ವಿಶ್ವಕಪ್‌ನಲ್ಲಿ ಪಾಕ್ ತಂಡದ ಭವಿಷ್ಯ ನುಡಿದ ವಕಾರ್ ಯೂನಿಸ್!

ಲಂಡನ್, ಮೇ 27: ಸರ್ಫರಾಝ್ ಅಹ್ಮದ್ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್ ತಂಡ 1992ರ ಮಾದರಿಯಲ್ಲಿ ಈ ಬಾರಿಯೂ ಅಚ್ಚರಿಯ ಫಲಿತಾಂಶ ನೀಡಲಿದೆ ಎಂದು ಪಾಕ್ ತಂಡದ ಮಾಜಿ ನಾಯಕ ವಕಾರ್ ಯೂನಿಸ್ ಭವಿಷ್ಯ ನುಡಿದಿದ್ದಾರೆ.
2019ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂನರ್ನಿಯ ಲೇಟೆಸ್ಟ್ ಸುದ್ದಿಗಳು
"ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವಕಪ್‌ನಲ್ಲಿ ಟ್ರೋಫಿ ಗೆದ್ದು 27 ವರ್ಷಗಳೇ ಕಳೆದಿದೆ. ಇಷ್ಟು ವರ್ಷಕ್ಕೆ ಇದೇ ಮೊದಲ ಬಾರಿ ಪಾಕಿಸ್ತಾನ ತಂಡ ಈ ಸಲಾ ಚಾಂಪಿಯನ್ಸ್ ಪಟ್ಟಕ್ಕೇರಲಿದೆ ಎಂಬ ಅನುಭವವಾಗುತ್ತದೆ,'' ಎಂದು ವಕಾರ್ ಯೂನಿಸ್ ಹೇಳಿದ್ದಾರೆ.
"ಟೂರ್ನಿಯಲ್ಲಿ ಯಾರೊಬ್ಬರಿಗೂ ನಮ್ಮ ತಂಡದ ಕುರಿತಾಗಿ ಕಾಳಜಿ ಇಲ್ಲ. ನಮ್ಮ ತಂಡ ಯಾವುದೇ ಸದ್ದು ಗದ್ದಲವಿಲ್ಲದೆ ಟೂರ್ನಿಗೆ ಕಾಲಿಟ್ಟಿದೆ. ಆದರೆ, ಒಮ್ಮೆ ಗೆಲುವಿನ ಲಯ ಕಂಡುಕೊಂಡರೆ ನಮ್ಮ ತಂಡ ಟ್ರೋಫಿ ಗೆಲ್ಲುವುದಂತೂ ಖಂಡಿತಾ. ಈ ಹಿಂದೆಯೂ ಇದೇ ರೀತಿ ಗೆದ್ದಿದೆ,'' ಎಂದಿದ್ದಾರೆ.
"1992ರಲ್ಲಿ ತಂಡ ವಿಶ್ವಕಪ್ ಗೆದ್ದಾಗ ನಾನು ತಂಡದ ಜೊತೆಗ ಇರಲಿಲ್ಲ. ಗಾಯದ ಸಮಸ್ಯೆ ಕಾರಣ ಹೊರಗುಳಿದಿದ್ದೆ. ಆದರೆ, ತಂಡ ಟ್ರೋಫಿಯೊಂದಿಗೆ ತಾಯ್ನಾಡಿಗೆ ಹಿಂದಿರುಗಿದ ವೇಳೆ ಇಡೀ ದೇಶವೇ ರಸ್ತೆಗೆ ಇಳಿದು ಅವರನ್ನು ಸ್ವಾಗತಿಸಿತ್ತು,'' ಎಂದು 1992ರ ವಿಶ್ವಕಪ್ ಗೆಲುವಿನ ಸಂಭ್ರಮವನ್ನು ವಕಾರ್ ಸ್ಮರಿಸಿದ್ದಾರೆ.
"ಅಂದು ಎಲ್ಲೆಡೆಯು ಪಾರ್ಟಿ ಮನೆಮಾಡಿತ್ತು. ಅದೊಂದು ಹಬ್ಬದ ಸಂಭ್ರಮ. ಈ ಬಾರಿ ಆ ಸಂಭ್ರಮ ಮರಳುತ್ತದೆ ಎಂದು ಆಶಿಸುತ್ತೇನೆ. ಆದರೆ, ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿರುವುದು ಬಹಳಷ್ಟಿದೆ. ಉತ್ತಮ ಆರಂಭ ಪಡೆಯ ಬೇಕಿದೆ. ಆರಂಭದಲ್ಲೇ ಒಂದೆರಡು ಪಂದ್ಯಗಳನ್ನು ಸೋತರೆ, ಲಯ ಕಂಡುಕೊಳ್ಳಲು ಕಷ್ಟಪಡಬೇಕಾಗುತ್ತದೆ,'' ಎಂದು ಪಾಕಿಸ್ತಾನ ತಂಡದ ಪರ 262 ಏಕದಿನ ಪಂದ್ಯಗಳಲ್ಲಿ 416 ವಿಕೆಟ್‌ಗಳನ್ನು ಪಡೆದಿರುವ ವಕಾರ್ ಹೇಳಿದ್ದಾರೆ.
ರಿವರ್ಸ್ ಸ್ವಿಂಗ್ ಬೌಲಿಂಗ್‌ಗೆ ಹೆಸರುವಾಸಿಯಾದ ವಕಾರ್ ಯೂನಿಸ್ ಪಾಕ್ ತಂಡದ ಪರ 87 ಟೆಸ್ಟ್ ಪಂದ್ಯಗಳಲ್ಲಿ 373 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ 12ನೇ ಆಔರತ್ತಿಯ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ಮೇ 30ರಂದು ಆರಂಭವಾಗಲಿದ್ದು ಪಾಕಿಸ್ತಾನ ತಂಡ ಎರಡು ಬಾರಿಯ ವಿಶ್ವಚಾಂಪಿಯನ್ಸ್ ವೆಸ್ಟ್ ಇಂಡೀಸ್ ವಿರುದ್ಧ ಮೇ 31ರಂದು ತನ್ನ ಅಭಿಯಾನ ಆರಂಭಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications