ಮತ್ತೆ ಪಾಕಿಸ್ತಾನ ಕ್ರಿಕೆಟ್ ತಂಡದ ಚುಕ್ಕಾಣಿ ಬಾಬರ್ ಅಜಮ್ ಕೈಗೆ?
ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಪಿಸಿಬಿ ನಾಯಕತ್ವವನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಹೇಳಿ ಕಿತ್ತು ಹಾಕಿದ್ದ ಆಟಗಾರನನ್ನೇ, ಈಗ ರೆಡ್ ಕಾರ್ಪೆಟ್ ಹಾಕಿ ಕರೆದುಕೊಳ್ಳುವ ಕಾಲ ಸನಿಹವಾಗಿದೆ.
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಸಾಧನೆ ತೀರಾ ಸಾಧಾರಣವಾಗಿತ್ತು. ಇದರಿಂದ ಬೇಸತ್ತ ಪಿಸಿಬಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬಾರ್ ಅಜಮ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದರು. ಅಲ್ಲದೆ ಮೂರೂ ಫಾರ್ಮೆಟ್‌ಗಳಿಗೆ ಪ್ರತೇಕ ನಾಯಕರನ್ನು ನೇಮಕ ಮಾಡಿತು. ಹೊಸ ನಾಯಕರು ತಮ್ಮ ಮೇಲೆ ಮ್ಯಾನೇಜ್ಮೆಂಟ್ ಇಟ್ಟ ನಂಬಿಕೆಗೆ ಪೂರಕವಾಗಿ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ವರದಿಗಳ ಪ್ರಕಾರ, ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಶಾನ್ ಮಸೂದ್ ಮತ್ತು ಶಾಹೀನ್ ಶಾ ಆಫ್ರಿದಿ ಅವರ ಸಾಮರ್ಥ್ಯದ ಬಗ್ಗೆ ಪಿಸಿಬಿ ವಿಶ್ವಾಸ ಕಳೆದುಕೊಂಡಿದೆ. ಮತ್ತೊಮ್ಮೆ ತಂಡದ ನಾಯಕತ್ವ ವಹಿಸಲು ಮಾಜಿ ನಾಯಕ ಬಾಬರ್ ಅಜಮ್ ಅತ್ಯುತ್ತಮ ಆಯ್ಕೆ ಎಂದು ಪಿಸಿಬಿ ಅಭಿಪ್ರಾಯ ಪಟ್ಟಿದೆ. ಬಾಬರ್ ಅವರತ್ತ ಚಿತ್ತ ಹರಿಸಿರುವುದ ಕುತೂಹಲಕ್ಕೆ ಕಾರಣವಾಗಿದೆ. ಇವರನ್ನು ಎಲ್ಲಾ ಮೂರು ಸ್ವರೂಪಗಳಲ್ಲಿ ಮತ್ತೆ ನಾಯಕನನ್ನಾಗಿ ಮಾಡಲು ಯೋಚಿಸುತ್ತಿದೆ.
ನಾಯಕತ್ವ ತ್ಯಜಿಸಿದ್ದು ಏಕೆ?
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಪಾಕ್ ಲೀಗ್ ಹಂತದಲ್ಲಿ ಹೊರ ನಡೆದಿತ್ತು. ಇದರಿಂದ ಪಿಸಿಬಿ ಬಾಬರ್‌ರನ್ನು ಎಲ್ಲಾ ಸ್ವರೂಪಗಳಲ್ಲಿ ಪಾಕಿಸ್ತಾನದ ನಾಯಕತ್ವದಿಂದ ಕೆಳಗಿಳಿಸಿತು. ಇದರ ನಂತರ, ಮಸೂದ್ ಅವರನ್ನು ಟೆಸ್ಟ್ ಮಾದರಿಯಲ್ಲಿ ನಾಯಕನಾಗಿ ನೇಮಿಸಲಾಯಿತು. ಶಾಹೀನ್ ಅವರನ್ನು ಟಿ 20 ಗೆ ನಾಯಕರನ್ನಾಗಿ ಮಾಡಲಾಯಿತು. ಆದರೆ ಈ ಆಟಗಾರರು ಪ್ರವಾಸದ ವೇಳೆ ಕಂಡ ಸೋಲುಗಳಿಂದ ಪಿಸಿಬಿ ಕಂಗೆಟ್ಟಿದೆ.

ಮೂಲಗಳ ಪ್ರಕಾರ ಪಿಸಿಬಿ ಅಧ್ಯಕ್ಷರು ಬದಲಾದರೆ ನಾಯಕತ್ವ ಬದಲಾಗುತ್ತದೆ ಎಂದು ತಿಳಿದು ಬಂದಿದೆ. ಆಸಕ್ತಿದಾಯಕ ವಿಷಯವೆಂದರೆ ಮಂಡಳಿಯ ಅಧ್ಯಕ್ಷ ಸ್ಥಾನದ ಬದಲಾವಣೆಯೊಂದಿಗೆ, ಶಾನ್ ಮಸೂದ್ ಮತ್ತು ಶಾಹೀನ್ ಶಾ ಆಫ್ರಿದಿ ಅವರು ಟೆಸ್ಟ್ ಮತ್ತು ಟಿ 20 ಮಾದರಿಗಳಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಸಾಮರ್ಥ್ಯದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಇದೀಗ ಬಾಬರ್ ಚಿತ್ತ ನೆಟ್ಟಿದೆ.
ಝಾಕಾ ಅಶ್ರಫ್ ಪಿಸಿಬಿ ಅಧ್ಯಕ್ಷರಾಗಿದ್ದಾಗ ವಿಶ್ವಕಪ್‌ನಲ್ಲಿ ತಂಡ ನೀಡಿದ ಪ್ರದರ್ಶನವನ್ನು ಗಮನಿಸಿ ಬಾಬರ್ ಅವರನ್ನು ವೈಟ್-ಬಾಲ್ ಮಾದರಿಯಲ್ಲಿ ನಾಯಕತ್ವದಿಂದ ತೆಗೆದುಹಾಕಲಾಯಿತು. ಇದಾದ ನಂತರ ಅವರು ರೆಡ್ ಬಾಲ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದರು. ಬಾಬರ್ 2020 ರಿಂದ ಎಲ್ಲಾ ಸ್ವರೂಪಗಳಲ್ಲಿ ನಾಯಕನ ಹುದ್ದೆಯನ್ನು ನಿಭಾಯಿಸುತ್ತಿದ್ದರು.
ಶಾಹೀನ್ ನ್ಯೂಜಿಲೆಂಡ್‌ನಲ್ಲಿ ನಾಯಕನಾಗಿ ತನ್ನ ಮೊದಲ ಸರಣಿಯನ್ನು ಕಳೆದುಕೊಂಡಿದ್ದಲ್ಲದೆ ತಂಡ ಹೀನಾಯ ಸೋಲು ಕಂಡಿತು. ಅಲ್ಲದೆ ಇವರ ನೇತೃತ್ವದಲ್ಲಿ ಲಾಹೋರ್ ಖಲಂದರ್‌ಗಳಿಗೂ ಪ್ರಸಕ್ತ ವರ್ಷ ಪ್ಲೇಆಫ್‌ಗೆ ಅರ್ಹತೆ ಪಡೆಯಲಿಲ್ಲ. ಪ್ರಸ್ತುತ ಅಧ್ಯಕ್ಷ ಮೊಹ್ಸಿನ್ ನಖ್ವಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮಾಜಿ ಆಟಗಾರರ ಸಲಹೆಗೆ ಮನ್ನಣೆ ನೀಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications