಿ, ಫೆ. 10: ಮುಂಬರುವ ಏಷ್ಯಾ ಕಪ್ ಹಾಗೂ ವಿಶ್ವ ಟಿ20 ಟೂರ್ನಿಗಾಗಿ ಪಾಕಿಸ್ತಾನ ಆಯ್ಕೆದಾರರು ಬುಧವಾರಂದು ತಂಡವನ್ನು ಪ್ರಕಟಿಸಿದ್ದಾರೆ. ಶಹೀದ್ ಅಫ್ರಿದಿ ನಾಯಕರಾಗಿದ್ದಾರೆ. ಬ್ಯಾಟ್ಸ್ ಮನ್ ಅಹ್ಮದ್ ಶೆಹಜಾದ್ ಹಾಗೂ ವೇಗಿ ಉಮರ್ ಗುಲ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಬ್ಯಾಟ್ಸ್ ಮನ್ ಸೋಹಿಬ್ ಮಕ್ಸೂದ್ ಹಾಗೂ ಮುಹಮ್ಮದ್ ರಿಜ್ವಾನ್ ಅವರನ್ನು ಕೂಡಾ 15 ಸದಸ್ಯರ ತಂಡದಲ್ಲಿ ಸೇರಿಸಿಕೊಂಡಿಲ್ಲ. ಟೆಸ್ಟ್ ತಂಡದಲ್ಲಿ ಆರಂಭಿಕ ಆಟಗಾರರಾಗಿದ್ದ ಖುರಂ ಮನ್ಜೂರ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದ್ದು, ಮೊದಲ ಬಾರಿಗೆ ಪಾಕಿಸ್ತಾನ ಪರ ಟಿ20 ಪಂದ್ಯವನ್ನಾಡಲಿದ್ದಾರೆ. ಇದೇ ರೀತಿ ಎಡಗೈ ವೇಗಿ ರುಮನ್ ರಯೀಸ್ ಅವರು ಮೊದಲ ಪಂದ್ಯವಾಡಲಿದ್ದಾರೆ.[ವಿಶ್ವ ಟಿ20: ಆಸ್ಟ್ರೇಲಿಯಾ ತಂಡ ಪ್ರಕಟ, ಸ್ಮಿತ್ ಕ್ಯಾಪ್ಟನ್]

ತಂಡದ ಆಯ್ಕೆ ಸಂದರ್ಭದಲ್ಲಿ ವೇಗಿ ಮಹಮ್ಮದ್ ಇರ್ಫಾನ್ ಬಗ್ಗೆ ಭಾರಿ ಚರ್ಚೆ ನಡೆಸಲಾಯಿತು. ಆದರೆ, ಫಿಟ್ನೆಸ್ ಸಮಸ್ಯೆಯಿಂದಾಗಿ ಆಯ್ಕೆಯಾಗಲಿಲ್ಲ ಎಂದು ಮುಖ್ಯ ಆಯ್ಕೆದಾರ ಹರೂನ್ ರಶೀದ್ ಹೇಳಿದ್ದಾರೆ.[ವಿಶ್ವ ಟಿ20 ಸಂಪೂರ್ಣ ವೇಳಾಪಟ್ಟಿ]
2007ರಲ್ಲಿ ಉದ್ಘಾಟನಾ ಟೂರ್ನಿಯಲ್ಲಿ ವಿಶ್ವ ಟಿ20 ಫೈನಲ್ ತಲುಪಿದ್ದ ಪಾಕಿಸ್ತಾನ ಎರಡು ವರ್ಷಗಳ ನಂತರ ಇಂಗ್ಲೆಂಡ್ ನಲ್ಲಿ ಕಪ್ ಎತ್ತಿದ ಸಾಧನೆ ಮಾಡಿತ್ತು. ಆದರೆ, ಬಾಂಗ್ಲಾದೇಶದಲ್ಲಿ ನಡೆದ ಕಳೆದ ವಿಶ್ವ ಟಿ20ಯ ಸೆಮಿಫೈನಲ್ ತಲುಪಲು ವಿಫಲವಾಗಿತ್ತು.
ಪಾಕಿಸ್ತಾನ: ಶಹೀದ್ ಅಫ್ರಿದಿ (ನಾಯಕ), ಖುರಮ್ ಮನ್ಜೂರ್, ಮುಹಮ್ಮದ್ ಹಫೀಜ್, ಶೋಯಿಬ್ ಮಲ್ಲಿಕ್, ಉಮರ್ ಅಕ್ಮಲ್, ಸರ್ಫಾಜ್ ಅಹ್ಮದ್, ಬಾಬರ್ ಅಜಂ, ಇಫ್ತಿಕಾರ್ ಅಹ್ಮದ್, ಎಮಾದ್ ವಾಸಿಮ್, ಅನ್ವರ್ ಅಲಿ, ಮುಹಮ್ಮದ್ ಇರ್ಫಾನ್, ವಹಾಬ್ ರಿಯಾಜ್, ಮೊಹಮ್ಮದ್ ಆಮೀರ್, ಮುಹಮ್ಮದ್ ನವಾಜ್ ಹಾಗೂ ರುಮ್ಮನ್ ರಯೀಸ್ (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications