ಪಾಕಿಸ್ತಾನ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ಆರಂಭದಲ್ಲಿ ನಿರಾಸೆ ಅನುಭವಸಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಆಡಲಾಗುತ್ತಿರುವ ಈ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಅಮೋಘ ಪ್ರದರ್ಶನ ನೀಡಿದೆ. ಲಾಹೋರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡ 93 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಅಬ್ಬರಿಸಿದೆ. ಅಲ್ಲದೆ ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಶುಭಾರಂಭ ಮಾಡಿದೆ.
ಬುಧವಾರ ನಾಲ್ಕನೇ ದಿನದಾಟವನ್ನು 2 ವಿಕೆಟ್‌ಗೆ 51 ರನ್‌ಗಳಿಂದ ಆಟವನ್ನು ಮುಂದುವರೆಸಿದ ಪ್ರವಾಸಿ ದಕ್ಷಿಣ ಆಫ್ರಿಕಾ 183 ರನ್‌ಗಳಿಗೆ ಆಲೌಟ್ ಆಯಿತು. ಪ್ರವಾಸಿ ತಂಡದ ಪರ ಆರಂಭಿಕ ರಯಾನ್ ರಿಕಲ್ಟನ್ 145 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 45 ರನ್ ಬಾರಿಸಿ 6ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿದರು. ದಕ್ಷಿಣ ಆಫ್ರಿಕಾ ಪರ ಜೊತೆಯಾಟಗಳು ಬಾರದೆ ಇದ್ದಿದ್ದರಿಂದ ತಂಡ ಸೋಲು ಕಂಡಿತು. ದಕ್ಷಿಣ ಆಫ್ರಿಕಾದಪರ ಯುವ ಬ್ಯಾಟರ್ ಡೇವಾಲ್ಡ್ ಬ್ರೆವಿಸ್ 54 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 54 ರನ್ ಸಿಡಿಸಿ ಔಟ್ ಆದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಜಕುವಲ್ಲಿ ವಿಫಲರಾದರು.

ಪಾಕಿಸ್ತಾನ ತಂಡದ ಪರ ನಮನ್ ಅಲಿ (Noman Ali) ಎರಡನೇ ಇನಿಂಗ್ಸ್‌ನಲ್ಲೂ ಅಮೋಘ ಪ್ರದರ್ಶನ ನೀಡಿದರು. ಇವರ ಪಿರ್ಕಿ ಎದುರಿಸುವಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ವಿಫಲರಾದರು. ಇವರು 79 ರನ್ ನೀಡಿ 4 ವಿಕೆಟ್ ಕಬಳಿಸಿದರು. ವೇಗ ಶಾಹಿನ್ ಶಾ ಆಫ್ರಿದಿ 33 ರನ್‌ಗೆ 4 ವಿಕೆಟ್ ಉರುಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಮೊದಲ ಇನಿಂಗ್ಸ್‌ನ್ಲಿ 378 ರನ್ ಕಲೆ ಹಾಕಿತು. ಈ ವೇಳೆ ಇಮಾಮ್ ಉಲ್ ಹಕ್ (93), ಶಾನ್ ಮಸೂದ್ (76), ಭರವಸೆಯ ಆಟಗಾರ ಸಲ್ಮಾನ್ ಆಘಾ (93),ಸ್ಟಾರ್ ಆಟಗಾರ ಮೊಹಮ್ಮದ್ ರಿಜ್ವಾನ್ (75) ತಂಡದ ಮೊತ್ತವನ್ನು ಹಿಗ್ಗಿಸಿದರು. ಮೊದಲ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಟೋನಿ ಡಿ ಜೋರ್ಜಿ ಅವರ ಶತಕದ ನೆರವಿನಿಂದ 269 ರನ್‌ಗಳಿಗೆ ಆಲೌಟ್ ಅಯಿತು. ಪಾಕ್ ಪರ ನಮನ್ ಅಲಿ 6 ವಿಕೆಟ್ ಉರುಳಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ಪಾಕ್ 167 ರನ್‌ಗೆ ಅಲೌಟ್ ಆಯಿತು. ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್‌ನಲ್ಲಿ 183 ರನ್ ಸೇರಿಸಿ ಸೋಲು ಕಂಡಿತು.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2025-27ರ ಸಾಲಿನ ಮೊದಲ ಪಂದ್ಯವನ್ನು ಆಡಿದ ಪಾಕ್ ಅಂಕ ಪಟ್ಟಿಯಲ್ಲಿ ಭರ್ಜರಿ ಲಾಭ ಪಡೆದಿದೆ. ಆಡಿರುವ 1 ಪಂದ್ಯ ಗೆದ್ದ ಪಾಕ್ ಗೆಲುವಿನ ಶೆಕಡಾವಾರು ನೂರಕ್ಕೆ ನೂರರೊಂದಿಗೆ ಎರಡನೇ ಸ್ಥಾನವನ್ನು ಪಡೆದಿದೆ. ಇನ್ನು ಭಾರತ ಆಡಿದ 7 ಪಂದ್ಯಗಳಲ್ಲಿ 4 ಜಯ, 2 ಸೋಲ, 1 ಡ್ರಾ ಸಾಧಿಸಿದ್ದು, ಗೆಲುವಿನ ಶೇಕಡಾ ವಾರು 61.90 ಆಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಅಂಕ ಪಟ್ಟಿಯನ್ನು ಗೆಲುವಿನ ಶೇಕಡಾ ವಾರಿನ ಮೇಲೆ ನಿರ್ಧರಿಸಲಾಗುತ್ತದೆ. ಹೀಗಾಗಿ ಭಾರತ, ಪಾಕ್‌ಕ್ಕಿಂತಲೂ ಕೆಳಗೆ ಇದೆ. ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿದೆ. ಈ ಸರಣಿಯು ಮುಗಿದ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲಿದೆ.