ಹೆಲೋ, ಮೌಕಾ, ಮೌಕಾ.. ಕ್ಯಾ ಹುವಾ ಮೌಕೆಕಾ?!
ನವದೆಹಲಿ ,ಮಾ. 30: ಸ್ಟಾರ್ ಸ್ಫೋರ್ಟ್ಸ್ ಪ್ರಚಾರಕ್ಕೆಂದು ರೂಪಿಸಿದ್ದ 'ಮೌಕಾ ಮೌಕಾ' ಜಾಹೀರಾತು ಈಗ ಬಿಸಿಸಿಐಗೆ ತಿರುಗುಬಾಣವಾಗಿ ಪರಿಣಮಿಸಿದೆ. ಆಸೀಸ್ ವಿರುದ್ಧ ಭಾರತ ಸೆಮಿಫೈನಲ್ ನಲ್ಲಿ ಸೋಲು ಒಪ್ಪಿಕೊಂಡ ನಂತರ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕೆಲವರು ಬಿಸಿಸಿಐ ಗೆ ಕರೆ ಮಾಡುತ್ತಿದ್ದಾರೆ.
ಬಿಸಿಸಿಐ ಕಚೇರಿಗೆ ಕರೆ ಮಾಡುವವರು 'ಮೌಕಾ, ಮೌಕಾ, ಕ್ಯಾ ಹುವಾ ಮೌಕೆಕಾ' (ಅವಕಾಶವಂತೆ, ಅವಕಾಶ, ಏನಾಯಿತು ನಿಮ್ಮ ಅವಕಾಶ) ಎಂದು ಕೇಳುತ್ತ ಕಿರಿಕಿರಿ ನೀಡುತ್ತಿದ್ದಾರೆ.[ವಿಶ್ವಕಪ್ ಜರ್ನಿ: ಅಡಿಲೇಡ್ ನ ಅಬ್ಬರದಿಂದ ಸಿಡ್ನಿ ಸೋಲಿನ ತನಕ]
ಭಾರತ-ಪಾಕಿಸ್ತಾನ ವಿಶ್ವಕಪ್ ನಲ್ಲಿ ಎದುರಾದಾಗೆಲ್ಲ ನಮ್ಮ ತಂಡ ಭಾರತವನ್ನು ಸೋಲಿಸುತ್ತದೆ ಎಂಬ ನಂಬಿಕೆಯಲ್ಲಿ ಪಾಕ್ ಅಭಿಮಾನಿ ಮನೆಯಲ್ಲಿ ಪಟಾಕಿ ತಂದಿಟ್ಟುಕೊಳ್ಳುತ್ತಾನೆ. ಆದರೆ ಯಾವ ವಿಶ್ವಕಪ್ ನಲ್ಲೂ ಪಾಕ್ ಗೆ ಭಾರತ ಮಣಿಯಲ್ಲ. ಈ ಅಂಶವನ್ನೇ ಜಾಹೀರಾತಿನಲ್ಲಿ ಹೈಲೈಟ್ ಮಾಡಲಾಗಿತ್ತು.[ವಿಮಾನ ನಿಲ್ದಾಣಕ್ಕೆ ಒಟ್ಟಿಗೆ ಬಂದಿಳಿದ ವಿರಾಟ್-ಅನುಷ್ಕಾ]
ಜಾಹೀರಾತಿನ ಮುಂದುವರಿದ ಭಾಗವಾಗಿ ಬಾಂಗ್ಲಾದೇಶ, ಸೌತ್ ಆಫ್ರಿಕಾ, ಯುಎಇ, ವೆಸ್ಟ್ ಇಂಡೀಸ್ ಅಭಿಮಾನಿಗಳನ್ನು ಬಳಸಿಕೊಂಡ ರೀತಿಯಲ್ಲಿ ತೋರಿಸಿದ್ದ ಜಾಹೀರಾತು ಜನಪ್ರಿಯವಾಗಿತ್ತು. ಆದರೆ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಬಿಸಿಸಿಐ ಗೆ ಬಾಂಗ್ಲಾ ಮತ್ತು ಪಾಕ್ ಕರೆಗಳನ್ನು ಎದುರಿಸುವುದೇ ಸವಾಲಾಗಿ ಪರಿಣಮಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications
