Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

3 ಪಂದ್ಯಗಳ ಟಿ20ಐ ಸರಣಿಗಾಗಿ ಇಂಗ್ಲೆಂಡ್‌ಗೆ ಪಾಕಿಸ್ತಾನದಿಂದ ಆಹ್ವಾನ

Pakistan Cricket Board invite England for three-match T20I series

ಕರಾಚಿ: ಮುಂದಿನ ವರ್ಷ ಜನವರಿಯಲ್ಲಿ ಪಾಲ್ಗೊಳ್ಳಲು ಮೂರು ಪಂದ್ಯಗಳ ಟಿ20ಐ ಸರಣಿಗಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಇಂಗ್ಲೆಂಡ್ ತಂಡಕ್ಕೆ ಆಹ್ವಾನವನ್ನಿತ್ತಿದೆ. ಪಿಸಿಬಿ ಸಿಇಒ ವಾಸಿಂ ಖಾನ್ ಈ ವಿಚಾರ ತಿಳಿಸಿದ್ದಾರೆ. ಇಂಗ್ಲೆಂಡ್‌ ತಂಡ ಪಾಕಿಸ್ತಾನದಲ್ಲಿ ಕಡೇಯ ಪಂದ್ಯವನ್ನಾಡಿದ್ದು 2005-06ರಲ್ಲಿ. ಆಗ ಒಂದು ಟೆಸ್ಟ್ ಮತ್ತು ಏಕದಿನ ಸರಣಿಗಾಗಿ ಇಂಗ್ಲೆಂಡ್ ತಂಡ ಪಾಕ್‌ಗೆ ಪ್ರವಾಸ ಬಂದಿತ್ತು.

'ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್‌ಗೆ ನಾವು ಅಧಿಕೃತವಾಗಿ ಆಹ್ವಾನ ಕಳುಹಿಸಿದ್ದೇವೆ. ಅವರ ತಂಡ ಕಳುಹಿಸಲು ವಿನಂತಿಸಿಕೊಂಡಿದ್ದೇವೆ. ಜನವರಿ 13ರಿಂದ ಜನವರಿ 20ರ ವರೆಗೆ ಮೂರು ಪಂದ್ಯಗಳ ಸರಣಿಗಾಗಿ ವೇಳಾಪಟ್ಟಿ ರಚಿಸಿದ್ದೇವೆ,' ಎಂದು ಖಾನ್ ಪಾಕಿಸ್ತಾನ ಚಾನೆಲ್ ಒಂದರ ಜೊತೆ ಹೇಳಿಕೊಂಡಿದ್ದಾರೆ.

ಈ ಚುಟುಕು ಪ್ರವಾಸಕ್ಕೂ ಮತ್ತು ಕೊರೊನಾವೈರಸ್ ನಡುವೆಯೂ ಪಾಕಿಸ್ತಾನ ಕ್ರಿಕೆಟ್ ತಂಡ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದಕ್ಕೂ ಸಂಬಂಧವಿಲ್ಲ ಎಂದು ಖಾನ್ ಸ್ಪಷ್ಟಪಡಿಸಿದ್ದಾರೆ. ಇಂಗ್ಲೆಂಡ್‌ಗೆ ತಂಡ ಕಳುಹಿಸುವಾಗ ಚಿಂತೆಯೂ ಕಾಡಿತ್ತು ಎಂದು ಖಾನ್ ವಿವರಿಸಿದ್ದಾರೆ.

'ಇಂಗ್ಲೆಂಡ್‌ಗೆ ಪಾಕಿಸ್ತಾನ ತಂಡ ಕಳುಹಿಸುವಾಗ ಕೊರೊನಾ ಪಿಡುಗು ಇದ್ದಿದ್ದರಿಂದ ನಮಗೆ ಚಿಂತೆಯಾಗಿತ್ತು. ಅದರಲ್ಲೂ ಜೈವಿಕ ಸುರಕ್ಷ ಪರದೆಯ ಬಗ್ಗೆಯೂ ನಮ್ಮಲ್ಲಿ ಪ್ರಶ್ನೆಗಳಿತ್ತು. ಕೆಲ ಆಟಗಾರರು ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ ಅವರ ಸುರಕ್ಷತೆಯನ್ನು ತೊಂದರೆಗೊಡ್ಡುವ ಭೀತಿ ಕಾಡಿತ್ತು,' ಎಂದು ಖಾನ್ ಹೇಳಿದ್ದಾರೆ.

Story first published: Saturday, October 17, 2020, 10:47 [IST]
Other articles published on Oct 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+