Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಲೆಗೆ ಚೆಂಡು ಬಡಿದು ಕ್ಲಬ್ ಕ್ರಿಕೆಟರ್ ದುರಂತ ಸಾವು

ಕರಾಚಿ, ಆಗಸ್ಟ್ 16: ಪಾಕಿಸ್ತಾನದ ಕ್ಲಬ್ ಕ್ರಿಕೆಟ್ ಆಟಗಾರನೊಬ್ಬ ದುರಂತ ಸಾವನ್ನಪ್ಪಿದ್ದಾರೆ. ಜುಬೇರ್ ಅಹ್ಮದ್ ಎಂಬಾತ ತಲೆಗೆ ಪೆಟ್ಟು ಬಿದ್ದು ಮೈದಾನದಲ್ಲೇ ಅಸುನೀಗಿದ ಘಟನೆ ನಡೆದಿದೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಬುಧವಾರ(ಆಗಸ್ಟ್ 16) ದಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.

ದುರಂತ ಅಂತ್ಯ ಕಂಡ ಕ್ರಿಕೆಟರ್ಸ್ ಪಟ್ಟಿ

ಮರ್ದಾನ್ ಜಿಲ್ಲೆಯ ಖೈಬರ್ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಕ್ಲಬ್ ಪಂದ್ಯದಲ್ಲಿ ಜುಬೈರ್ ಅವರು ಬ್ಯಾಟಿಂಗ್ ಮಾಡುವಾಗ ತಲೆಗೆ ಚೆಂಡು ಬಡಿದು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ.

Pakistan Cricketer Zubair Ahmed Dies After Being Hit by Bouncer


'ಆಟಗಾರರು ಸುರಕ್ಷತೆ ಬಗ್ಗೆ ಗಮನಹರಿಸಬೇಕು, ಹೆಲ್ಮೆಟ್ ಧರಿಸದೇ ಆಡಬಾರದು ಅಂತಾನೂ ಮನವಿ ಸಹಿತ, ಸಾವಿನ ಸುದ್ದಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದೆ.

ಎದೆಗೆ ಚೆಂಡು ಬಡಿದು ಯುವ ಕ್ರಿಕೆಟರ್ 'ದುರಂತ' ಸಾವು

ಫಖರ್ ಜಮಾನ್ ಅಕಾಡೆಮಿ ಪರವಾಗಿ ಜುಬೈನ್ ಅವರು ಆಡುತ್ತಿದ್ದರು. ಬ್ಯಾಟಿಂಗ್ ಮಾಡುತ್ತಿದ್ದ ಜುಬೇರ್ ತಲೆಗೆ ಹೆಲ್ಮೆಟ್ ಹಾಕಿರಲಿಲ್ಲ. ಶಾರ್ಟ್ ಪಿಚ್ ಬಾಲ್ ಒಂದು ವೇಗವಾಗಿ ಬಂದು ತಲೆಗೆ ಬಡಿದಿದ್ದರಿಂದ ಸಾವನ್ನಪ್ಪಿದ್ದಾನೆ.



ಇತ್ತೀಚೆಗೆ ಅಭ್ಯಾಸ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾದ ಉಪನಾಯಕ ಡೇವಿಡ್ ವಾರ್ನರ್ ಕುತ್ತಿಗೆಗೆ ಕೂಡ ಪೆಟ್ಟು ಬಿದ್ದಿತ್ತು. ಜೋಶ್ ಹೇಜಲ್ವುಡ್ ಎಸೆದ ಚೆಂಡು ವಾರ್ನರ್ ಕುತ್ತಿಗೆಗೆ ತಗುಲಿತ್ತು. ವಾರ್ನರ್ ಚೇತರಿಸಿಕೊಳ್ಳುತ್ತಿದ್ದು, ಬಾಂಗ್ಲಾ ವಿರುದ್ಧದ ಟೆಸ್ಟ್ ಗೆ ಫಿಟ್ ಆಗಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+