For Quick Alerts
ALLOW NOTIFICATIONS  
For Daily Alerts
 

ವಿಶ್ವದ ಮೊದಲ ಆನ್‌ಲೈನ್ ಕ್ರಿಕೆಟ್‌ ಕೋಚ್ ನೇಮಕಕ್ಕೆ ಮುಂದಾದ ಪಾಕಿಸ್ತಾನ ತಂಡ

Pakistan Cricket Team Set To Have World Cricket’s First Online Coach

4 ವರ್ಷಗಳ ಬಳಿಕ ಆಸ್ಟ್ರೇಲಿಯಾದ ಮಿಕ್ಕಿ ಆರ್ಥರ್ ಪಾಕಿಸ್ತಾನದ ಕೋಚ್ ಆಗುವ ಸಾಧ್ಯತೆ ಇದೆ. ಆದರೆ ತರಬೇತಿ ನೀಡಲು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ್ದು, ಆನ್‌ಲೈನ್ ಮೂಲಕ ಕೋಚಿಂಗ್ ನೀಡಲು ಒಪ್ಪಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

2023ರ ಏಕದಿನ ವಿಶ್ವಕಪ್‌ವರೆಗೆ ಅವರು ಪಾಕಿಸ್ತಾನದ ಕೋಚ್ ಆಗಿ ಮುಂದುವರೆಯುವ ಸಾಧ್ಯತೆ ಇದೆ. ಆನ್‌ಲೈನ್‌ನಲ್ಲಿ ಮಾತ್ರ ಪಾಕಿಸ್ತಾನ ತಂಡಕ್ಕೆ ತರಬೇತಿ ನೀಡಲಿದ್ದಾರೆ ಈ ಮೂಲಕ ಅವರು ವಿಶ್ವ ಕ್ರಿಕೆಟ್‌ನಲ್ಲಿ ಮೊದಲ ಆನ್‌ಲೈನ್ ಕೋಚ್ ಎನಿಸಿಕೊಳ್ಳಲಿದ್ದಾರೆ.

ಪಾಕಿಸ್ತಾನದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಕ್ಲೇನ್ ಮುಷ್ತಾಕ್‌ ಅವರ ಒಪ್ಪಂದದ ಅವಧಿ ಮುಕ್ತಾಯವಾಗುವುದರೊಳಗೆ ಆರ್ಥರ್ ಅವರನ್ನು ನೇಮಿಸಿಕೊಳ್ಳಲು ಮುಂದಾಗಿತ್ತು, ಆದರೆ ಆರ್ಥರ್ ಇತ್ತೀಚೆಗೆ ಇಂಗ್ಲೆಂಡ್‌ನ ಡರ್ಬಿಶೈರ್ ಕೌಂಟಿ ಕ್ರಿಕೆಟ್ ಕ್ಲಬ್‌ನೊಂದಿಗೆ ತರಬೇತುದಾರರಗಲು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೂ, ಆರ್ಥರ್ ಪೂರ್ಣ ಪ್ರಮಾಣದ ತರಬೇತುದಾರರಾಗುತ್ತಾರ ಅಧವಾ ಸಲಹೆಗಾರರಾಗುತ್ತಾರೆಯಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಪಾಕಿಸ್ತಾನದ ಬೋಲ್‌ನ್ಯೂಸ್ ವರದಿಯ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅನೇಕ ಬಾರಿ ಮನವಿ ಮಾಡಿದ ಬಳಿಕ ತರಬೇತುದಾರರಾಗಲು ಆರ್ಥರ್ ಒಪ್ಪಿಕೊಂಡಿದ್ದಾರೆ. ಆದರೆ, ಹಡಗಿನಲ್ಲಿ ಪಾಕಿಸ್ತಾನಕ್ಕೆ ತೆರಳಲು ಅವರು ನಿರಾಕರಿಸಿದ್ದಾರೆ. 2023ರ ಏಷ್ಯಾಕಪ್‌ನಂತಹ ಪಂದ್ಯಾವಳಿಗೂ ಕೂಡ ಅವರು ಆನ್‌ಲೈನ್‌ನಲ್ಲೇ ತರಬೇತಿ ನೀಡಲಿದ್ದಾರೆ. 2023ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಯಲ್ಲಿ ತಂಡದ ಜೊತೆ ಇರುವುದಾಗಿ ಹೇಳಿದ್ದಾರೆ ಎಂದು ವರದಿ ಮಾಡಿದೆ.

Pakistan Cricket Team Set To Have World Cricket’s First Online Coach

ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಭರವಸೆ

ಮಿಕ್ಕಿ ಆರ್ಥರ್ ಜೊತೆ ವೈಯಕ್ತಿಕವಾಗಿ ಮಾತುಕತೆ ನಡೆಸುತ್ತಿದ್ದೇನೆ, 90 ಪ್ರತಿಶತ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಅವರು ಪಾಕಿಸ್ತಾನ ತಂಡದ ಕೋಚ್‌ ಆಗಲಿದ್ದಾರೆ, ಈ ಸುದ್ದಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ. ಎಂದು ನಜಮ್ ಸೇಥಿ ಕಳೆದ ವಾರ ಹೇಳಿಕೆ ನೀಡಿದ್ದರು.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮನವಿಯನ್ನು ಆರ್ಥರ್ ಮೊದಲಿಗೆ ನಿರಾಕರಿಸಿದ್ದರು. ಆದರೆ, ಪಿಸಿಬಿ ಕಾಡಿ ಬೇಡಿ ಆರ್ಥರ್ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದೆ. ಕೋಚ್ ಆಗಲು ಸಾಧ್ಯವಾಗದಿದ್ದರೆ ಅವರು ಸಲಹೆಗಾರರಾಗಿ ಕೆಲಸ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Pakistan Cricket Team Set To Have World Cricket’s First Online Coach

ಈ ಮೊದಲು ಪಾಕಿಸ್ತಾನದ ಕೋಚ್ ಆಗಿ ಕೆಲಸ

"ಡರ್ಬಿಶೈರ್ ಜೊತೆ ದೀರ್ಘಕಾಲದ ಅವಧಿವರೆಗೆ ಒಪ್ಪಂದ ಮಾಡಿಕೊಂಡಿರುವ ಕಾರಣದಿಂದ ಡರ್ಬಿಶೈರ್‍‌ನೊಂದಿಗೆ ಸಮಯ ಹಂಚಿಕೆ ಆಧಾರದ ಮೇಲೆ ಪಿಸಿಬಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುವ ಪ್ರಸ್ತಾಪವನ್ನು ಮುಂದಿಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿತ್ತು.

ಮಿಕ್ಕಿ ಆರ್ಥರ್ ಈ ಮೊದಲು ಪಾಕಿಸ್ತಾನದ ಕೋಚ್ ಆಗಿ ಕೆಲಸ ಮಾಡಿದ್ದಾರೆ. 2016ರಲ್ಲಿ ಪಾಕಿಸ್ತಾನ ತಂಡದ ಕೋಚ್‌ ಆದ ಅವರು, 2017ರಲ್ಲಿ ಪಾಕಿಸ್ತಾನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಮಾರ್ಗದರ್ಶನ ನೀಡಿದ್ದರು. 2019ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ನಾಕೌಟ್ ಹಂತಕ್ಕೆ ತಲುಪಲು ವಿಫಲವಾದ ನಂತರ ಅವರು ಕೋಚ್‌ ಹುದ್ದೆಯನ್ನು ತೊರೆದಿದ್ದರು.

Story first published: Monday, January 30, 2023, 22:04 [IST]
Other articles published on Jan 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+