Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನ ನಾಯಕ ಬಾಬರ್ ಅಜಂ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Pakistan captain Babar Azam faces sexual abuse allegation

ಪಾಕಿಸ್ತಾನ ಕ್ರಿಕೆಟ್‌ನ ಯಶಸ್ವಿ ಬ್ಯಾಟ್ಸ್‌ಮನ್ ಹಾಲಿ ನಾಯಕ ಬಾಬರ್ ಅಜಂ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಬಾಬರ್ ಅಜಂ ತನ್ನನ್ನು ಕಳೆದ 10 ವರ್ಷಗಳಿಂದ ಶೋಷನೆ ಮಾಡಿದ್ದು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೋಬ್ಬರು ಆರೋಪವನ್ನು ಮಾಡಿದ್ದಾರೆ.

ಬಾಬರ್ ಅಜಂನ ಕ್ಲಾಸ್‌ಮೇಟ್ ಎಂದು ಹೇಳಿಕೊಂಡ ಮಹಿಳೆ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು ಈ ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಅಜಂ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. 2010ರಲ್ಲ್ಇ ಬಾಬರ್ ಅಜಂ ಮದುವೆಯಾಗುವುದಾಗಿ ನಂಬಿಸಿದ್ದರು. ಆದರೆ ಕ್ರಿಕೆಟಿಗನಾಗಿ ಖ್ಯಾತಿ ಪಡೆದ ನಂತರ ಭರವಸೆಯಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ಆ ಯುವತಿ ಆರೋಪಿಸಿದ್ದಾರೆ.

ಈ ಪತ್ರಿಕಾಗೋಷ್ಠಿಯಲ್ಲಿ ಮಹಿಳೆ ಬಾಬರ್ ಅಜಂ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಸಾಕಷ್ಟು ಹಣಕಾಸಿನ ಸಹಾಯ ಮಾಡಿರುವುದಾಗಿಯೂ ಆ ಮಹಿಳೆ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಆಕೆ ಬಾಬರ್ ಅಜಂ ಸಾಕಷ್ಟು ಬಾರಿ ಲೈಂಗಿಕ ಕಿರುಕುಳವನ್ನು ನೀಡಿದ್ದು ಪೊಲೀಸರಿಗೆ ದೂರು ನೀಡಲು ಹೋದಾಗ ಜೀವಬೆದರಿಕೆಯನ್ನೂ ಹಾಕಿರುವುದಾಗಿ ಆರೋಪ ಮಾಡಿದ್ದಾರೆ.

ಪಾಕಿಸ್ತಾನದ ಪತ್ರಕರ್ತ ಸಾಜ್ ಸಿದ್ದೀಕ್ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಮಡಿದ್ದು ಇದರಲ್ಲಿ ಮಹಿಳೆ ಈ ಬಗ್ಗೆ ಆರೋಪವನ್ನು ಮಾಡಿದ್ದಾರೆ. "ಆತ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ, ನನ್ನನ್ನು ಗರ್ಭವತಿಯನ್ನಾಗಿ ಮಾಡಿದ್ದ, ನನಗೆ ಹಲ್ಲೆಯನ್ನು ನಡೆಸಿದ್ದು ನನಗೆ ಬೆದರಿಕೆಯನ್ನು ಒಡ್ಡಿ ನನ್ನನ್ನು ಬಳಸಿಕೊಂಡಿದ್ದ" ಎಂದು ಆರೋಪವನ್ನು ಮಾಡಿದ್ದಾರೆ.

ಬಾಬರ್ ಅಜಂ ಸದ್ಯ ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ 14 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ. ಆತಿಥೇಯ ನ್ಯೂಜಿಲೆಂಡ್ ತಂಡದ ವಿರುದ್ಧ ಮೊದಲಿಗೆ ಟಿ20 ಸರಣಿಯಲ್ಲಿ ಪಾಕ್ ತಂಡವನ್ನು ಮುನ್ನಡೆಸಲಿದ್ದಾರೆ. ಸೀಮಿತ ಓವರ್‌ಗಳ ನಾಯಕನಾಗಿದ್ದ ಬಾಬರ್ ಅಜಂ ಕೀವಿಸ್ ವಿರುದ್ಧದ ಸರಣಿಯಲ್ಲಿ ಟೆಸ್ಟ್ ತಂಡಕ್ಕೂ ನಾಯಕನಾಗಿ ಆಯ್ಕೆಯಾಗಿದ್ದಾರೆ. ಬಾಬರ್ ಅಜಂ ವಿರುದ್ಧ ಕೇಳಿ ಬಂದಿರುವ ಈ ಗಂಭೀರ ಪ್ರಕರಣ ಮುಂದೆ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Sunday, November 29, 2020, 10:58 [IST]
Other articles published on Nov 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+