ಪಾಕಿಸ್ತಾನ್ ದೇಸಿ ಕ್ರಿಕೆಟರ್ ಬಿಸ್ಮಿಲ್ಲಾ ಖಾನ್‌ಗೆ ಕೊರೊನಾ ಪಾಸಿಟಿವ್

ಇಸ್ಲಮಾಬಾದ್: ಪಾಕಿಸ್ತಾನದ ದೇಸಿ ಕ್ರಿಕೆಟರ್ ಬಿಸ್ಮಿಲ್ಲಾ ಖಾನ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಅವರೀಗ ಐಸೋಲೇಶನ್‌ನಲ್ಲಿದ್ದಾರೆ ಎಂದು ವರದಿ ಹೇಳಿದೆ. ಟೂರ್ನಿಯೊಂದರಲ್ಲಿ ಆಡುತ್ತಿರುವಾಗ ಖಾನ್‌ಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು ಎನ್ನಲಾಗಿದೆ.
ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿಯ ಪ್ರಕಾರ, ಬಲೋಚಿಸ್ತಾನ್ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಬಿಸ್ಮಿಲ್ಲಾ ಖಾನ್ ಅವರಿಗೆ ಕ್ವಾಯಿದ್ ಇ ಅಝಾಮ್ ಟ್ರೋಫಿ ಟೂರ್ನಿಯಲ್ಲಿ ಸದರ್ನ್ ಪಂಜಾಬ್ ವಿರುದ್ಧ ಆಡುತ್ತಿದ್ದಾಗ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು.
ದ್ವಿತೀಯ ಸುತ್ತಿನ ಪಂದ್ಯದ ವೇಳೆ ರೋಗ ಲಕ್ಷಣಗಳು ಕಾಣಸಿಕೊಂಡಿದ್ದರೂ ಖಾನ್ ಪರೀಕ್ಷೆ ಮಾಡಿಸಿಕೊಂಡಿರಲಿಲ್ಲ. ನಾಲ್ಕನೇ ದಿನದಾಟದ ವೇಳೆ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಕಾಣಿಸಿತ್ತು. ಬಳಿಕ ಖಾನ್ ಬದಲಿಗೆ ಅದ್ನನ್ ಅಕ್ಮಲ್ ಅವರನ್ನು ಮೈದಾನಕ್ಕಿಳಿಸಲಾಗಿತ್ತು.
ಈ ಬೆಳವಣಿಗೆ ಟೂರ್ನಿಯಲ್ಲಿ ಇನ್ನುಳಿದ ಇತರ ಆರು ತಂಡಗಳ ಸಂಶಯಕ್ಕೂ ಕಾರಣವಾಗಿತ್ತು. ಯಾಕೆಂದರೆ ಎಲ್ಲಾ ಆರು ತಂಡಗಳೂ ಒಂದೇ ಹೋಟೆಲ್‌ನಲ್ಲಿ ತಂಗಿದ್ದವು. ಆದರೆ ಆ ಎಲ್ಲಾ ಆಟಗಾರರಿಗೆ, ಸಿಬ್ಬಂದಿಗೆ ಕೊರೊನಾ ನೆಗೆಟಿವ್ ಬಂದಿದೆ ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications