For Quick Alerts
ALLOW NOTIFICATIONS  
For Daily Alerts
 

U-19 Asia Cup Final: ಫೈನಲ್‌ನಲ್ಲಿ ಮುಗ್ಗರಿಸಿದ ಆಯುಷ್ ಮಾತ್ರೆ ಪಡೆ

ದುಬೈ: ಟೀಮ್ ಇಂಡಿಯಾ ಅಂಡರ್-19 ಏಷ್ಯಾ ಕಪ್‌ ಏಕದಿನ ಫೈನಲ್‌ ಪಂದ್ಯದಲ್ಲಿ ನಿರಾಸೆ ಕಂಡಿದೆ. ಪಾಕಿಸ್ತಾನ ತಂಡ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟುವಲ್ಲಿ ಆಯುಷ್‌ ಮಾತ್ರೆ ಪಡೆ ವಿಫಲವಾಗಿದೆ. ಪರಿಣಾಮ ಪಾಕಿಸ್ತಾನ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಹಮ್ಜಾ ಜಹೂರ್ ಹಾಗೂ ಸಮೀರ್ ಮಿನ್ಹಾಸ್ ತಂಡಕ್ಕೆ 31 ರನ್‌ ಕಾಣಿಕೆ ನೀಡಿದರು. ಎರಡನೇ ವಿಕೆಟ್‌ಗೆ ಸಮೀರ್ ಮಿನ್ಹಾಸ್ ಮತ್ತು ಉಸ್ಮಾನ್ ಖಾನ್‌ (35) ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 2ನೇ ವಿಕೆಟ್‌ಗೆ 92 ರನ್‌ ಸೇರಿಸಿತು.

Pakistan Clinch U-19 Asia Cup Title with Dominant 191-Run Victory Over India in Dubai Final

3ನೇ ವಿಕೆಟ್‌ಗೆ ಸಮೀರ್ ಮಿನ್ಹಾಸ್ ಮತ್ತು ಅಹ್ಮದ್‌ ಹುಸೇನ್‌ ಜೋಡಿ ಸೊಗಸಾದ ಆಟದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಈ ಜೋಡಿ 125 ಎಸೆತಗಳಲ್ಲಿ 137 ರನ್‌ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿತು. ಈ ವೇಳೆ ಅಹ್ಮದ್‌ 56 ರನ್‌ ಬಾರಿಸಿ ಔಟ್ ಆದರು. ಆರಂಭಿಕ ಸಮೀರ್ ಮಿನ್ಹಾಸ್ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿತು. ಈ ಜೋಡಿ 113 ಎಸೆತಗಳಲ್ಲಿ 17 ಬೌಂಡರಿ, 9 ಸಿಕ್ಸರ್ ಸೇರಿದಂತೆ 172 ರನ್‌ ಬಾರಿಸಿ ಔಟ್ ಆದರು.

ನಾಯಕ ಫರ್ಹಾನ್‌ ಯೂಸುಫ್‌ ತಂಡಕ್ಕೆ 19 ರನ್‌ ಕಾಣಿಕೆ ನೀಡಿದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಪಾಕ್‌ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 347 ರನ್‌ ಸೇರಿಸಿತು. ಭಾರತದ ಪರ ದೀಪೇಶ್ ದೇವೇಂದ್ರನ್ 3 ವಿಕೆಟ್‌ ಪಡೆದರು.

ರನ್‌ ಬರ

ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಆರಂಭ ಕಳಪೆಯಾಗಿತ್ತು. ಯಾವೊಬ್ಬ ಬ್ಯಾಟರ್‌ ನೆಲಕಚ್ಚಿನಿಂತು ಬ್ಯಾಟ್ ಮಾಡಲಿಲ್ಲ. ಆರಂಭಿಕ ವೈಭವ್ ಸೂರ್ಯವಂಶಿ ತಮ್ಮ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 10 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ನೆರವಿನಿಂದ 26 ರನ್ ಬಾರಿಸಿ ಔಟ್ ಆದರು. ನಾಯಕ ಆಯುಷ್ ಮಾತ್ರೆ ಒತ್ತಡ ಮೆಟ್ಟಿನಿಂತು ಬ್ಯಾಟ್ ಮಾಡಲಿಲ್ಲ. ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಆರನ್ ಜಾರ್ಜ್ (16) ಬೇಗ ಬೌಟ್ ಆದರು. ಕೆಳ ಕ್ರಮಾಂಕದಲ್ಲಿ ಅಭಿಗ್ಯಾನ್ ಕುಂಡು (13) ಕೊಂಚ ಹೋರಾಟ ನಡೆಸಿದರು. ಖಿಲನ್‌ ಪಟೇಲ್‌ (19), ದೀಪೇಶ್ ದೇವೇಂದ್ರನ್ 16 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ 36 ರನ್‌ ಸಿಡಿಸಿದರು. ಅಂತಿಮವಾಗಿ ಭಾರತ 156 ರನ್‌ಗಳಿಗೆ ಆಲೌಟ್ ಆಯಿತು. ಪಾಕ್‌ ಪರ ಅಲಿ ರಾಜ್ 4 ವಿಕೆಟ್‌ ಕಬಳಿಸಿದರು.

Story first published: Sunday, December 21, 2025, 17:51 [IST]
Other articles published on Dec 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+