ಮಾರಕ ರೋಗಕ್ಕೆ ಪಾಕ್ ಕ್ರಿಕೆಟರ್ ಆಸಿಫ್ ಅಲಿ ಪುಟಾಣಿ ಪುತ್ರಿ ಬಲಿ

ವಾಷಿಂಗ್ಟನ್, ಮೇ 20: ನಾಲ್ಕನೇ ಹಂತದಲ್ಲಿದ್ದ ಕ್ಯಾನ್ಸರ್ ಖಾಯಿಲೆಯಿಂದ ಬಳುತ್ತಿದ್ದ, ಪಾಕಿಸ್ತಾನ ಬ್ಯಾಟ್ಸ್ಮನ್ ಆಸಿಫ್ ಅಲಿ ಅವರ 2 ವರ್ಷದ ಪುತ್ರಿ ನೂರ್ ಫಾತಿಮಾ ಅವರು ಸಾವನ್ನಪ್ಪಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟಾಣಿ ಕೊನೆಯುಸಿರೆಳೆದಿದ್ದಾರೆ.
ಮಗಳು ಸಾವನ್ನಪ್ಪಿರುವುದರಿಂದ ಆಸಿಫ್ ಅಲಿ ಇಂಗ್ಲೆಂಡ್ ಪ್ರವಾಸ ಸರಣಿಯಿಂದ ತೆರಳಲಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಒಂದು ಟಿ20 ಮತ್ತು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 4-0ಯ ಹಿನ್ನಡೆ ಅನುಭವಿಸಿದೆ.
ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಆಸಿಫ್ ಪ್ರತಿನಿಧಿಸಿದ್ದ ಇಸ್ಲಮಾಬಾದ್ ಯುನೈಟೆಡ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ, 'ನಮ್ಮ ಬಳಗ ಆಸಿಫ್ ಅಲಿಯ ಪುತ್ರಿಯ ಸಾವಿಗೆ ತೀವ್ರ ಸಂತಾಪ ಸೂಚಿಸುತ್ತದೆ. ಆಸಿಫ್ ಮತ್ತವರ ಕುಟುಂಬದ ಪರ ನಾವು ಪ್ರಾರ್ಥಿಸುತ್ತೇವೆ. ಆಸಿಫ್ ನಮ್ಮ ಪಾಲಿನ ಸ್ಫೂರ್ತಿ' ಎಂದು ಬರೆದುಕೊಳ್ಳುವ ಮೂಲಕ ತಂಡದ ಆಟಗಾರನನ್ನು ಸಾಂತ್ವನಿಸಿದೆ.
ಇತ್ತೀಚೆಗೆ ಮುಕ್ತಾಯಗೊಂಡಿರುವ ಇಂಗ್ಲೆಂಡ್ ಪ್ರವಾಸ ಸರಣಿಯ 2ನೇ ಮತ್ತು 3ನೇ ಏಕದಿನ ಪಂದ್ಯಗಳಲ್ಲಿ ಅಲಿ ಕ್ರಮವಾಗಿ 51, 52 ರನ್ ಬಾರಿಸಿದ್ದರು. ಪಾಕಿಸ್ತಾನ ವಿಶ್ವಕಪ್ ತಂಡದಲ್ಲಿ ಸದ್ಯ ಆಸಿಫ್ ಸ್ಥಾನ ಗಿಟ್ಟಿಸಿಕೊಂಡಿಲ್ಲವಾದರೂ ತಂಡ ಅಂತಿಮಗೊಳ್ಳುವ ವೇಳೆ ಕಾಣಿಸಿಕೊಳ್ಳುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications