Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ- ಪಾಕ್ ಕ್ರಿಕೆಟ್ ಸದ್ಯಕ್ಕೆ ಸಾಧ್ಯವಿಲ್ಲ ಬಿಡಿ

ಬೆಂಗಳೂರು, ಮಾರ್ಚ್ 20: ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಸರಣಿ ಮತ್ತೆ ಆರಂಭವಾಗಲಿದೆ ಎಂಬ ಸುದ್ದಿ ಕಳೆದೆರಡು ದಿನಗಳಿಂದ ಹರಿದಾಡುತ್ತಿದೆ. ಸರ್ಜಿಕಲ್ ಸ್ಟ್ರೈಕ್ ನಿಂದಾಗಿ ಹದೆಗೆಟ್ಟಿದ್ದ ಭಾರತ ಹಾಗೂ ಪಾಕಿಸ್ತಾನದ ಸಂಬಂಧ ಹದಗೆಟ್ಟಿದ್ದು, ಸರಣಿ ಆರಂಭ ಡೌಟ್ ಎನಿಸಿದೆ. ಸರಣಿ ಕಷ್ಟಸಾಧ್ಯ ಎಂದು ಪಾಕಿಸ್ತಾನದ ಆಟಗಾರರು ಪಿಸಿಬಿಗೆ ತಿಳಿಸಿದ್ದಾರೆ.

ಬಿಸಿಸಿಐ ಕೇಂದ್ರ ಗೃಹ ಸಚಿವಾಲಯಕ್ಕೆ ಅನುಮತಿ ಕೋರಿ ಪತ್ರ ಬರೆದಿದ್ದಾರೆ. 2014ರ ಫ್ಯೂಚರ್ ಟೂರ್ಸ್ ಆಂಡ್ ಪ್ರೋಗ್ರಾಂ(ಎಫ್‍ಟಿಪಿ) ನಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯಬೇಕು.

Pakistan cricketers advise PCB not to expect bilateral series against India

ಆದರೆ, ಉಗ್ರರ ದಾಳಿ ಮತ್ತು ಗಡಿಯಲ್ಲಿನ ಉದ್ವಿಗ್ನ ವಾತಾವರಣದಿಂದಾಗಿ, ಸರಣಿ ಆಡಲು ಬಿಸಿಸಿಐಗೆ ಸರ್ಕಾರ ಅನುಮತಿ ನೀಡಿರಲಿಲ್ಲ. ಈಗ ದುಬೈನಲ್ಲಿ ಸರಣಿ ಆಯೋಜಿಸಲು ಬಿಸಿಸಿಐ ಮುಂದಾಗಿದ್ದು, ಈ ಕುರಿತಂತೆ ಅನುಮತಿ ನೀಡುವಂತೆ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ.

ಭಾರತ ಪಾಕಿಸ್ತಾನ ನಡುವೆ 2017-08ರಲ್ಲಿ ಕೊನೆಯ ಟೆಸ್ಟ್ ಸರಣಿ ನಡೆದಿದ್ದರೆ, 2012-13ರಲ್ಲಿ ಕೊನೆಯ ಏಕದಿನ ಸರಣಿ ನಡೆದಿತ್ತು. ಎರಡೂ ತಂಡಗಳು 2016ರ ಮಾರ್ಚ್ ನಲ್ಲಿ ಕೊನೆಯ ಪಂದ್ಯವನ್ನು ಆಡಿತ್ತು. ಕೋಲ್ಕತ್ತಾದಲ್ಲಿ ನಡೆದ ಟಿ20 ವಿಶ್ವಕಪ್‍ನಲ್ಲಿ ಭಾರತ 6 ವಿಕೆಟ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು. ಈಗ ಎಲ್ಲವೂ ಬಿಸಿಸಿಐ ಅಂದು ಕೊಂಡಂತೆ ನಡೆದರೆ, ಸೆಪ್ಟೆಂಬರ್ ನಲ್ಲಿ ಮೂರು ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿ ಸಾಧ್ಯವಿದೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+