Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಫೀಜ್‌ಗೆ ಮೊದಲು ಕೊರೊನಾ ಪಾಸಿಟಿವ್, ಮತ್ತೆ ನೆಗೆಟಿವ್, ಈಗ ಪಾಸಿಟಿವ್!

Pakistan cricketer Mohammad Hafeez COVID-19 positive again

ಇಸ್ಲಮಾಬಾದ್, ಜೂನ್ 26: ಪಾಕಿಸ್ತಾನ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರ ಸುತ್ತಮುತ್ತ ಎಂಥದ್ದೊ ರಹಸ್ಯ ಸುತ್ತುವರಿದಂತಿದೆ. ಯಾಕೆಂದರೆ ಕೊರೊನಾವೈರಸ್‌ಗಾಗಿ ಅವರಿಗೆ ಮೊದಲು ನಡೆಸಲಾದ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿತ್ತು. ಅನಂತರ ಹಫೀಜ್ ತಾನು ಕೊರೊನಾ ನೆಗೆಟಿವ್ ಎಂದಿದ್ದರು. ಮತ್ತೀಗ ಪಾಕ್ ಕ್ರಿಕೆಟ್ ಬೋರ್ಡ್, ಹಫೀಜ್ ಫಲಿತಾಂಶ ಪಾಸಿಟಿವ್ ಎಂದು ಘೋಷಿಸಿದೆ!

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ನಿಮಿತ್ತ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತನ್ನ 29 ಜನರಿರುವ ತಂಡ, 12 ಮಂದಿ ಸಿಬ್ಬಂದಿ ಸೇರಿಸಿ ಕೊರೊನಾವೈರಸ್ ಪರೀಕ್ಷೆ ನಡೆಸಿತ್ತು. ಈ ವೇಳೆ ಮೊಹಮ್ಮದ್ ಹಫೀಜ್‌ ಸೇರಿ ಒಟ್ಟು 10 ಮಂದಿ ಆಟಗಾರರ ಫಲಿತಾಂಶ ಪಾಸಿಟಿವ್ ಎಂದು ಬಂದಿತ್ತು.

ಇದಾದ ಮರುದಿನವೇ ಹಫೀಜ್ ತಾನು ಕೊರೊನಾ ನೆಗೆಟಿವ್ ಎಂದು ಘೋಷಿಸಿ ಪಿಸಿಬಿಗೆ ಇರಿಸುಮುರುಸು ತಂದಿದ್ದರು. ಖಾಸಗಿ ಮೆಡಿಕಲ್ ಸೌಲಭ್ಯವಿದ್ದೆಡೆ ಪರೀಕ್ಷೆ ನಡೆಸಿದ್ದ ಹಫೀಜ್ ಫಲಿತಾಂಶ ನೆಗೆಟಿವ್ ಬಂದಿತ್ತು. ಹೀಗಾಗಿ ಅಸಮಾಧಾನಗೊಂಡ ಪಿಸಿಬಿ, ಹಫೀಜ್‌ಗೆ ಮರು ಪರೀಕ್ಷೆ ನಡೆಸಿತ್ತು. ಇದರಲ್ಲಿ ಮತ್ತೆ ಹಫೀಜ್‌ಗೆ ಕೊರೊನಾ ಪಾಸಿಟಿವ್ ಎಂದು ಬಂದಿದೆ.

'ಬೋರ್ಡ್ ವಿಚಾರದಲ್ಲಿ ಇದು ಬಹಳ ಕುತೂಹಲಕಾರಿ ಸಂಗತಿಯೆನಿಸಿದೆ. ಕಳೆದ ವಾರ ಕೊರೊನಾ ಪರೀಕ್ಷಾ ಫಲಿತಾಂಶ ಪಾಸಿಟಿವ್ ಎಂದು ಬಂದಿದ್ದ 10 ಆಟಗಾರರ ಫಲಿತಾಂಶ, ಮರು ಪರೀಕ್ಷೆಯ ವೇಳೆ ಏನು ಬರಲಿದೆ ಎಂಬುದು ಕುತೂಹಲ ಮೂಡಿಸಿದೆ,' ಎಂದು ಮೂಲವೊಂದು ಹೇಳಿದೆ.

Story first published: Friday, June 26, 2020, 21:48 [IST]
Other articles published on Jun 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+