ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಕರೆಸಿಕೊಂಡಿದ್ದೇನು?

ಲಂಡನ್, ಡಿಸೆಂಬರ್, 12: ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಆಟಗಾರರೊಬ್ಬರನ್ನು ತೆಗಳುವ ಭರದಲ್ಲಿ ಆತನ ದೇಶವನ್ನೇ ಹೀಗಳೆದಿದ್ದಾರೆ. ಪಾಕಿಸ್ತಾನದಲ್ಲಿ ಜನಿಸಿದ ಆಟಗಾರನನ್ನು ಸಮರ್ ಸೆಟ್ ತಂಡದ ಬೌಲರ್ ಕ್ರಾಗ್ ಓವರ್ ಟನ್ ನಿಂದನೆ ಮಾಡಿದ್ದಾರೆ.

ಇದಕ್ಕೆ ಶಿಕ್ಷೆಯಾಗಿ ಓವರ್ ಟನ್ ಅವರಿಗೆ ಎರಡು ಪಂದ್ಯಗಳ ನಿಷೇಧ ಹಾಕಲಾಗಿದೆ. ಪಂದ್ಯ ನಡೆಯುತ್ತಿದ್ದ ವೇಳೆ ಪಾಕಿಸ್ತಾನ ಮೂಲದ ಆಟಗಾರೊಬ್ಬರನ್ನು ಓವರ್ ಟನ್ "go back to your own f***ing country" ಎಂದು ಹೇಳಿದ್ದೇ ಇಷ್ಟೆಲ್ಲಾ ವಿವಾದಗಳಿಗೆ ಕಾರಣವಾಗಿದೆ.[ಎರಡು ವರ್ಷ ಬಳಿಕ ಮತ್ತೆ ಕೊಹ್ಲಿ-ಗಂಭೀರ್ ಕಿತ್ತಾಟ!]

england

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಓವರ್ ಟನ್ ಗೆ ಶಿಕ್ಷೆಯನ್ನು ನೀಡಿದೆ. ಸನ್ಸೆಕ್ಸ್ ತಂಡದ ಸ್ಪಿನ್ನರ್ ಅಶರ್ ಜಾದಿ ಅವರನ್ನು ಅಸಹ್ಯವಾಗಿ ಟೀಕೆ ಮಾಡಿದ್ದ ಓವರ್ ಟನ್ ಶಿಕ್ಷೆ ಅನುಭಿಸುತ್ತಿದ್ದಾರೆ. ಸೆಪ್ಟೆಂಬರ್ ನಲ್ಲಿ ನಡೆದ ಪ್ರಕರಣ ಇದೀಗ ಶಿಕ್ಷೆ ನೀಡುವುದರ ಮೂಲಕ ಅಂತ್ಯವಾಗಿದೆ.

ಹೋವ್ ನಲ್ಲಿ ನಡೆದ ಪಂದ್ಯದ ವೇಳೆ ಬೈಗುಳ ಪ್ರಕರಣ ನಡೆದಿದೆ. ಮೈದಾನದಲ್ಲಿದ್ದ ಅಂಪೈರ್ ಗಳು ಮತ್ತು ನಾನ್ ಸ್ಟ್ರೈಕ್ ನಲ್ಲಿದ್ದ ಮೈಕಲ್ ಯಾರ್ಡಿ ಬೈಗುಳಗಳನ್ನು ಕಿವಿಯಾರೇ ಕೇಳಿದ್ದಾರೆ. ಇದಾದ ಮೇಲೆ ಅಂಪೈರ್ ಅಲೆಕ್ಸ್ ವಾರ್ಫ್ ಮತ್ತು ಯಾರ್ಡಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಘಟನೆಯ ವರದಿಯನ್ನು ನೀಡಿದ್ದಾರೆ.

ಆದರೆ ಓವರ್ ಟನ್ ಇದನ್ನು ತಳ್ಳಿಹಾಕಿದ್ದು ಸುಮ್ಮನೇ ಆರೋಪ ಹೊರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ನಿಯಂತ್ರಣ ಮಂಡಳಿ ಶಿಸ್ತು ಕಾಯ್ದುಕೊಳ್ಲೂವಂತೆ ಸ್ಪಷ್ಟ ಆದೇಶ ನೀಡಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X