ಪಾಕಿಸ್ತಾನ ಕ್ರಿಕೆಟ್ ಟೀಮ್‌ಗೆ ನ್ಯೂಜಿಲೆಂಡ್‌ನಿಂದ ಅಂತಿಮ ಎಚ್ಚರಿಕೆ!

ವೆಲ್ಲಿಂಗ್ಟನ್: 3 ಪಂದ್ಯಗಳ ಟಿ20ಐ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಡಿಸೆಂಬರ್ 18ರಿಂದ ಜನವರಿ 7ರ ವರೆಗೆ ನಡೆಯಲಿರುವ ಸರಣಿಗಾಗಿ 34 ಮಂದಿಯ ಪಾಕಿಸ್ತಾನ ತಂಡ ನವೆಂಬರ್ 24ರ ಮಂಗಳವಾರ ನ್ಯೂಜಿಲೆಂಡ್‌ಗೆ ಬಂದಿಳಿದಿದೆ.
ಪ್ರವಾಸ ಸರಣಿಗಾಗಿ ನ್ಯೂಜಿಲೆಂಡ್‌ಗೆ ಬಂದಿದ್ದ ತಂಡದಲ್ಲಿ ಫಖರ್ ಝಮಾನ್ ಇರಲಿಲ್ಲ. 20 ಮಂದಿ ಅಧಿಕಾರಿಗಳು ಸೇರಿ ಒಟ್ಟು 54 ಮಂದಿಯ ಪಾಕ್ ತಂಡ ನ್ಯೂಜಿಲೆಂಡ್‌ನಲ್ಲಿ ಇಳಿದಿದ್ದು ಎಲ್ಲರೂ 14 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಹೋಗಿದ್ದಾರೆ.
ಪಾಕ್ ತಂಡಕ್ಕೆ ಮೊದಲ ಸುತ್ತಿನ ಕೊರೊನಾವೈರಸ್ ಪರೀಕ್ಷೆ ನವೆಂಬರ್ 25ಕ್ಕೆ ನಡೆದಿದೆ. ಈ ವೇಳೆ ಒಟ್ಟು 6 ಮಂದಿಗೆ ಕೊರೊನಾವೈರಸ್ ಪಾಸಿಟಿವ್ ಎಂದು ಬಂದಿತ್ತು. ಪಾಕ್‌ನಿಂದ ಹೊರಡುವಾಗ 54 ಮಂದಿಯ ಫಲಿತಾಂಶವೂ 4 ಬಾರಿ ನೆಗೆಟಿವ್ ಎಂದು ಬಂದಿತ್ತು. ಹೀಗಾಗಿ 6ರಲ್ಲಿ 2 ಸೋಂಕಿನ ಪ್ರಕರಣಗಳನ್ನು ನ್ಯೂಜಿಲೆಂಡ್ ಅಪರೂಪದ ಪ್ರಕರಣ ಎಂದು ಪರಿಗಣಿಸಿದೆ.
'ಪಾಕಿಸ್ತಾನ ತಂಡಕ್ಕೆ ಪಾಸಿಟಿವ್ ಫಲಿತಾಂಶ ಬಂದಿರುವುದು ನಿರಾಶಾದಾಯಕವಾಗಿದ್ದರೂ, ಪರೀಕ್ಷಾ ಫಲಿತಾಂಶಗಳು ಮತ್ತು ಕೈಗೊಂಡ ಕ್ರಮಗಳು ಸರ್ಕಾರಿ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿರುವುದನ್ನು ತೋರಿಸುತ್ತದೆ. ಪಾಕ್ ತಂಡ ಜಾಗರೂಕತೆ ವಹಿಸಬೇಕು,' ಎಂದು ನ್ಯೂಜಿಲೆಂಡ್ ಕ್ರಿಕೆಟ್ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications