Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಎಲ್ಟಿ20: ಪಾಕಿಸ್ತಾನ ತಂಡದಲ್ಲಿ ಕಮ್ರಾನ್ ಔಟ್, ಉಮರ್ ಇನ್

ಕರಾಚಿ, ಏಪ್ರಿಲ್ 26: ಜೂನ್ ತಿಂಗಳಿನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟಿ20 ಟೂರ್ನಿಗೆ ಪಾಕಿಸ್ತಾನದ ಆಯ್ಕೆದಾರರು 15 ಮಂದಿ ಸದಸ್ಯರನ್ನು ಪ್ರಕಟಿಸಿದ್ದಾರೆ. ಕಮ್ರಾನ್ ಅಕ್ಮಲ್ ರನ್ನು ತಂಡದಿಂದ ಕೈಬಿಟ್ಟಿದ್ದು, ಉಮ್ರಾನ್ ಅಕ್ಮಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಜೂನ್ 1 ರಿಂದ 18ರ ವರೆಗೆ 18 ದಿನಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ 3 ಕ್ರಿಕೆಟ್ ಮೈದಾನಗಳಲ್ಲಿ ಈ ಪಂದ್ಯಗಳು ನಡೆಯಲಿವೆ. [#CT17 #INDvPAK ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]

Pakistan announce squad for Champions Trophy 2017, recall Umar Akmal

ಭಾರತೀಯ ಕಾಲಮಾನ ಪ್ರಕಾರ ಕ್ರಮವಾಗಿ ಹಗಲು ಪಂದ್ಯ ಮಧ್ಯಾಹ್ನ 3 ಗಂಟೆ ಹಾಗೂ ಹಗಲು /ರಾತ್ರಿ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಜೂನ್ 04ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಿಗದಿಯಾಗಿದೆ. ಆದರೆ, ಆರ್ಥಿಕ ವ್ಯವಹಾರ ಕುದುರದ ಕಾರಣ ಐಸಿಸಿ ಆಯೋಜನೆಯ ಈ ಟೂರ್ನಿಯಲ್ಲಿ ಬಿಸಿಸಿಐಯ ಟೀಂ ಇಂಡಿಯಾ ತಂಡ ಪಾಲ್ಗೊಳ್ಳುವುದು ಅನುಮಾನವಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧ 2-1ರಲ್ಲಿ ಗೆದ್ದ ಪಾಕಿಸ್ತಾನದ ತಂಡದಲ್ಲಿದ್ದ 35ವರ್ಷ ವಯಸ್ಸಿನ ಅಕ್ಮಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡದಿರುವುದು ಅಚ್ಚರಿ ಮೂಡಿಸಿದೆ. ಉಳಿದಂತೆ ಅಜರ್ ಅಲಿ ತಂಡಕ್ಕೆ ಮರಳಿದ್ದಾರೆ.

ಭಾರತ ವಿರುದ್ಧದ ಪಂದ್ಯದ ನಂತರ ಜೂನ್ 7ರಂದು ಬರ್ಮಿಂಗ್ ಹ್ಯಾಮ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ, ಜೂನ್ 12ರಂದು ಶ್ರೀಲಂಕಾ ವಿರುದ್ಧ ಕಾರ್ಡಿಫ್ ನಲ್ಲಿ ಪಂದ್ಯವಾಡಲಿದೆ. ಎ ಗುಂಪಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳಿವೆ.

ತಂಡ: ಸರ್ಫರಾಜ್ ಅಹ್ಮದ್ (ನಾಯಕ), ಅಜರ್ ಅಲಿ, ಅಹ್ಮದ್ ಶೆಹಜಾದ್, ಮೊಹಮ್ಮದ್ ಹಫೀಜ್, ಬಾಬರ್ ಅಜಮ್, ಶೋಯಿಬ್ ಮಲಿಕ್, ಉಮರ್ ಅಕ್ಮಲ್ ಫಖಾರ್ ಜಮಾನ್, ಇಮಾದ್ ವಸೀಂ, ಹಸನ್ ಅಲಿ, ಫಹೀಂ ಅಶ್ರಫ್, ವಹಬ್ ರಿಯಾಜ್, ಮೊಹಮ್ಮದ್ ಅಮೀರ್, ಜುನೈದ್ ಖಾನ್, ಶಬಾದ್ ಖಾನ್.(ಎಎಫ್ ಪಿ)

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+