PAK vs ENG Test: ತವರಿನಲ್ಲಿ ಅಬ್ಬರಿಸಿದ ಪಾಕ್: ಇಂಗ್ಲೆಂಡ್‌ಗೆ ಸೋಲು
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯಿತು. ಈ ಪಂದ್ಯದಲ್ಲಿ ಪಾಕ್ ತಂಡ 9 ವಿಕೆಟ್ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದು ಕೊಂಡಿದೆ.
ಶನಿವಾರ ನಡೆದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 24 ರನ್‌ಗಳಿಂದ ಆಟ ಮುಂದುವರಿಸಿ 112 ರನ್ ಸೇರಿಸಿ ಆಲೌಟ್ ಆಯಿತು. ಅಲ್ಪ ಗುರಿಯನ್ನು ಬೆನ್ನಟ್ಟಿದ ಪಾಕ್ ಒಂದು ವಿಕೆಟ್ ನಷ್ಟಕ್ಕೆ 37 ರನ್ ಸೇರಿಸಿ ಪಂದ್ಯ ಹಾಗೂ ಸರಣಿಯನ್ನು ಗೆದ್ದು ಕೊಂಡಿತು.

ಪಾಕ್‌ಗೆ ಸರಣಿ ಗೆಲುವು
ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 267 ರನ್‌ಗೆ ಆಲೌಟ್ ಆಯಿತು. ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 344 ರನ್ ಸೇರಿಸಿತು. ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 112 ಅಂಕಗಳಿಗೆ ಸರ್ವಪತನ ಹೊಂದಿತು. ಗುರಿಯನ್ನು ಬೆನ್ನಟ್ಟಿದ ಪಾಕ್ ಒಂದು ವಿಕೆಟ್ ಕಳೆದು ಕೊಂಡು 37 ರನ್ ಸೇರಿಸಿತು. ಇಂಗ್ಲೆಂಡ್ ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್ ಹಾಗೂ 47 ರನ್‌ಗಳಿಂದ ಗೆಲುವು ದಾಖಲಿಸಿತ್ತು. ಎರಡನೇ ಟೆಸ್ಟ್‌ನ್ನು ಪಾಕ್ 152 ರನ್‌ಗಳಿಂದ ಗೆಲುವು ದಾಖಲಿಸಿತ್ತು. ಮೂರನೇ ಹಾಗೂ ನಿರ್ಣಾಯಕ ಕೊನೆಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 9 ವಿಕೆಟ್ ಗೆದ್ದು ಸರಣಿಯನ್ನು ವಶಕ್ಕೆ ಪಡೆದಿದೆ.
ಇಂಗ್ಲೆಂಡ್ ಪರ ಅನುಭವಿ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಕೊಂಚ ಪಾಕ್ ಬೌಲರ್‌ಗಳನ್ನು ಕಾಡಿದರು. ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿರುವ ಜೋ ರೂಟ್ ಮಹತ್ವದ ಪಂದ್ಯದಲ್ಲಿ ತಂಡಕ್ಕೆ ಆಧಾರವಾಗಲಿಲ್ಲ. ಇನ್ನು ಭರವಸೆಯ ಆಟಗಾರ ಹ್ಯಾರಿ ಬ್ರೂಕ್ ಸಹ ಜವಾಬ್ದಾರಿ ಮರೆತರು. ರೂಟ್ 33, ಬ್ರೂಕ್ 26 ರನ್‌ಗಳಿಗೆ ಆಟ ಮುಗಿಸಿದರು.
ಪಾಕ್ ಪರ ನೋಮನ್ ಅಲಿ ಹಾಗೂ ಸಾಜಿದ್ ಖಾನ್ ಮೊನಚಾದ ದಾಳಿಯನ್ನು ಸಂಘಟಿಸಿ ವಿಕೆಟ್ ಬೇಟೆ ನಡೆಸಿದರು. ನೋಮನ್ ಅಲಿ 18.2 ಓವರ್ ಬೌಲಿಂಗ್ ನಡೆಸಿ 42 ರನ್ ನೀಡಿ 6 ವಿಕೆಟ್ ಕಬಳಿಸಿದರು. ಸಾಜಿದ್ ಖಾನ್ 69 ರನ್ ನೀಡಿ 4 ವಿಕೆಟ್ ಪಡೆದರು.
ಅಲ್ಪ ಗುರಿಯನ್ನು ಬೆನ್ನಟ್ಟಿದ ಪಾಕ್ ತಂಡದ ಅಬ್ದುಲ್ ಶಫೀಕ್ ಹಾಗೂ ಶಾನ್ ಮಸೂದ್ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದರು. ಸೌದ್ ಶಕೀಲ್ ಅವರಿಗೆ ಪಂದ್ಯ ಶ್ರೇಷ್ಠ, ಸಜೀದ್ ಖಾನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದೆ.
ಪಾಕ್‌ಗೆ ಬಡ್ತಿ
ಸರಣಿಯಲ್ಲಿ ಅಮೋಘ ಗೆಲುವು ದಾಖಲಿಸಿರುವ ಪಾಕಿಸ್ತಾನ ಆಡಿರುವ 10 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿದೆ. ಅಲ್ಲದೆ ಗೆಲುವಿನ ಶೇಕಡಾವಾರು 33.33 ಅಂಕಗಳನ್ನು ಹೊಂದಿದ್ದು ಏಳನೇ ಸ್ಥಾನದಲ್ಲಿದೆ. ಸರಣಿಯಲ್ಲಿ ಸೋಲು ಕಂಡಿರುವ ಇಂಗ್ಲೆಂಡ್ ಗೆಲುವಿನ ಶೇಕಡಾವಾರು 40.79 ಅಂಕಗಳೊಂದಿಗೆ ಆರನೇ ಸ್ಥಾನವನ್ನು ಪಡೆದಿದೆ. ಟೀಮ್ ಇಂಡಿಯಾ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಭಾರತದ ಶೇಕಡಾವಾರು 62.82 ಆಗಿದ್ದು, ಆಸ್ಟ್ರೇಲಿಯಾ ಗೆಲುವಿನ ಶೇಕಡಾವಾರು 62.50 ಆಗಿದೆ. ಈ ಪಟ್ಟಿಯಲ್ಲಿ ಲಂಕಾ ಮೂರನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications