Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pakistan: ಚಾಂಪಿಯನ್ಸ್ ಟ್ರೋಫಿಗೆ ಪಾಕ್‌ ತಂಡ ಪ್ರಕಟ: ನಾಲ್ವರು ಆಟಗಾರರು ಕಂ ಬ್ಯಾಕ್‌

ಇನ್ನೇನು ಕೆಲವೇ ದಿನಗಳಲ್ಲಿ ಪಾಕಿಸ್ತಾನ ಆಶ್ರಯದಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ನಡೆಯಲಿದೆ. ಈ ಸರಣಿಗೆ ಭರದ ಸಿದ್ಧತೆಗಳು ನಡೆದಿವೆ. ಈಗಾಗಲೇ ಈ ಟ್ರೋಫಿಗೆ ಎಂಟು ತಂಡಗಳು ಆಯ್ಕೆ ಆಗಿದ್ದು, ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಭಾರೀ ಕುತೂಹಲ ಮೂಡಿಸಿದ್ದ ಪಾಕಿಸ್ತಾನ ತಂಡದ ಪ್ರಕಟವಾಗಿದೆ. ಅಳೆದು ತೂಗಿ ಪಿಸಿಬಿ ಆಯ್ಕೆ ಸಮಿತಿ ಆಟಗಾರರಿಗೆ ಮಣೆ ಹಾಕಿದೆ.

ಶುಕ್ರವಾರ ಸಂಜೆ ಹಾಲಿ ಚಾಂಪಿಯನ್ ಪಾಕಿಸ್ತಾನ ಕೂಡ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ಟೂರ್ನಿಗೆ 4 ಆಟಗಾರರು ಕಂ ಬ್ಯಾಕ್‌ ಮಾಡಿದ್ದಾರೆ. ಕ್ಲಾಸಿಕ್ ಬ್ಯಾಟರ್‌ ಫಖರ್‌ ಜಮಾನ್‌ ಸೇರಿದಂತೆ ಸ್ಟಾರ್ ಆಟಗಾರರು ತಂಡಕ್ಕೆ ಎಂಟ್ರಿ ನೀಡಿದ್ದಾರೆ. ಇವರು ಕಳೆದ ಬಾರಿ ಚಾಂಪಿಯನ್ಸ್‌ ಟ್ರೋಫಿ ನಡೆದಾಗ ಭಾರತದ ವಿರುದ್ಧ ಶತಕ ಬಾರಿಸಿ ಮಿಂಚಿದ್ದರು.

Pakistan Announces Squad for ICC Champions Trophy 2025 Fakhar Zaman and 3 Others Make a Comeback

ಫಹೀಮ್ ಅಶ್ರಫ್, ಖುಷ್ದಿಲ್ ಶಾ ಮತ್ತು ಸೌದ್ ಶಕೀಲ್ ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಸ್ಥಾನ ನೀಡಲಾಗಿದೆ. ಕಳೆದ ಬಾರಿ ಚಾಂಪಿಯನ್ಸ್‌ ಟ್ರೋಫಿ ಆಡಿದ್ದ ಮೂವರು ಆಟಗಾರರು ಈ ಬಾರಿ ಮತ್ತೆ ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಬಾರಿ ಪಾಕ್‌ ಚಾಂಪಿಯನ್ ತಂಡದಲ್ಲಿ ಸ್ಥಾನ ಪಡೆದಿದ್ದ ಬಾಬರ್ ಅಜಮ್, ಫಹೀಮ್ ಅಶ್ರಫ್ ಮತ್ತು ಫಖರ್ ಜಮಾನ್ ಸ್ಥಾನ ಪಡೆದಿದ್ದರು.

ಇನಿಂಗ್ಸ್ ಆರಂಭಿಸುವುದು ಯಾರು?

ಗಾಯದ ಕಾರಣದಿಂದಾಗಿ ಸೈಮ್ ಆಯೂಬ್‌ ಅವರು ಚಾಂಪಿಯನ್ಸ್‌ ಟ್ರೋಫಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಬಾಬರ್ ಅಜಮ್‌ ಹಾಗೂ ಸೌದ್ ಶಕೀಲ್‌, ಫಖಾರ್ ಜಮಾನ್‌ ನಡುವೆ ಇನಿಂಗ್ಸ್‌ ಆರಂಭಿಸುವುದು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಕಳೆದ ಬಾರಿ ಭಾರತದಲ್ಲಿ ಏಕದಿನ ವಿಶ್ವಕಪ್‌ ನಡೆದಾಗ ಪಾಕಿಸ್ತಾನ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿತ್ತು. ಪಾಕ್‌ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಒಟ್ಟು ಮೂರು ಏಕದಿನ ಸರಣಿಗಳಲ್ಲಿಆಡಿದೆ.

Pakistan Announces Squad for ICC Champions Trophy 2025 Fakhar Zaman and 3 Others Make a Comeback

ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಾಕ್‌ 2-1 ರಿಂದ ಸರಣಿಯನ್ನು ಗೆದ್ದಿತ್ತು. ಇನ್ನು ಜಿಂಬಾಬ್ವೆ ವಿರುದ್ಧ ಸರಣಿ ಗೆಲುವಿನ ನಗೆ ಬೀರಿತ್ತು. ಇತ್ತೀಚಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕ್ಲೀನ್‌ ಸ್ವೀಪ್‌ ಸೋಲನ್ನು ಕಂಡಿತ್ತು. ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಪಾಕ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ ನಡುವೆ ತ್ರಿಕೋನ ಸರಣಿಗಳು ನಡೆಯಲಿವೆ. ಈ ಸರಣಿಯು ಫೆಬ್ರವರಿ 8 ರಿಂದ ಫೆಬ್ರವರಿ 14 ರವರೆಗೆ ನಡೆಯಲಿದೆ. ಚಾಂಪಿಯನ್ಸ್‌ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಾಕ್‌, ನ್ಯೂಜಿಲೆಂಡ್ ವಿರುದ್ಧ 19ನೇ ಫೆಬ್ರವರಿಯಲ್ಲಿ ನಡೆಯಲಿದೆ. ಭಾರತ ಹಾಗೂ ಪಾಕ್‌ ನಡುವಣ ಪಂದ್ಯ ಫೆ. 23 ರಂದು ನಡೆಯಲಿದೆ.

ಪಾಕ್‌ ತಂಡ: ಬಾಬರ್ ಅಜಮ್, ಫಖರ್ ಜಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಶ್ದಿಲ್ ಶಾ, ಸಲ್ಮಾನ್ ಅಲಿ ಆಘಾ (ಉಪನಾಯಕ), ಮೊಹಮ್ಮದ್ ರಿಜ್ವಾನ್ (ನಾಯಕ), ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ , ಶಾಹೀನ್ ಶಾ ಅಫ್ರಿದಿ.

Story first published: Friday, January 31, 2025, 22:30 [IST]
Other articles published on Jan 31, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+