ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂಬರುವ ಏಷ್ಯಾ ಕಪ್ ಟೂರ್ನಿಗೆ ಸಂಪೂರ್ಣ ಸಿದ್ಧವಾಗಿದೆ. ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಏಷ್ಯಾ ಕಪ್ ಟೂರ್ನಿಗೆ ಪಾಕಿಸ್ತಾನ ಬಾಬರ್ ಅಜಂ ನಾಯಕತ್ವದ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ಮೂಲಕ ತಾನು ಮುಂಬರುವ ಪ್ರತಿಷ್ಠಿತ ಟೂರ್ನಿಗೆ ಸಿದ್ಧ ಎಂದು ಸಾರಿದೆ.
ಪಾಕಿಸ್ತಾನದ ಮಾಜಿ ನಾಯಕ ಪಾಕಿಸ್ತಾನ ಪುರುಷರ ಕ್ರಿಕೆಟ್‌ನ ಆಯ್ಕೆ ಮಂಡಳಿಯ ನೂತನ ಮುಖ್ಯಸ್ಥ ಇನ್‌ಜಮಾಮ್ ಉಲ್ ಹಕ್ ಅಫ್ಘಾನಿಸ್ತಾನ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಗೆ ಹಾಗೂ ಏಷ್ಯಾಕಪ್ ಟೂರ್ನಿಗೆ ತಂಡವನ್ನು ಪ್ರಕಟಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ 18 ಆಟಗಾರರ ತಂಡವನ್ನು ಹಾಗೂ ಏಷ್ಯಾ ಕಪ್‌ಗೆ ಓರ್ವ ಆಟಗಾರನನ್ನು ಹೊರಗಿಟ್ಟು 17 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ. ಸೌದ್ ಶಕೀಲ್ ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಮಾತ್ರವೇ ಆಯ್ಕೆಯಾಗಿದ್ದು ಏಷ್ಯಾಕಪ್‌ನಿಂದ ಹೊರಗುಳಿದ ಆಟಗಾರನಾಗಿದ್ದಾರೆ.

ಶಾನ್ ಮಸೂದ್ ಹಾಗೂ ಇಮದ್ ವಾಸಿಂ ಈ ಸ್ಕ್ವಾಡ್‌ನಲ್ಲಿ ಕಾಣಿಸಿಕೊಳ್ಳದ ಎರಡು ಪ್ರಮುಖ ಹೆಸರುಗಳಾಗಿದೆ. ಇನ್ನು ಯುವ ವೇಗಿ ಇನ್ಸನುಲ್ಲಾಹ್ ಗಾಯದ ಕಾರಣದಿಂದಾಗಿ ಸ್ಥಾನವನ್ನು ಪಡೆದುಕೊಂಡಿಲ್ಲ. ಇನ್ನು ಫಹೀಮ್ ಅಶ್ರಫ್‌ಹೆ ಎರಡು ವರ್ಷಗಳ ಬಳಿಕ ತಂಡದ ಕರೆಬಂದಿದೆ. ಸೌದ್ ಶಕೀಬ್ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಮಾತ್ರವೇ ಆಯ್ಕೆಯಾಗಿದ್ದು ಉಳಿದ ಎಲ್ಲಾ 17 ಆಟಗಾರರು ಏಷ್ಯಾಕಪ್‌ನ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಪಾಕಿಸ್ತಾನ ಸ್ಕ್ವಾಡ್ ಹೀಗಿದೆ
ಆರಂಭಿಕ ಆಟಗಾರರು: ಅಬ್ದುಲ್ಲಾ ಶಫೀಕ್, ಫಖರ್ ಜಮಾನ್ ಮತ್ತು ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ತಯ್ಯಬ್ ತಾಹಿರ್ ಮತ್ತು ಸೌದ್ ಶಕೀಲ್ (ಅಫ್ಘಾನಿಸ್ತಾನ ಸರಣಿಗೆ ಮಾತ್ರ), ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ನವಾಜ್ ಮತ್ತು ಉಸಾಮಾ ಮಿರ್ ಪೇಸ್, ಫಹೀಮ್ ಅಶ್ರಫ್, ಹಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ ಮತ್ತು ಶಾಹೀನ್ ಅಫ್ರಿದಿ
ಏಷ್ಯಾಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನ ತಂಡ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾದಲ್ಲಿ ಆಡಲಿದೆ. ಹೀಗಾಗಿ ಪಾಕಿಸ್ತಾನ ತಂಡ ಆಗಸ್ಟ್ 18ರಂದು ಶ್ರೀಲಂಕಾದಲ್ಲಿ ಒಟ್ಟಾಗಲಿದೆ. ಅದಕ್ಕೂ ಮುನ್ನ ಆಗಸ್ಟ್ 14, 15 ಹಾಗೂ 16ರಂದು ಮೂರು ದಿನಗಳ