'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿಗೆ ಪಾಕ್ ಕ್ರಿಕೆಟ್ ಸಮೂಹದಿಂದ ಗೌರವ

ಕರಾಚಿ, ಆಗಸ್ಟ್ 18: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯನ್ನು ಪಾಕಿಸ್ತಾನ ಕ್ರಿಕೆಟ್ ಸಮೂಹ ಒಕ್ಕೊರಲಿನಿಂದ ಶ್ಲಾಘಿಸಿದೆ. ಭಾರತ ಸೃಷ್ಟಿಸಿದ ಶ್ರೇಷ್ಠ ನಾಯಕ, ಕ್ರಿಕೆಟ್ ಆಟದಲ್ಲಿ ಆತ ತನ್ನದೇ ಶೈಲಿಯಿಂದ ಪರಿಣಾಮ ಬೀರುತ್ತಿದ್ದರು ಎಂದು ಪಾಕ್ ಕ್ರಿಕೆಟ್ ಧೋನಿಯನ್ನು ಹೊಗಳಿದೆ.
ಭಾರತವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನಕ್ಕೆ ಕೊಂಡೊಯ್ದಿದ್ದಲ್ಲದೆ ಭಾರತಕ್ಕೆ ಐಸಿಸಿ ವಿಶ್ವಕಪ್, ವರ್ಲ್ಡ್ ಟಿ20 ಮತ್ತು ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟಿದ್ದ ಧೋನಿ ಆಗಸ್ಟ್ 15ರ ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
ವಿಶ್ವ ಶ್ರೇಷ್ಠ ನಾಯಕ ನಾಯಕರಾಗಿದ್ದ ಎಂಎಸ್ ಧೋನಿಗೆ ಪಾಕಿಸ್ತಾನದ ಕ್ರಿಕೆಟ್ ಸ್ಟಾರ್‌ಗಳಾದ ಇನ್ಝಮಾಮ್ ಉಲ್ ಹಕ್, ಬಸಿತ್ ಅಲಿ, ವಾಕರ್ ಯೂನಿಸ್, ಮುದಾಸರ್ ನಝರ್, ಶಾಹಿದ್ ಅಫ್ರಿದಿ ಮತ್ತು ಇನ್ನಿತರ ಅನೇಕರು ಮನಪೂರ್ವಕವಾಗಿ ಗೌರವ ಸಲ್ಲಿಸಿದ್ದಾರೆ.
ಪಾಕಿಸ್ತಾನ ಪರ ಅತೀ ಹೆಚ್ಚು ಪಂದ್ಯಗಳನ್ನಾಡಿರುವ ಇನ್ಝಾಮಾಮ್ ಉಲ್ ಹಕ್ ಮಾತನಾಡಿ, 'ನನ್ನ ಪ್ರಕಾರ, ಧೋನಿ ಭಾರತ ಸೃಷ್ಟಿಸಿದ ಶ್ರೇಷ್ಠ ನಾಯಕರಲ್ಲೊಬ್ಬರು. ನಾನು ವಿರುದ್ಧ ಆಡಿ ಹೆಚ್ಚು ಸಂಭ್ರಮಿಸಿದ್ದ ತಂಡದ ನಿಜವಾದ ಮ್ಯಾಚ್ ವಿನ್ನರ್ ಆತ,' ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications