ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಎಂದ ಪಾಕಿಸ್ತಾನ ಕ್ರಿಕೆಟಿಗ ಯಾರು?
ಇಸ್ಲಾಮಾಬಾದ್, ಆಗಸ್ಟ್ 31: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ವಿಶ್ವದ ಅಗ್ರ ಬ್ಯಾಟ್ಸ್ ಮನ್ ಎಂದು ಪಾಕಿಸ್ತಾನದ ಕ್ರಿಕೆಟರ್ ಮೊಹಮ್ಮದ್ ಹಫೀಸ್ ಕೊಂಡಾಡಿದ್ದಾರೆ.
ಆಕ್ರಮಣಕಾರಿ ಬ್ಯಾಟಿಂಗ್, ಎಂಥ ಪರಿಸ್ಥಿತಿಯಲ್ಲೂ ತಂಡವನ್ನು ಗೆಲುವಿನ ದಡದತ್ತ ಕೊಂಡೊಯ್ಯಬಲ್ಲ ಛಾತಿ... ಇವೇ ಮುಂತಾದ ತಾಕತ್ತುಗಳಿಂದಾಗಿ ಕೊಹ್ಲಿ ಅವರು, ವಿಶ್ವದ ಬಹುತೇಕ ಕ್ರಿಕೆಟರ್ ಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ, ಈ ಪಟ್ಟಿಗೆ ಹಫೀಜ್ ಹೊಸ ಸೇರ್ಪಡೆಯಷ್ಟೆ.

ಟ್ವಿಟ್ಟರ್ ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಅವರು, ''ಸದ್ಯದ ಪರಿಸ್ಥಿತಿಯಲ್ಲಿ ಕೊಹ್ಲಿ ವಿಶ್ವದ ನಂಬರ್ ಒನ್ ಬ್ಯಾಟ್ಸ್ ಮನ್ ಎಂದೆನಿಸುತ್ತಿದೆ. ವಿಶ್ವದಲ್ಲಿ ಇನ್ನೂ ಕೆಲವಾರು ಅತ್ಯುತ್ತಮ ಬ್ಯಾಟ್ಸ್ ಮನ್ ಗಳಿದ್ದಾರೆ ನಿಜ. ಆದರೆ, ಕೊಹ್ಲಿ ಅವರದ್ದು ವಿಶೇಷ ಸಾಧನೆ'' ಎಂದು ಅವರು ಬಣ್ಣಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ರಾಗ, ದ್ವೇಷಗಳೇನೇ ಇರಲಿ, ಕ್ರಿಕೆಟಿಗರ ನಡುವೆ ಮಾತ್ರ ಒಂದು ಬಾಂಧವ್ಯ ಸದಾ ಇದೆ. ಉಭಯ ರಾಷ್ಟ್ರಗಳ ಆಟಗಾರರನ್ನು ಪರಸ್ಪರ ಕೊಂಡಾಡುವ ಸಂಸ್ಕೃತಿಯಿದೆ. ಇದು ಆರೋಗ್ಯಕರ ಕ್ರೀಡಾ ಮನೋಭಾವಕ್ಕೆ ಸಾಕ್ಷಿ ಎಂದು ಕ್ರೀಡಾ ತಜ್ಞರು ವಿಶ್ಲೇಷಿಸಿದ್ದಾರೆ.
ಪಾಕಿಸ್ತಾನದ ಬೌಲಿಂಗ್ ದಂತಕತೆ ಶೋಯೆಬ್ ಅಕ್ತರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾದಾಗ, ಕ್ರಿಕೆಟ್ ಬ್ಯಾಟೊಂದರ ಮೇಲೆ ಟೀಂ ಇಂಡಿಯಾದ ಎಲ್ಲಾ ಆಟಗಾರರು ತಮ್ಮ ಹಸ್ತಾಕ್ಷರ ಹಾಕಿ ನೆನಪಿನ ಕಾಣಿಕೆಯಾಗಿ ಕಳುಹಿಸಿಕೊಟ್ಟಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications