ದಾಖಲೆಯ ತ್ರಿಶತಕ ಬಾರಿಸಿದ ಪಾಕಿಸ್ತಾನಿ ಕ್ರಿಕೆಟರ್
ಕರಾಚಿ, ಮೇ 25: ಪಾಕಿಸ್ತಾನಿ ಯುವ ಆಟಗಾರ ಬಿಲಾಲ್ ಇರ್ಷಾದ್ ಅವರು 50 ಓವರ್ ಗಳ ಪಂದ್ಯಗಳಲ್ಲಿ ತ್ರಿಶತಕ ಬಾರಿಸಿ ಹೊಸ ದಾಖಲೆ ಬರೆದಿದೆ. ಫಜಲ್ ಮೆಹಮೂದ್ ಇಂಟರ್ ಕ್ಲಬ್ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ 320ರನ್ ಗಳಿಸಿದ್ದು ಅತ್ಯಧಿಕ ವೈಯಕ್ತಿಕ ರನ್ ಗಳಿಕೆ ಎನಿಸಿಕೊಂಡಿದೆ.
ನಿಗದಿತ ಓವರ್ ಗಳ ಪಂದ್ಯಗಳ ಎಲ್ಲಾ ಮಾದರಿಯಲ್ಲೂ 320ರನ್ ಗಳಿಕೆ ಅತ್ಯಧಿಕ ವೈಯಕ್ತಿಕ ರನ್ ಗಳಿಕೆಯಾಗಿದೆ. ಇರ್ಷಾದ್ ಅವರು 175 ಎಸೆತಗಳಲ್ಲಿ 320ರನ್ (42 ಬೌಂಡರಿ ಹಾಗೂ 9 ಸಿಕ್ಸರ್) ಬಾರಿಸಿದ್ದರ ಸ್ಕೋರ್ ಕಾರ್ಡ್ ಸಿಕ್ಕಿಲ್ಲ. [ಸಾವಿರ ರನ್ ಬಾರಿಸಿ ಇತಿಹಾಸ ನಿರ್ಮಿಸಿದ ಪ್ರಣವ್]

ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇರ್ಷಾದ್ ಸಾಧನೆಯನ್ನು ಹೊಗಳಿ, ಈ ಮಟ್ಟದಲ್ಲಿ ತ್ರಿಶತಕ ಬಾರಿಸಿದ ಪ್ರಥಮ ಆಟಗಾರ ಎಂದು ಹೊಗಳಿದೆ.
ಶಹೀದ್ ಅಲಂ ಬಕ್ಷ್ ಕ್ರಿಕೆಟ್ ಕ್ಲಬ್ ಪರ ಆಡಿದ 26 ವರ್ಷ ವಯಸ್ಸಿನ ಬಿಲಾಲ್ ಇರ್ಷಾದ್ ಅವರ ತ್ರಿಶತಕದ ನೆರವಿನಿಂದ ಅವರ ತಂಡ 50 ಓವರ್ ಗಳಲ್ಲಿ 556ರನ್ ಸ್ಕೋರ್ ಮಾಡಿತ್ತು. ಎದುರಾಳಿ ತಂಡ ಅಲ್ ರೆಹಮಾನ್ ಕ್ರಿಕೆಟ್ ಕ್ಲಬ್ 145 ಸ್ಕೋರಿಗೆ ಆಲೌಟ್ ಆಗಿ ಭಾರಿ ಅಂತರದ ಸೋಲು ಕಂಡಿದೆ.
ಭಾರತೀಯರ ದಾಖಲೆ: ಆದರೆ, ಅತಿ ಹೆಚ್ಚು ವೈಯಕ್ತಿಕ ರನ ಗಳಿಕೆ ದಾಖಲೆ(ನಿಗದಿತ ಓವರ್ ಗಳ ಪಂದ್ಯ) ಭಾರತದ ಎಸ್ ಸಂಕೃತ್ ಶ್ರೀರಾಮ್ ಹೆಸರಿನಲ್ಲಿದೆ. 2016ರಲ್ಲಿ ಅಂತರ ಶಾಲಾ ಟೂರ್ನಮೆಂಟ್ ನಲ್ಲಿ ಶ್ರೀರಾಮ್ ದಾಖಲೆ ಆಟವಾಡಿದ್ದ. ಜೆಎಸ್ಎಸ್ ಅಂತಾರಾಷ್ಟ್ರೀಯ ಶಾಲೆ(ಊಟಿ) ಪರ ಆಡಿದ್ದ ಶ್ರೀರಾಮ್ 486ರನ್ ಗಳಿಸಿದ್ದ. ಅಝರ್ ಹಸನ್ ಸ್ಮಾರಕ ರೋಲಿಂಗ್ ಟ್ರೋಫಿ, ಊಟಿ ಪಂದ್ಯದಲ್ಲಿ ನಿಲಗಿರೀಶ್ ಡಿಸಿಎ ವಿರುದ್ಧದ ಪಂದ್ಯ ಇದಾಗಿತ್ತು.
ಇನ್ನಿಂಗ್ಸ್ ವೊಂದರಲ್ಲಿ ಅತ್ಯಧಿಕ ರನ್ ಗಳಿಕೆ ಕೂಡಾ ಭಾರತದ ಬ್ಯಾಟ್ಸ್ ಮನ್ ಹೆಸರಿನಲ್ಲಿದೆ. ಮಹಾರಾಷ್ಟ್ರದ ಪ್ರಣವ್ ಧನವಾಡೆ ಒಂದೇ ಇನ್ನಿಂಗ್ಸ್ ನಲ್ಲಿ 1000ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications