Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತಕ್ಕೆ ಭೇಟಿ ನೀಡುತ್ತಾರಾ ಪಿಸಿಬಿ ಮುಖ್ಯಸ್ಥ ನಖ್ವಿ; ಏಕೆ? ಇಲ್ಲಿದೆ ವರದಿ

ಮೊಹ್ಸಿನ್ ನಖ್ವಿ ಹೆಸರು ಹೇಳಿದರೆ ಸಾಕು ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಕೆಂಡ ಕಾರುತ್ತಾರೆ. ಭಾರತದ ವಿರುದ್ಧ ನಖ್ವಿ ತೋರಿದ ವರ್ತನೆಗಳು ಅಭಿಮಾನಿಗಳನ್ನು ಕೆರಳಿಸಿವೆ. ಏಷ್ಯಾ ಕಪ್‌ ಟಿ20 ಚಾಂಪಿಯನ್ ಆದರೂ ಟ್ರೋಫಿಯನ್ನು ಭಾರತಕ್ಕೆ ನೀಡದೆ ಸತಾಯಿಸಿದ್ದ ನಖ್ವಿ ಅವರ ವರ್ತನೆ ಕಂಡು ಹಲವು ಭಾರತೀಯ ಕ್ರೀಡಾ ಅಭಿಮಾನಿಗಳು ಹಿಡಿ ಶಾಪ ಹಾಕಿದ್ದರು. ಈಗ ಇವರಿಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರ ಬಿದ್ದಿದೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧ್ಯಕ್ಷರೂ ಆಗಿರುವ ಮೊಹ್ಸಿನ್ ನಖ್ವಿ ಅವರು ಪಾಕ್ ಪರ ಐಸಿಸಿ ಸಭೆಗಳಲ್ಲಿ ಭಾಗವಹಿಸುತ್ತಾರೆ. ಈ ವೇಳೆ ಈ ಬಾರಿಯ ಐಸಿಸಿ ಸಭೆಯು ಅಹಮದಾಬಾದ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಪಿಸಿಬಿ ಮುಖ್ಯಸ್ಥ ನಖ್ವಿ ಭಾಗವಹಿಸುವ ಸಾಧ್ಯತೆ ಇದೆ. ಅವರ ಸಂಭಾವ್ಯ ಭಾರತ ಭೇಟಿ ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧಗಳ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ. ಭಾರತದಲ್ಲಿ ನಡೆಯುತ್ತಿರುವ ಐಪಿಎಲ್‌ ವೇಳೆ ಈ ಸುದ್ದಿ ವೇಗ ಪಡೆದುಕೊಂಡಿದೆ.

pakistan

ಐಸಿಸಿಯ ಮುಖ್ಯ ಕಾರ್ಯನಿರ್ವಾಹಕ ಸಮಿತಿ (ಸಿಇಸಿ) ಮೇ 21 ರಂದು ವರ್ಚುವಲ್ ಸಭೆಯನ್ನು ನಡೆಸಲಿದೆ, ನಂತರ ಮೇ 30 ಮತ್ತು 31 ರಂದು ಅಹಮದಾಬಾದ್‌ನಲ್ಲಿ ವೈಯಕ್ತಿಕ ಸಭೆಗಳನ್ನು ನಡೆಸಲಿದೆ. ಇದೇ ಸಮಯದಲ್ಲಿ ಅಹಮದಾಬಾದ್‌ನಲ್ಲಿ ಐಪಿಎಲ್‌ ಫೈನಲ್ ಪಂದ್ಯ ನಡೆಯಲಿದೆ. ಈ ಸಭೆ ಮಾರ್ಚ್-ಏಪ್ರಿಲ್‌ನಲ್ಲಿ ಕತಾರ್‌ನ ರಾಜಧಾನಿ ದೋಹಾದಲ್ಲಿ ನಡೆಯಬೇಕಿತ್ತು. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಅದನ್ನು ಭಾರತಕ್ಕೆ ಸ್ಥಳಾಂತರಿಸಲು ಐಸಿಸಿ ನಿರ್ಧರಿಸಿದೆ.

ಐಸಿಸಿ ಸಭೆಯಲ್ಲಿ ಭಾಗವಹಿಸುತ್ತಾರಾ ನಖ್ವಿ?

ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಸ್ತುತ ರಾಜಕೀಯ ಮತ್ತು ಕ್ರಿಕೆಟ್ ಸಂಬಂಧಗಳನ್ನು ಗಮನಿಸಿದರೆ ನಖ್ವಿ ಐಸಿಸಿ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಪ್ರಶ್ನೆಗಳು ಮೂಡಿವೆ. ಇವರು ಪಿಸಿಬಿ ಮುಖ್ಯಸ್ಥರಾಗಿದ್ದರಿಂದ ಐಸಿಸಿ ಸಭೆಯಲ್ಲಿ ಹಾಜರಾಗುವುದು ಸಾಮಾನ್ಯ. ಪಾಕ್ ಮಾಧ್ಯಮಗಳ ವರದಿಗಳ ಅನ್ವಯ, ನಖ್ವಿ ಅವರಿಗೆ ಐಪಿಎಲ್‌ 2026ಕ್ಕೂ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿಲ್ಲ.

ಐಸಿಸಿ ದೃಷ್ಟಿ ಕೋನದಿಂದ ಇದು ಒಂದು ಸಾಮಾನ್ಯ ಸಭೆ ಆಗಿದ್ದರೆ, ಭಾರತ-ಪಾಕ್‌ ದೃಷ್ಟಿಕೊನದಿಂದ ಇದು ಹೆಚ್ಚು ಸೂಕ್ಷ್ಮತೆ ಪಡೆದಿದೆ. ಮೊಹ್ಸಿನ್ ನಖ್ವಿ ವೈಯಕ್ತಿಕವಾಗಿ ಸಭೆಯಲ್ಲಿ ಭಾಗವಹಿಸುತ್ತಾರೋ ಅಥವಾ ಸಭೆಯಿಂದ ದೂರವಿರುತ್ತಾರೋ ಎಂಬುದರ ಮೇಲೆ ಈಗ ಎಲ್ಲರ ಕಣ್ಣುಗಳು ನೆಟ್ಟಿವೆ.

ದುಬೈನಲ್ಲಿ ನಡೆದಿದ್ದ ಏಷ್ಯಾ ಕಪ್‌ ಟಿ20 ಫೈನಲ್ ನಂತರದ ಟ್ರೋಫಿ ವಿವಾದವು ಎರಡು ಮಂಡಳಿಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಿತು. ಸಮಾರೋಪ ಸಮಾರಂಭದಲ್ಲಿ ಮೊಹ್ಸಿನ್ ನಖ್ವಿ ಅವರು ಇದ್ದ ವೇದಿಕೆಯ ಮೇಲೆ ಭಾರತೀಯ ಕ್ರಿಕೆಟ್‌ ಆಟಗಾರರು ಏರಲು ನಿರಾಕರಿಸಿದರು. ಬಳಿಕ ನಖ್ವಿ ಟ್ರೋಫಿಯೊಂದಿಗೆ ಮೈದಾನ ತೊರೆದರು. ಬಿಸಿಸಿಐ ಟ್ರೋಫಿಯನ್ನು ಹಿಂದಿರುಗಿಸುವಂತೆ ಒತ್ತಾಯಿಸಿತು, ಮತ್ತು ವಿಷಯ ಐಸಿಸಿ ಮಟ್ಟಕ್ಕೆ ಏರಿತು.

Story first published: Saturday, May 16, 2026, 18:14 [IST]
Other articles published on May 16, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+