ಟಿ20 ಕ್ರಿಕೆಟ್‌ನಲ್ಲಿ ಬೇಡವಾದ ದಾಖಲೆ ಬರೆದ ಪಾಕಿಸ್ತಾನ
ಟಿ20 ವಿಶ್ವಕಪ್‌ನ ಸೂಪರ್ 8 ಹಂತದ ಪಂದ್ಯಗಳು ನಡೆಯುತ್ತಿವೆ. ಶನಿವಾರ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಬೇಕಿತ್ತು. ಕೊಲಂಬೊದಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಬಹುವಾಗಿ ಕಾಟ ನೀಡಿದೆ. ಇದರಿಂದ ಪಂದ್ಯದಲ್ಲಿ ಒಂದೇ ಒಂದು ಎಸೆತ ಕಾಣದೇ ರದ್ದಾಯಿತು. ಈ ಪಂದ್ಯ ರದ್ದಾಗುತ್ತಿದ್ದಂತೆ ಪಾಕಿಸ್ತಾನ ವಿಚಿತ್ರವಾದ ದಾಖಲೆಯನ್ನು ನಿರ್ಮಿಸಿದೆ. ಬೇಡವಾದ ದಾಖಲೆಯನ್ನು ನಿರ್ಮಿಸಿದ ಪಾಕ್ ಈಗ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ಟಿ20 ವಿಶ್ವಕಪ್‌ನ ಮೊದಲ ಸೂಪರ್ 8 ಪಂದ್ಯ ಫೆಬ್ರವರಿ 21 ರಂದು ಕೊಲಂಬೊದಲ್ಲಿ ನಡೆಯಬೇಕಿತ್ತು. ಈ ಪಂದ್ಯಕ್ಕೆ ಮಳೆ ಬಿಟ್ಟು ಬಿಡದೆ ಸುರಿದಿದ್ದರಿಂದ ಪಂದ್ಯ ರದ್ದಾಯಿತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯ ರದ್ದಾಗುತ್ತಿದ್ದಂತೆ ಪಾಕ್ ಬೇಡವಾದ ದಾಖಲೆಯನ್ನು ಬರೆದಿದೆ. ಈ ಮೂಲಕ ಪಾಕ್ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರದ್ದಾದ ಪಂದ್ಯಗಳು ರದ್ದಾದ ದಾಖಲೆಯನ್ನು ಹೊಂದಿದೆ.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಆಡಿದ ಒಟ್ಟು ಏಳು ಪಂದ್ಯಗಳು ರದ್ದಾಗಿವೆ. ಈ ಮೂಲಕ ಪಾಕಿಸ್ತಾನ, ಐರ್ಲೆಂಡ್‌ನ ದಾಖಲೆಯನ್ನು ಅಳಿಸಿ ಹಾಕಿದೆ. ಐರ್ಲೆಂಡ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ರದ್ದಾಗಿದೆ. ಈಗ ಈ ದಾಖಲೆ
ಪಾಕಿಸ್ತಾನವು ಈಗ ಸ್ವರೂಪದಲ್ಲಿ ಒಟ್ಟು ಏಳು ರದ್ದಾದ ಪಂದ್ಯಗಳನ್ನು ಹೊಂದಿದೆ. ಇದು ಐರ್ಲೆಂಡ್‌ನ ದಾಖಲೆಯನ್ನು ಮುರಿಯುತ್ತದೆ. ಐರ್ಲೆಂಡ್ ಇಲ್ಲಿಯವರೆಗೆ ಆರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ರದ್ದುಪಡಿಸಿದೆ. ಹೀಗಾಗಿ, ಪಾಕಿಸ್ತಾನವು ವಿಚಿತ್ರ ದಾಖಲೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಈ ತಂಡದ ಟಿ20 ಪಂದ್ಯಗಳು ಅತಿ ಹೆಚ್ಚು ರದ್ದಾಗಿವೆ
ಪಾಕಿಸ್ತಾನ - 7 ಪಂದ್ಯ
ಐರ್ಲೆಂಡ್ - 6 ಪಂದ್ಯ
ನ್ಯೂಜಿಲೆಂಡ್ - 6 ಪಂದ್ಯ
ಭಾರತ - 4 ಪಂದ್ಯ
ನೆದರ್ಲ್ಯಾಂಡ್ಸ್ - 4 ಪಂದ್ಯ
ಮಳೆಯಿಂದಾಗಿ ಪಂದ್ಯ ರದ್ದಾದರೆ ಯಾರಿಗೆ ಎಷ್ಟು ಪಾಯಿಂಟ್?
ಸೂಪರ್ 8 ಹಂತದ ಮೊದಲ ಪಂದ್ಯ ಮಳೆಗೆ ಆಹುತಿಯಾಗಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಆಡಬೇಕಿತ್ತು. ಹೀಗಾಗಿ ಈ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗಿದೆ.
ಪಾಕ್ ತಂಡದ ಮುಂದಿನ ಪಂದ್ಯಗಳು ಯಾವಾಗ?
ಸೂಪರ್ 8 ನಲ್ಲಿ ಪಾಕಿಸ್ತಾನದ ಎರಡನೇ ಪಂದ್ಯ ಫೆಬ್ರವರಿ 24 ರಂದು ಇಂಗ್ಲೆಂಡ್ ವಿರುದ್ಧ, ಮೂರನೇ ಪಂದ್ಯ ಫೆಬ್ರವರಿ 28 ರಂದು ಶ್ರೀಲಂಕಾ ವಿರುದ್ಧ ಆಡಬೇಕಿದೆ. ಈ ಎರಡೂ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಪಾಕಿಸ್ತಾನ ತಂಡ ಸೆಮಿಫೈನಲ್ ಹಂತವನ್ನು ಪ್ರವೇಶಿಸಬೇಕಾದಲ್ಲಿ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಲೀಗ್ ಹಂತದಲ್ಲಿ ಪಾಕ್ ಪ್ರದರ್ಶನ ಹೇಗಿತ್ತು?
ನೆದರ್ಲ್ಯಾಂಡ್ಸ್, ಯುಎಸ್ಎ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ 61 ರನ್‌ಗಳ ಸೋಲು ಕಂಡಿತ್ತು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪಾಕ್ ನಮೀಬಿಯಾ ವಿರುದ್ದ 102 ರನ್ ಜಯ ದಾಖಲಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications