ಏನ್ ಗುರು ಬಾಯಿಗೆ ಬಂದು ಬಿಟ್ಟಿತ್ತು: ಪಾಕ್‌ಗೆ ಪ್ರಯಾಸದ ಜಯ
ಕೊಲಂಬೊ: ಟಿ20 ವಿಶ್ವಕಪ್‌ನ ಉದ್ಘಾಟನಾ ಪಂದ್ಯವೇ ರೋಚಕತೆ ಇಂದ ಕೂಡಿತ್ತು. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಪ್ರಯಾಸದ ಜಯ ಸಾಧಿಸಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಪಾಕ್ 3 ವಿಕೆಟ್‌ಗಳ ಗೆಲುವು ದಾಖಲಿಸಿ, ಶುಭಾರಂಭ ಮಾಡಿದೆ.
148 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡದ ಆರಂಭ ಸಾಹಿಬ್‌ಜಾದಾ ಫರ್ಹಾನ್ ಹಾಗೂ ಸೈಮ್ ಅಯೂಬ್ ಹಾಗೂ ಸಲ್ಮಾನ್ ಅಲಿ ಅಘಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಪವರ್ ಪ್ಲೇನಲ್ಲಿ ಪಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸಾಹಿಬ್‌ಜಾದಾ ಫರ್ಹಾನ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 47 ರನ್ ಸಿಡಿಸಿ ಔಟ್ ಆದರು.

ಭರವಸೆಯ ಬ್ಯಾಟರ್ ಬಾಬರ್ ಅಜಮ್ 15, ಉಸ್ಮಾನ್ ಖವಾಜ 0, ಶಹಬಾದ್ ಖಾನ್ 8, ಮೊಹಮ್ಮದ್ ನವಾಜ್ 8 ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಪಾಕ್ ಗೆಲುವಿಗೆ 12 ಎಸೆತಗಳಲ್ಲಿ 29 ರನ್ ಅವಶ್ಯಕತೆ ಇತ್ತು. ಈ ವೇಳೆ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಫಹೀಮ್ ಅಶ್ರಫ್ 19ನೇ ಓವರ್‌ನಲ್ಲಿ 24 ರನ್ ಸಿಡಿಸಿದರು. ಪರಿಣಾಮ ಒತ್ತಡವನ್ನು ಮೆಟ್ಟಿನಿಂತರು. ಕೊನೆಯ ಓವರ್‌ನಲ್ಲಿ ಬೇಕಿದ್ದ 5 ರನ್‌ಗಳನ್ನು ಬಾರಿಸಿದ ಪಾಕ್ ಆರ್ಭಟಿಸಿತು. ಈ ಮೂಲಕ ಪಾಕ್ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದೆ.
ಸ್ಕಾಟ್ ಜವಾಬ್ದಾರಿಯುತ ಆಟ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನೆದರ್ಲ್ಯಾಂಡ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರು ಉತ್ತಮ ಜೊತೆಯಾಟದ ಕಾಣಿಕೆ ನೀಡಲಿಲ್ಲ. ಪಾಕ್ ಬೌಲರ್‌ಗಳ ಬಿಗುವಿನ ದಾಳಿಯನ್ನು ಎದುರಿಸುವಲ್ಲಿ ನೆದರ್ಲ್ಯಾಂಡ್ಸ್ ಬ್ಯಾಟರ್‌ಗಳು ಆರಂಭದಲ್ಲಿ ಎಡವಿದರು. ನೆದರ್ಲ್ಯಾಂಡ್ಸ್ ಪವರ್ ಪ್ಲೇನಲ್ಲಿ ಮ್ಯಾಕ್ಸ್ ಒ'ಡೌಡ್ ಹಾಗೂ ಮೈಕೆಲ್ ಲೆವಿಟ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. 3ನೇ ವಿಕೆಟ್‌ಗೆ ಬಾಸ್ ಡಿ ಲೀಡೆ (30) ಹಾಗೂ ಕಾಲಿನ್ ಅಕರ್ಮನ್ (20) ಜೋಡಿ ಪಾಕ್ ಬೌಲರ್‌ಗಳನ್ನು ಕೊಂಚ ಕಾಡಿತು. ಅಲ್ಲದೆ 22 ಎಸೆತಗಳಲ್ಲಿ 34 ರನ್ ಸೇರಿಸಿತು.
ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಆಟಗಾರ ಸ್ಕಾಟ್ ಎಡ್ವರ್ಡ್ಸ್ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 37 ರನ್ ಸಿಡಿಸಿ ಔಟ್ ಆದರು. ಉಳಿದಂತೆ ಆರ್ಯನ್ ದತ್ 13 ರನ್ ಬಾರಿಸಿದರು. ಅಂತಿಮವಾಗಿ ನೆದರ್ಲ್ಯಾಂಡ್ಸ್ 147 ರನ್‌ಗಳಿಗೆ ಆಲೌಟ್ ಆಯಿತು.
ಪಾಕ್ ತಂಡದ ಸಲ್ಮಾನ್ ಮಿರ್ಜಾ 3, ಮೊಹಮ್ಮದ್ ನವಾಜ್, ಅಬ್ರಾರ್ ಅಹ್ಮದ್, ಸೈಮ್ ಅಯೂಬ್ ತಲಾ 2 ವಿಕೆಟ್ ಕಬಳಿಸಿದರು. ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಪಾಕ್ ತಂಡದ ಫಹೀಮ್ ಅರ್ಶಫ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಪಾಕ್ ಮುಂದಿನ ಪಂದ್ಯವನ್ನು ಫೆ.10 ರಂದು ಅಮೆರಿಕ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications