ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು: ನಾಯಕ ಬಾಬರ್ ಅಜಂ ಸ್ಥಾನ ಅಪಾಯದಲ್ಲಿ!

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರನ್ನು ವಜಾಗೊಳಿಸಿದ್ದು, ನೂತನ ಅಧ್ಯಕ್ಷರನ್ನಾಗಿ ನಜಮ್ ಸೇಥಿ ಅವರನ್ನು ನೇಮಿಸಲಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋಲನುಭವಿಸಿದ ಬಳಿಕ ತಂಡದಲ್ಲಿ ಹಲವು ಪ್ರಮುಖ ಬದಲಾವಣೆಯಾಗುವ ಸಾಧ್ಯತೆ ಇದೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಸೋಲಿನ ನಂತರ, ಪಾಕಿಸ್ತಾನ ಮೊದಲ ಬಾರಿಗೆ ತವರು ನೆಲದಲ್ಲಿ 3-0 ಅಂತರದಲ್ಲಿ ವೈಟ್‌ವಾಶ್ ಅನುಭವಿಸಿತು. ಮುಖ್ಯ ಕೋಚ್ ಸಕ್ಲೇನ್ ಮುಷ್ತಾಕ್ ಮತ್ತು ನಾಯಕ ಬಾಬರ್ ಅಜಮ್ ಪಿಸಿಬಿ ಅಧಿಕಾರಿಗಳೊಂದಿಗೆ ನಿರ್ಣಾಯಕ ಸಭೆಯಲ್ಲಿ ಭಾಗವಹಿಸಲು ಲಾಹೋರ್‌ಗೆ ತೆರಳಿದರು. ಸಭೆಯಲ್ಲಿ ಮುಖ್ಯ ಆಯ್ಕೆಗಾರ ಮೊಹಮ್ಮದ್ ವಾಸಿಂ ಕೂಡ ಭಾಗವಹಿಸಿದ್ದರು.
ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ, ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಸರಣಿ ಸೋಲಿನ ಹಿಂದಿನ ವಿವರಗಳನ್ನು ಅಧ್ಯಕ್ಷರಿಗೆ ವಿವರಿಸಲಾಯಿತು. ಸರಣಿಯ ಅವಧಿಯಲ್ಲಿ ಮಾಡಿದ ಆಯ್ಕೆಗಳ ಬಗ್ಗೆ ರಾಜಾ ತನ್ನ ನಿರಾಸೆ ವ್ಯಕ್ತಪಡಿಸಿದರೆ, ಬಾಬರ್ ತನ್ನ ಮೊದಲ ಆಯ್ಕೆಯ ವೇಗದ ಬೌಲರ್ ಗಾಯಗಳ ಕಾರಣ ನೀಡಿದರು.
ಗಡಾಫಿ ಸ್ಟೇಡಿಯಂನಲ್ಲಿ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಅವರ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು, ಇದರಲ್ಲಿ ಮುಖ್ಯ ಆಯ್ಕೆಗಾರ ಮೊಹಮ್ಮದ್ ವಾಸಿಂ ಭಾಗವಹಿಸಿದ್ದರು. ಮೂರು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ, ತಂಡದ ಪ್ರತಿಯೊಂದು ಅಂಶ, ಆಯ್ಕೆ ವಿಷಯಗಳು, ನಾಯಕತ್ವ ಮತ್ತು ಕೋಚ್ ಸಕ್ಲೇನ್ ಪಾತ್ರದ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಯಿತು.

ಬೌಲರ್‌ಗಳು ಗಾಯಗೊಂಡಿದ್ದು ಸೋಲಿಗೆ ಕಾರಣ!
ಪಾಕಿಸ್ತಾನ ತಂಡದ ಮೂವರು ಪ್ರಮುಖ ವೇಗಿಗಳಾದ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ನಸೀಮ್ ಷಾ ಅವರು ಗಾಯಗೊಂಡಿದ್ದು ತಂಡದ ಯೋಜನೆಗಳ ಮೇಲೆ ಪರಿಣಾಮ ಬೀರಿತು. ಮೂವರು ಬೌಲರ್ ಅಲಭ್ಯತೆ ತಂಡದ ಬೌಲಿಂಗ್ ವಿಭಾಗವನ್ನು ದುರ್ಬಲಗೊಳಿಸಿತು ಎಂದು ಬಾಬರ್ ಸಭೆಯಲ್ಲಿ ತಿಳಿಸಿದರು.
ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ಪ್ರಮುಖ ಟೆಸ್ಟ್ ತಂಡಗಳನ್ನು ಎದುರಿಸುವ ಗುಣಮಟ್ಟ ಪಾಕಿಸ್ತಾನಕ್ಕೆ ಇಲ್ಲ ಎಂದು ಬಾಬರ್ ಅಜಂ ಸಭೆಯಲ್ಲಿ ಹೇಳಿದರು ಎನ್ನಲಾಗಿದೆ. ಡಿಸೆಂಬರ್ 26 ರಿಂದ ಎರಡು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲು ನ್ಯೂಜಿಲೆಂಡ್ ಪಾಕಿಸ್ತಾನಕ್ಕೆ ತೆರಳಲಿದೆ.
ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೆ ಪಾಕಿಸ್ತಾನ ಬಹಿಷ್ಕಾರ ಹಾಕುವ ಬಗ್ಗೆ ನಿರ್ಧರಿಸಿಲ್ಲ ಎಂದ ಪಿಸಿಬಿ

2023ರ ಜುಲೈನಲ್ಲಿ ನಾಯಕತ್ವ ಬದಲಾವಣೆ
ಬಾಬರ್ ಅಜಮ್ ಟೆಸ್ಟ್ ನಾಯಕತ್ವಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಬಾಬರ್ ಮುಂದಿನ ದಿನಗಳಲ್ಲಿ ಏಕದಿನ ಮತ್ತು ಟಿ20 ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC) ಫೈನಲ್ ಮುಗಿದ ಬಳಿಕ, ಬಾಬರ್ ಅಜಂ ಟೆಸ್ಟ್ ನಾಯಕತ್ವ ತೊರೆಯಲಿದ್ದಾರೆ ಎಂದು ಹೇಳಲಾಗಿದೆ.
ತವರಿನಲ್ಲಿ ಸತತವಾಗಿ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಸೋತ ಮೊದಲ ನಾಯಕ ಎನ್ನುವ ಕೆಟ್ಟ ದಾಖಲೆ ಮಾಡಿದ್ದಾರೆ. 2023ರ ಜುಲೈನಲ್ಲಿ ಪಾಕಿಸ್ತಾನ ಟೆಸ್ಟ್ ನಾಯಕನಾಗಿ ಶಾನ್ ಮಸೂದ್ ಅಥವಾ ಮೊಹಮ್ಮದ್ ರಿಜ್ವಾನ್ ನೇಮಕವಾಗುವ ಸಾಧ್ಯತೆ ಇದೆ.

ಕೋಚ್ ಕೂಡ ಬದಲಾವಣೆ
ಸಭೆಯ ಅವಧಿಯಲ್ಲಿ, ಸಕ್ಲೇನ್ ಮುಷ್ತಾಕ್ ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಂತರ ಜನವರಿ 2023 ರಲ್ಲಿ ಮುಖ್ಯ ತರಬೇತುದಾರನ ಪಾತ್ರವನ್ನು ತೊರೆಯಲು ಬಯಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ.
ಮಿಸ್ಬಾ-ಉಲ್-ಹಕ್ ಅವರ ರಾಜೀನಾಮೆಯ ನಂತರ ಮಧ್ಯಂತರ ಆಧಾರದ ಮೇಲೆ ಸಕ್ಲೇನ್ ಸೆಪ್ಟೆಂಬರ್ 2021 ರಲ್ಲಿ ಕೋಚ್ ಆಗಿ ನೇಮಕವಾದರು. ಫೆಬ್ರವರಿ 2022 ರಲ್ಲಿ ಅವರನ್ನು ಖಾಯಂ ಮುಖ್ಯ ಕೋಚ್ ಆಗಿ ಅಂತಿಮಗೊಳಿಸಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications