ನ್ಯೂಜಿಲೆಂಡ್ ನಲ್ಲಿ ಪಾಕಿಸ್ತಾನ ಕ್ರಿಕೆಟರ್ ಗೆ 'ಭೂತ ಕಾಟ'
ಕರಾಚಿ, ಜ.27: ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ಆಲ್ ರೌಂಡರ್ ಹ್ಯಾರೀಸ್ ಸೊಹೈಲ್ ಅವರಿಗೆ ನ್ಯೂಜಿಲೆಂಡ್ ನ ಹೋಟೆಲ್ ನಲ್ಲಿ ತಂಗಿದ್ದಾಗ ಭೂತ ಕಾಟದ ಅನುಭವವಾಯಿತಂತೆ. ಭಯಭೀತರಾದ ಸೊಹೈಲ್ ತಾವಿದ್ದ ರೂಮ್ ಬದಲಾಯಿಸುವಂತೆ ವ್ಯವಸ್ಥಾಪಕರನ್ನು ಕೋರಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಸೊಹೈಲ್ ಇದ್ದ ರೂಮಿನಲ್ಲಿ ಅಗೋಚರ ಶಕ್ತಿಗಳ ಓಡಾಟ, ಚೀರಾಟದ ಸದ್ದು ಕೇಳಿ ಬರುತ್ತಿತ್ತು. ಹೀಗಾಗಿ, ರಾತ್ರಿ ಒಂದು ಹೊತ್ತಿನಲ್ಲಿ ಗಾಬರಿಯಿಂದ ಎದ್ದ ಯುವ ಕ್ರಿಕೆಟರ್ ಬೇರೆ ರೂಮಿಗೆ ಹೋಗಬೇಕು ಎಂದು ಅವೇಳೆಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಗೆ ದುಂಬಾಲು ಬಿದ್ದಿದ್ದಾರೆ. ಮರು ದಿನ ಸೊಹೈಲ್ ಮೈ ಮುಟ್ಟಿದರೆ ಬೆಚ್ಚಿಬೀಳುವಂತೆ ಸುಡುತ್ತಿತ್ತು. ಜ್ವರದಿಂದ ಸೊಹೈಲ್ ಕಂಪಿಸುತ್ತಿದ್ದರು ಈ ಬಗ್ಗೆ ಸೊಹೈಲ್ ರನ್ನು ಪ್ರಶ್ನಿಸಿದರೆ, 'ಭೂತವೊಂದು ನಾನು ಮಲಗಿದ್ದ ಹಾಸಿಗೆಯನ್ನು ಅಲ್ಲಾಡಿಸಿತು' ಎಂದು ಪ್ರತಿಕ್ರಿಯಿಸಿದ್ದಾರೆ. [ದೆವ್ವದ ಕತೆಗಳು ಎ೦ದರೇ ಸಾಕು ಕಿವಿ ನೆಟ್ಟಗೆ!]

ಬಹುಶಃ ಇದೇ ಮೊದಲ ಬಾರಿಗೆ ಈ ರೀತಿ ಅಗೋಚರ ಶಕ್ತಿಯ ಪ್ರಭಾವಕ್ಕೆ ಒಳಗಾಗಿ ಪಾಕಿಸ್ತಾನಿ ಕ್ರಿಕೆಟರ್ ರೊಬ್ಬರ ರೂಮ್ ಬದಲಾಯಿಸುವ ಘಟನೆ ನಡೆದಿದೆ. ಈ ಹಿಂದೆ ಆಟಗಾರ ದುರ್ವತನೆಯಿಂದಾಗಿ ರೂಮ್ ಬದಲಾಯಿಸಿದ ಉದಾಹರಣೆಗಳಿವೆ.
ಈ ಹಿಂದೆ ಲಂಡನ್ನಿನ ಲ್ಯಾಂಗ್ ಹಾಮ್ ಹೋಟೆಲ್ ನಲ್ಲಿ ತಂಗಿದ್ದಾಗ ಇಂಗ್ಲೆಂಡಿನ ವೇಗಿ ಸ್ಟುವರ್ಟ್ ಬ್ರಾಡ್ ಗೂ ಭೂತ ಪ್ರೇತ ಕಾಟದ ಅನುಭವವಾಗಿತ್ತು ಎಂಬ ಸುದ್ದಿ ಬಂದಿತ್ತು. ಪ್ರೇತ ಕಾಟಕ್ಕೆ ಹೆದರಿ ಇಂಗ್ಲೆಂಡಿನ ಆಟಗಾರರು ರೂಮ್ ಬದಲಾಯಿಸಿ ಘಟನೆ ನಡೆದಿತ್ತು. [ಲಂಡನ್ನಿನಲ್ಲಿ ಕ್ರಿಕೆಟರ್ ಗೆ ಭೂತ ಪ್ರೇತ ಕಾಟ!]
ಸದ್ಯಕ್ಕೆ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ನಲ್ಲಿದ್ದು, ಐಸಿಐ ವಿಶ್ವಕಪ್ ಗೆ ತಯಾರಿ ನಡೆಸಿದೆ. ಒಂದೆರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ನಂತರ ಅಭ್ಯಾಸ ಪಂದ್ಯಗಳನ್ನಾಡಿ ಆಸ್ಟ್ರೇಲಿಯಾಕ್ಕೆ ತೆರಳಲಿದೆ.
ಪಾಕಿಸ್ತಾನ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ಅಧ್ಯಕ್ಷರ ಇಲೆವನ್ ವಿರುದ್ಧ ಸೋಲುಕಂಡರೂ ನಾಯಕ ಮಿಸ್ಬಾ ಉಲ್ ಹಕ್ ಲಯಕ್ಕೆ ಮರಳಿ ಶತಕ ಬಾರಿಸಿದರು. ಮೊದಲ ಪಂದ್ಯವನ್ನಾಡದ ಹ್ಯಾರಿಸ್ ಸೊಹೈಲ್ ಎರಡನೇ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗಿದ್ದು, ಬಿಲಾವಲ್ ಭಟ್ಟಿ ಅವರ ಸ್ಥಾನ ತುಂಬಲಿದ್ದಾರೆ. ಕಿವೀಸ್ ವಿರುದ್ಧ ಜ.31ರಂದು ಮೊದಲ ಏಕದಿನ ಪಂದ್ಯಕ್ಕೆ ಸೊಹೈಲ್ ಗುಣಮುಖರಾಗುವ ನಿರೀಕ್ಷೆಯಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications