IND vs PAK: ಕನ್ನಡಿಗ ಭರತ್ ಚಿಪ್ಲಿ ಹೋರಾಟ ವ್ಯರ್ಥ: ಪಾಕ್‌ಗೆ 6 ವಿಕೆಟ್ ಜಯ
ಹಾಂಕಾಂಗ್ ಇಂಟರ್‌ನ್ಯಾಷನಲ್ ಸಿಕ್ಸಸ್ ಸರಣಿಯ ನಡೆಯುತ್ತಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ 6 ವಿಕೆಟ್ ಸೋಲು ಕಂಡಿದೆ. ಪಾಕ್ ತಂಡದ ಸ್ಟಾರ್ ಬ್ಯಾಟರ್ ಆಸೀಫ್ ಅಲಿ ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಮಿಂಚಿದರು.
ಮೊಂಗ್ ಕಾಕ್ ದಲ್ಲಿ ನಡೆದ ಪೂಲ್ ಸಿ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಆರು ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 119 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಾಕ್ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 121 ರನ್ ಸೇರಿಸಿ ಗೆಲುವು ದಾಖಲಿಸಿತು. ಈ ಮೂಲಕ ಭಾರತ ತಾನಾಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ. ಪಾಕ್ ಗೆಲುವಿನ ಖಾತೆ ತೆರೆದಿದೆ.

ಉತ್ತಪ್ಪ 33 ರನ್
ಭಾರತದ ಪರ ಇನಿಂಗ್ಸ್ ಆರಂಭಿಸಿದ ನಾಯಕ ರಾಬಿನ್ ಉತ್ತಪ್ಪ ಹಾಗೂ ಭರತ್ ಚಿಪ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 1.2 ಓವರ್‌ಗಳಲ್ಲಿ 33 ರನ್ ಸೇರಿಸಿತು. ಉತ್ತಪ್ಪ 33 ರನ್ ಬಾರಿಸಿ ಔಟ್ ಆದರು. ಇವರ ಇನಿಂಗ್ಸ್‌ನಲ್ಲಿ 3 ಬೌಂಡರಿ, 3 ಸಿಕ್ಸರ್ ಸೇರಿವೆ.
ಭರತ್ ಚಿಪ್ಲಿ ಅರ್ಧಶತಕ
ಆರಂಭಿಕರಾಗಿ ಕಣಕ್ಕೆ ಇಳಿದ ಭರತ್ ಚಿಪ್ಲಿ ತಮ್ಮಲ್ಲಿರುವ ಬ್ಯಾಟಿಂಗ್ ಕ್ಷಮತೆಯನ್ನು ತೋರಿಸಿದರು. ಕ್ಲಾಸಿಕ್ ಬ್ಯಾಟಿಂಗ್ ಮಾಡಿದ ಚಿಪ್ಲಿ 16 ಎಸೆತಗಳಲ್ಲಿ 53 ರನ್ ಸಿಡಿಸಿದ್ರು. ಇದರಲ್ಲಿ 6 ಬೌಂಡರಿ, 4 ಸಿಕ್ಸರ್ ಸೇರಿವೆ. ಇವರು 53 ರನ್ ಬಾರಿಸಿದ್ದಾಗ ನಿವೃತ್ತರಾದರು. ಭಾರತ ತಂಡದ ಪರ ಕೇದಾರ್ ಜಾದವ್ 8 ರನ್ ಗಳಿಗೆ ಆಟ ಮುಗಿಸಿದರು. ಮನೋಜ್ ತೀವಾರಿ 7 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 17 ರನ್ ಸಿಡಿಸಿ ಔಟ್ ಆದರು. ಸ್ಟುವರ್ಟ್ ಬಿನ್ನಿ 4 ರನ್ ಮಾಡಿದರು. ಪಾಕ್ ಪರ ಫಹೀಂ ಅಶ್ರಫ್ ಎರಡು ವಿಕೆಟ್ ಪಡೆದು ಮಿಂಚಿದರು.
ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟ
ಪಾಕಿಸ್ತಾನ ತಂಡದ ಪರ ಮುಹಮ್ಮದ್ ಅಖ್ಲಾಕ್ ಹಾಗೂ ಆಸಿಫ್ ಅಲಿ ತಮ್ಮ ಬ್ಯಾಟಿಂಗ್ ಸೊಬಗನ್ನು ಅನವಾವರಣ ಗೊಳಿಸಿದರು. ಆಸೀಫ್ ಅಲಿ 14 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್ ಸಹಾಯದಿಂದ 55 ರನ್ ಸಿಡಿಸಿ ನಿವೃತ್ತಿ ಹೊಂದಿದರು. ಮುಹಮ್ಮದ್ ಅಖ್ಲಾಕ್ 3 ಬೌಂಡರಿ, 4 ಸಿಕ್ಸರ್ ನೆರವಿನಿಂದ ಅಜೇಯ 40 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದ ಫಹೀಂ ಅಶ್ರಫ್ ಅಜೇಯ 22 ರನ್ ಸಿಡಿಸಿ ಗೆಲುವಿನಲ್ಲಿ ಮಿಂಚಿದರು. ಭಾರತದ ಪರ ಯಾವೊಬ್ಬ ಬೌಲರ್ ಸಹ ವಿಕೆಟ್ ಬೇಟೆ ನಡೆಸಲಿಲ್ಲ.
ಭಾರತ ತನ್ನ ಎರಡನೇ ಪಂದ್ಯವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ನವೆಂಬರ್ 2 ರಂದು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications