ವಿಶ್ವಕಪ್: ಇಂಡೊ-ಪಾಕ್ ಪಂದ್ಯದ ಬಗ್ಗೆ ರೈನಾ ಹೇಳಿದ್ದೇನು ಗೊತ್ತಾ?

ಸೌತ್‌ಹ್ಯಾಂಪ್ಟನ್, ಮೇ 31: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಶುರುವಾಗಿ ಅಭಿಮಾನಿಗಳಿಗೆ ಕ್ರಿಕೆಟ್‌ನ ಭರಪೂರ ಮನರಂಜನೆ ನೀಡಲು ಆರಂಭಿಸಿದೆ. ಆದರೆ, ಜೂನ್ 16ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಜಟಾಪಟಿ ವೀಕ್ಷಿಸಲು ಇಡೀ ಕ್ರಿಕೆಟ್ ಜಗತ್ತೇ ಕಾದು ಕುಳಿತಿದೆ.
ಭಾರತ ತಂಡ ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಈವರೆಗೆ ಒಮ್ಮೆಯೂ ಪಾಕಿಸ್ತಾನ ವಿರುದ್ಧ ಸೋಲುಂಡಿಲ್ಲ. 1992ರ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮೊದಲ ಬಾರಿ ಮುಖಾಮುಖಿ ಯಾಗಿದ್ದವು. ಅಂದಿನಿಂದ ಇಂದಿನ ವರೆಗೆ ಒಟ್ಟು ಆರು ಬಾರಿ ಇಂಡೊ-ಪಾಕ್ ಕ್ರಿಕೆಟ್ ಸಮರ ನಡೆದಿದ್ದ, ಟೀಮ್ ಇಂಡಿಯಾ ಎಲ್ಲಾ ಪಂದ್ಯಗಳನ್ನು ಗೆದ್ದು ಬೀಗಿದೆ.
ಇನ್ನು ಇಂಡೊ-ಪಾಕ್ ವಿಶ್ವಕಪ್ ಸಮರ ಕುರಿತಾಗಿ ಮಾತನಾಡಿರುವ ಭಾರತ ತಂಡದಿಂದ ಅವಕಾಶ ವಂಚಿತ ಸ್ಟಾರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ಮಾತನಾಡಿದ್ದು, ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಆರಂಭ ಪಡೆದರೆ ಪಾಕಿಸ್ತಾನಕ್ಕೆ ನಮ್ಮ ವಿರುದ್ಧ ಗೆಲ್ಲುವ ಕಿಂಚಿತ್ತೂ ಅವಕಾಶ ಇರುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಅಜೇಯ ಗೆಲುವಿನ ದಾಖಲೆಯನ್ನು ಭಾರತ ಉಳಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
"ನನ್ನ ಪ್ರಕಾರ ಭಾರತ ತಂಡದ ಯಾವೊಬ್ಬ ಆಟಗಾರನೂ ಈ ಸಂದರ್ಭದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಕುರಿತಾಗಿ ತಲೆ ಕೆಡಿಸಿಕೊಂಡಿರುವುದಿಲ್ಲ. ಏಕೆಂದರೆ, ಇದಕ್ಕೂ ಮೊದಲು ಇರುವಂತಹ ಪಂದ್ಯಗಳಲ್ಲಿ ಜಯ ದಾಖಲಿಸುವುದು ಮುಖ್ಯ. ಒಂದು ವೇಳೆ ಭಾರತ ತಂಡ ಈ ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ ವಿರುದ್ಧ ಪಂದ್ಯ ಸಮಸ್ಯೆಯೇ ಅಲ್ಲ,'' ಎಂದಿದ್ದಾರೆ.
"ಆದರೆ, ಆರಂಭದಲ್ಲೆ ಒಂದೆರಡು ಪಂದ್ಯ ಸೋತರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಒಂದುವೇಳೆ ಮೊದಲ ಮೂರು ಪಂದ್ಯಗಳನ್ನು ಗೆದ್ದರೆ, ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯಗಳ ಗೆಲುವಿನ ದಾಖಲೆಯಲ್ಲಿ ಯಾವುದೇ ಬದಲಾವಣೆ ಖಂಡಿತಾ ಆಗುವುದಿಲ್ಲ. ಪಾಕಿಸ್ತಾನ ತಂಡಕ್ಕೆ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ,'' ಎಂದು ರೈನಾ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
"ನಮ್ಮದು ಅತ್ಯುತ್ತಮ ತಂಡ. ಎಲ್ಲಾ ಆಟಗಾರರು ಉತ್ತಮ ಲಯದಲ್ಲಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲವೂ ಉತ್ತಮವಾಗಿದೆ. ಆದರೂ ಈ ಬಾರಿಯ ವಿಶ್ವಕಪ್‌ನಲ್ಲಿ 9 ಲೀಗ್ ಪಂದ್ಯಗಳನ್ನು ಆಡಬೇಕಿದ್ದು, ಉತ್ತಮ ಆರಂಭ ಪಡೆಯುವುದು ಇಲ್ಲಿ ಬಹಳ ಮುಖ್ಯ ಎಂದು,'' 32 ವರ್ಷದ ಎಡಗೈ ಬ್ಯಾಟ್ಸ್‌ಮನ್ ರೈನಾ ಅಭಿಪ್ರಾಯ ಪಟ್ಟಿದ್ದಾರೆ.
ಭಾರತ ತಂಡ ವಿಶ್ವಕಪ್ ಟೂರ್ನಿಯಲ್ಲಿ ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ವಿಶ್ವಕಪ್ ವೇಳಾಪಟ್ಟಿ / ತಂಡಗಳ ವಿವರ / ಮ್ಯಾಚ್ ವಿನ್ನರ್ ಪ್ರಿಡಿಕ್ಷನ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications