ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಗಳಿಗೆ ಪಾಕಿಸ್ತಾನ ಆತಿಥ್ಯ?

Pakistan cricket team hoping to host South Africa, Australia in near future

ಕರಾಚಿ, ಜನವರಿ 1: ಕ್ರಿಕೆಟ್ ರಂಗದಲ್ಲಿ ಟಾಪ್‌ ತಂಡಗಳಲ್ಲಿ ಗುರುತಿಸಿಕೊಂಡಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಂತ ತಂಡಗಳಿಗೆ ಆತಿಥ್ಯವಹಿಸುವ ಆಶಯವನ್ನು ಪಾಕಿಸ್ತಾನ ಕ್ರಿಕೆಟ್ ಹೊಂದಿದೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಎಹಸಾನ್ ಮನಿ ಜೋಹನ್ಸ್‌ಬರ್ಗ್‌ಗೆ ಯಶಸ್ವಿ ಪ್ರವಾಸ ಕೈಗೊಂಡಿರುವುದು ಇಂಥದ್ದೊಂದು ಸಾಧ್ಯತೆಗೆ ಎಡೆ ಮಾಡಿದೆ.

ನಾನು ನಾಯಕತ್ವ ವಹಿಸಬೇಕನ್ನೋದು ಹಾಸ್ಯಾಸ್ಪದವಾಗಿದೆ: ಪ್ಯಾಟ್ ಕಮಿನ್ಸ್ನಾನು ನಾಯಕತ್ವ ವಹಿಸಬೇಕನ್ನೋದು ಹಾಸ್ಯಾಸ್ಪದವಾಗಿದೆ: ಪ್ಯಾಟ್ ಕಮಿನ್ಸ್

ಮೂಲವೊಂದರ ಪ್ರಕಾರ ಮನಿ ಅವರು ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸುವಂತೆ ಕ್ರಿಕೆಟ್ ಸೌತ್ ಆಫ್ರಿಕಾ (ಸಿಎಸ್‌ಎ) ಅಧಿಕಾರಿಗಳೊಂದಿಗೆ ಯಶಸ್ವಿ ಚರ್ಚೆ ನಡೆಸಿದ್ದಾರೆ. ಸಿಎಸ್‌ಎಯಿಂದ ಇದಕ್ಕೆ ಗ್ರೀನ್‌ ಸಿಗ್ನಲ್ ಕೂಡ ಲಭಿಸಿದೆ ಎನ್ನಲಾಗಿದೆ.

'ಸೌತ್‌ ಆಫ್ರಿಕಾದ ಅಂಡರ್ 19, ಎ, ಮಹಿಳೆಯರು ಮತ್ತು ಸೀನಿಯರ್ ತಂಡಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲು ಕ್ರಿಕೆಟ್ ಸೌತ್‌ ಆಫ್ರಿಕಾ ಅಧಿಕಾರಿಗಳೊಂದಿಗೆ ಮನಿ ಕೇಳಿಕೊಂಡಿದ್ದಾರೆ. ಅದಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದೆ' ಎಂದು ಮೂಲ ತಿಳಿಸಿದೆ.

ಟಿಮ್ ಪೈನೆ ಮಕ್ಕಳನ್ನು ನೋಡಿಕೊಳ್ಳೋ ಸವಾಲು ಸ್ವೀಕರಿಸಿದ್ದಾರಾ ಪಂತ್?!ಟಿಮ್ ಪೈನೆ ಮಕ್ಕಳನ್ನು ನೋಡಿಕೊಳ್ಳೋ ಸವಾಲು ಸ್ವೀಕರಿಸಿದ್ದಾರಾ ಪಂತ್?!

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಆಸ್ಟ್ರೇಲಿಯಾಕ್ಕೂ ಆತಿಥ್ಯವನ್ನು ವಹಿಸುವ ಇಂಗಿತವನ್ನು ಹೊಂದಿದೆ. ಈ ಬಗ್ಗೆಯೂ ಎಹಸಾನ್ ಆಸ್ಟ್ರೇಲಿಯಾ ಜೊತೆ ಮಾತುಕತೆ ನಡೆಸಿದ್ದಾರೆ. ಬರುವ ಮಾರ್ಚ್-ಏಪ್ರಿಲ್‌ ನಂತರ ಲಾಹೋರ್ ಮತ್ತು ಕರಾಚಿಯಲ್ಲಿ ಒಂದು ಅಥವಾ ಎರಡು ಏಕದಿನ ಪಂದ್ಯಗಳನ್ನು ನಡೆಸಲು ಒಪ್ಪಿಗೆ ಲಭಿಸಿದೆ ಎಂದೂ ಸುದ್ದಿ ಮೂಲ ಹೇಳಿದೆ.

Story first published: Tuesday, January 1, 2019, 22:42 [IST]
Other articles published on Jan 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X