Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ, ಪಾಕ್‌ ಪಂದ್ಯ ರದ್ದಾದರೆ ಜಾಗತಿಕ ಕ್ರಿಕೆಟ್ ಆರ್ಥಿಕತೆಗೆ 4,500 ಕೋಟಿ ನಷ್ಟ

ಆಧುನಿಕ ಯುಗದ ಕ್ರಿಕೆಟ್‌ ಆರ್ಥಿಕತೆಯಲ್ಲಿ ಕೆಲವೊಂದು ಪಂದ್ಯಗಳು ಟ್ರೋಫಿಗಿಂತಲೂ ಹೆಚ್ಚಿನ ಮಹತ್ವವನ್ನು ಪಡೆಯುತ್ತವೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿ ವೇಳಾಪಟ್ಟಿಯಲ್ಲಿ ಒಂದು ಪಂದ್ಯವಾಗಿರದೆ, ಅದುವೇ ಮೆಗಾ ಟೂರ್ನಿಯ ಪ್ರಧಾನ ಪಂದ್ಯ. ಟೂರ್ನಿಯ ಆರ್ಥಿಕತೆಯನ್ನು ಆ ಒಂದು ಪಂದ್ಯ ನಿರ್ಧರಿಸುತ್ತದೆ. ಅಲ್ಲದೆ ಪ್ರಸಾರದ ಮೌಲ್ಯವು ಸಹ ಹೆಚ್ಚಾಗುತ್ತದೆ. ಇದರಿಂದ ಬೇರೆ ಕ್ರಿಕೆಟ್‌ ಮಂಡಳಿಗೂ ಪರೋಕ್ಷವಾಗಿ ಸಹಾಯವಾಗುತ್ತದೆ.

ಭಾರತ ಹಾಗೂ ಶ್ರೀಲಂಕಾ ಆಯೋಜಿಸಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸಲಿದೆ. ಆದರೆ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ತಿಳಿಸಿದೆ. ಒಂದು ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ರೀತಿಯಾದ ನಿರ್ಧಾರವನ್ನು ತೆಗೆದುಕೊಂಡಲ್ಲಿ ಐಸಿಸಿ ಸಹ ಶಿಸ್ತು ಕ್ರಮ ತೆಗೆದುಕೊಳ್ಳುವುದು ಎಂದು ಸಂದೇಶವನ್ನು ಸಹ ಈಗಾಗಲೇ ರವಾನಿಸಿದೆ. ಪಾಕ್‌, ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ, ಜಾಗತಿಕ ಕ್ರಿಕೆಟ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ.

Pakistan

ಭಾರತ ಹಾಗೂ ಪಾಕಿಸ್ತಾನದ ಪಂದ್ಯದ ಮೌಲ್ಯವನ್ನು ಸುಮಾರು 4500 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಪ್ರಸಾರ ಹಕ್ಕುಗಳು, ಜಾಹೀರಾತು ಪ್ರೀಮಿಯಂಗಳು, ಪ್ರಾಯೋಜಕತ್ವಗಳು, ಟಿಕೆಟ್ ಮಾರಾಟ ಮತ್ತು ಕಾನೂನುಬದ್ಧ ಬೆಟ್ಟಿಂಗ್ ಸೇರಿದಂತೆ ಇತರ ವಾಣಿಜ್ಯ ಚಟುವಟಿಕೆಗಳನ್ನು ಒಟ್ಟಾಗಿ ಲೆಕ್ಕಹಾಕಿದಾಗ ಮೌಲ್ಯ ಕಂಡುಬರುತ್ತದೆ.

ಪ್ರಸಾರ ಹಕ್ಕುಗಳನ್ನು ಪಡೆದವರಿಗೆ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಚಿನ್ನದ ಕೋಳಿ ಇಡುವ ಮೊಟ್ಟೆಯಾಗಿದೆ. ಈ ಪಂದ್ಯದ ಪ್ರತಿ 10 ಸೆಕೆಂಡ್‌ ಜಾಹಿರಾತಿನ ಬೆಲೆ ಸುಮಾರು 25 ರಿಂದ 40 ಲಕ್ಷ ರೂ ಎಂದು ಅಂದಾಜಿಲಸಾಗಿದೆ. ಒಂದು ವೇಳೆ ಈ ಪಂದ್ಯದಿಂದ ಪಾಕ್‌ ಹಿಂದೆ ಸರಿದರೆ, ಟೂರ್ನಿಯ ಸಂಪೂರ್ಣ ಆರ್ಥಿಕತೆಯ ಮೇಲೆ ಪೆಟ್ಟು ಬೀಳಲಿದೆ.

ಯಾರಿಗೆ ಎಷ್ಟು ಹಾನಿ?

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ರದ್ದಾದಲ್ಲಿ ತಕ್ಷಣಕ್ಕೆ ಪ್ರಸಾರದ ಹಕ್ಕುಗಳನ್ನು ಹೊಂದಿದವರಿಗೆ ನೇರವಾಗಿ ಹೊಡೆತ ಬೀಳುತ್ತದೆ. ಈ ಒಂದೇ ಪಂದ್ಯದಿಂದ ಜಾಹೀರಾತು ಆದಾಯವನ್ನು 300 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಪ್ರಸಾರದ ಹಕ್ಕುಗಳನ್ನು ವಾಪಸ್‌ ಮಾಡಿದ ನಂತರ ಅದರಿಂದ ಬಿದ್ದ ಪೆಟ್ಟನ್ನು ಐಸಿಸಿ ಬೇರೆ ಕಡೆಗೆ ವರ್ಗಾಯಿಸುತ್ತದೆ. ಒಂದು ವೇಳೆ ಭಾರತ ಹಾಗೂ ಪಾಕ್‌ ನಡೆಯದೇ ಇದ್ದರೇ ನೇರವಾಗಿ ಪ್ರಸಾರ ಹಕ್ಕು ಹೊಂದಿದವರಿಗೆ 200 ಕೋಟಿ ರೂ ನಷ್ಟವಾಗಲಿದೆ.

ಐಸಿಸಿ ಆದಾಯದ ಒಟ್ಟು 5.75 ರಷ್ಟು ಶೇಕಡಾ ಪಿಸಿಬಿ ಪಡೆಯುತ್ತಿದೆ. ಇದು ವಾರ್ಷಿಕವಾಗಿ
ಸರಿಸುಮಾರು 34.51 ಮಿಲಿಯನ್ ಯುಎಸ್‌ ಡಾಲರ್‌ ಆಗಿದೆ. ಉಭಯ ಮಂಡಳಿಗಳು ಒಪ್ಪಂದಕ್ಕೆ ಸಹಿ ಹಾಕಿರುತ್ತವೆ. ಅದರಲ್ಲಿ ಪಂದ್ಯವಾಳಿಯಿಂದ ಹಿಂದೆ ಸರಿಯಬಹುದಾದ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಪ್ರಸ್ತಾಪ ಮಾಡಿರಲಾಗುತ್ತದೆ.

ಹೀಗೆ ಆದಲ್ಲಿ

- ವಿಮಾ ರಕ್ಷಣೆ ಸಿಗುವುದಿಲ್ಲ
- ತಂಡಕ್ಕೆ ಕಾನೂನು ರಕ್ಷಣೆ ನೀಡಲಾಗುವುದಿಲ್ಲ
- ಹಾನಿ, ದಂಡ ಮತ್ತು ಪರಿಹಾರದ ಹಕ್ಕುಗಳಿಗೆ ಸಂಪೂರ್ಣವಾಗಿ ಗುರಿಯಾಗಬೇಕಾಗುತ್ತದೆ

Story first published: Monday, February 2, 2026, 18:27 [IST]
Other articles published on Feb 2, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+