For Quick Alerts
ALLOW NOTIFICATIONS  
For Daily Alerts
 

ಭಾರತದ ರಾಷ್ಟ್ರಗೀತೆ ಹಾಡಿ ಮೆಚ್ಚುಗೆ ಗಿಟ್ಟಿಸಿದ ಪಾಕ್‌ ಅಭಿಮಾನಿ!

Pakistan fan sings Indian national anthem, wins hearts

ಮ್ಯಾಂಚೆಸ್ಟರ್‌, ಜೂನ್‌ 17: ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯವನ್ನು ಯುದ್ಧದಂತೆ ನೋಡುವವರೇ ಹೆಚ್ಚು. ಹೀಗಿರುವಾಗ ಭಾನುವಾರ ನಡೆದ ಇಂಡೊ-ಪಾಕ್‌ ಪಂದ್ಯದ ವೇಳೆ ಪಾಕಿಸ್ತಾನದ ಅಭಿಮಾನಿಯೊಬ್ಬ ಭಾರತದ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಮೆಚ್ಚಿಗೆಗೆ ಪಾತ್ರನಾಗಿದ್ದಾನೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಕಪ್ಪು ಟಿ-ಶರ್ಟ್‌ ತೊಟ್ಟು ಕುತ್ತಿಗೆಗೆ ಪಾಕಿಸ್ತಾನದ ಧ್ವಜ ಸುತ್ತುಕೊಂಡಿದ್ದ ಪಾಕಿಸ್ತಾನದ ಅಭಿಮಾನಿ, ಭಾನುವಾರ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆದ ಇಂಡೊ-ಪಾಕಿಸ್ತಾನ ನಡುವಣ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆಯನ್ನು ಹಾಡಿದ್ದಾನೆ. ಈ ಸಂದರ್ಭದಲ್ಲಿ ಆತನ ಸುತ್ತಲೂ ಇದ್ದ ಜನರೆಲ್ಲಾ ಚಪ್ಪಾಳೆ ಹೊಡೆದು ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರೀತಿ ಬೆಸೆಯುವ ಆತನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮತ್ತೊಂದೆಡೆ ಭಾರತ ಮತ್ತು ಪಾಕಿಸ್ತಾನದ ಜಂಟಿ ಟಿ-ಶರ್ಟ್‌ ತೊಟ್ಟ ದಂಪತಿಗಳು ಕೂಡ ಎಲ್ಲರ ಮನಸ್ಸು ಗೆದ್ದರು. ಇದರಲ್ಲಿ ಪಾಕಿಸ್ತಾನ ಮೂಲದ ಪತಿ ಮತ್ತು ಭಾರತ ಮೂಲಕ ಪತ್ನಿಯು ಎರಡೂ ರಾಷ್ಟ್ರಗಳ ರಾಷ್ಟ್ರಗಳ ತಂಡದ ಜರ್ಸಿಯನ್ನು ಸಮನಾಗಿ ಹಂಚಿರುವ ಟಿ-ಶರ್ಟ್‌ ತೊಟ್ಟು ಉಭಯ ರಾಷ್ಟ್ರಗಳ ನಡುವಣ ಬಾಂಧ್ಯವ ವೃದ್ಧಿಸುವ ಸಂದೇಶ ಸಾರಿದರು.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ರೋಹಿತ್‌ ಶರ್ಮಾ ಅವರ ಅದ್ಭುತ 140 ರನ್‌ಗಳ ಶತಕದೊಂದಿಗೆ 50 ಓವರ್‌ಗಳಲ್ಲಿ 336/5 ರನ್‌ಗಳ ಶಿಖರ ನಿರ್ಮಿಸಿತು. ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಮಳೆಯಿಂದಾಗಿ ಅಡಚಣೆಯಾದ ಕಾರಣ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 40 ಓವರ್‌ಗಳಲ್ಲಿ 302 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಅಂತಿಮವಾಗಿ ಪಾಕ್‌ ಪಡೆ 40 ಓವರ್‌ಗಳಳಲ್ಲಿ 6 ವಿಕೆಟ್‌ಗೆ 212 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿ ಸಳಿಗೆ ಶರಣಾಯಿತು.

Story first published: Monday, June 17, 2019, 18:57 [IST]
Other articles published on Jun 17, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+