ಪಿಸಿಬಿ ಇಟ್ಟಿದ 5 ಬೇಡಿಕೆಗಳನ್ನು ತಿರಸ್ಕರಿಸಿದ ಐಸಿಸಿ
ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯುತ್ತದಾ ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಈ ಪಂದ್ಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ದಿನವೂ ಒಂದು ಹೊಸ ನಾಟಕವನ್ನು ಮಾಡುತ್ತಿದೆ. ಸೋಮವಾರ ನಡೆದ ಸಭೆಯಲ್ಲಿ ಪಿಸಿಬಿ, ಐಸಿಸಿ ಮುಂದೆ ಮೂರು ಷರತ್ತುಗಳನ್ನು ಇರಿಸಿತ್ತು. ಐಸಿಸಿ ಷರತ್ತುಗಳನ್ನು ತಿರಸ್ಕರಿಸಿದೆ.
ಭಾರತ ಹಾಗೂ ಪಾಕ್ ತಂಡಗಳು ಫೆ.15 ರಂದು ಕಣಕ್ಕೆ ಇಳಿಯುತ್ತವಾ ಎಂಬ ಬಗ್ಗೆ ಇನ್ನೇನು ಅಂತಿಮ ನಿರ್ಧಾರ ಹೊರ ಬೀಳಬೇಕಿದೆ. ಸೋಮವಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧಿಕಾರಿಗಳ ಸಭೆ ಲಾಹೋರ್‌ದಲ್ಲಿ ನಡೆಯಿತು. ಈ ವೇಳೆ ಪಿಸಿಬಿ ಇಟ್ಟಿದ್ದ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಪಿಸಿಬಿ ಇಟ್ಟ ಬೇಡಿಕೆಗೆ ಐಸಿಸಿ ಹೇಳಿದ್ದೇನು?
ಬೇಡಿಕೆ 1:
ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಹೊರಗಿಟ್ಟರೂ, ಐಸಿಸಿ ಆದಾಯದ ಪಾಲನ್ನು ನೀಡಬೇಕು ಎಂದು ಪಿಸಿಬಿ ಒತ್ತಾಯಿಸಿತ್ತು. ಅಲ್ಲದೆ ಪ್ರಮುಖವಾಗಿ ಬಾಂಗ್ಲಾದೇಶದ ಮೇಲೆ ಯಾವುದೇ ಆರ್ಥಿಕ ದಂಡ ವಿಧಿಸಬಾರದು ಎಂದು ಬೇಡಿಕೆ ಇಡಲಾಗಿತ್ತು.
ಐಸಿಸಿ ತಿಳಿಸಿದ್ದು: ಈ ಬಗ್ಗೆ ಈಗಾಗಲೇ ನಿರ್ಧರಿಸಲಾಗಿದ್ದು ಬಿಸಿಬಿ ದಂಡ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಬೇಡಿಕೆ 2:
ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಿದ ಬಾಂಗ್ಲಾದೇಶಕ್ಕೆ ಹೆಚ್ಚುವರಿ ಐಸಿಸಿ ಕಾರ್ಯಕ್ರಮವನ್ನು ನೀಡಬೇಕು ಎಂದು ಪಿಸಿಬಿ ಬೇಡಿಕೆ ಇಟ್ಟಿತ್ತು.
ಐಸಿಸಿ ತಿಳಿಸಿದ್ದು: ಮುಂದಿನ ಬಾರಿಯ ಅಂಡರ್ 19 ವಿಶ್ವಕಪ್‌ಗೆ ಬಾಂಗ್ಲಾವನ್ನು ಪರಿಗಣಿಸಲಾಗುತ್ತದೆ.
ಬೇಡಿಕೆ 3
ಭಾರತ ಹಾಗೂ ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಸರಣಿಯ ನಡೆಸುವ ಬಗ್ಗೆ ಐಸಿಸಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಳಿತ್ತು.
ಐಸಿಸಿ ತಿಳಿಸಿದ್ದು: ಈ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದೆ. ಅಲ್ಲದೆ ದ್ವಿಪಕ್ಷೀಯ ಸರಣಿ ಹಾಗೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳು ತನ್ನ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿಸಿದೆ.
ಬೇಡಿಕೆ 4
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ತ್ರಿಕೋನ ಸರಣಿ ಬಗ್ಗೆ ಪ್ರಸ್ತಾಪ.
ಐಸಿಸಿ ತಿಳಿಸಿದ್ದು: ಈ ತೀರ್ಮಾನ ಸಹ ತನ್ನ ಆಡಳಿತ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಬೇಡಿಕೆ 5
2026ರಲ್ಲಿ ಭಾರತ, ಬಾಂಗ್ಲಾದೇಶ ಪ್ರವಾಸದ ಬಗ್ಗೆ ಐಸಿಸಿ ಮಧ್ಯಸ್ಥಿಕೆ ವಹಿಸಬೇಕು
ಐಸಿಸಿ ತಿಳಿಸಿದ್ದು: ಮಧ್ಯಪ್ರವೇಶಿಸಲು ಸಾಧ್ಯವಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications