For Quick Alerts
ALLOW NOTIFICATIONS  
For Daily Alerts
 

ಪಾಕ್‌ ಅಭಿಮಾನಿಗೆ ಸೋಷಿಯಲ್‌ ಮೀಡಿಯಾದಲ್ಲಿ ಶೇಪ್‌ ಔಟ್‌!

Pakistan fan trolled on social media after loss to Australia

ಟೌನ್ಟನ್‌, ಜೂನ್‌ 12: ಪ್ರಸಕ್ತ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಬುಧವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಉತ್ತಮ ಅವಕಾಶವನ್ನು ಪಾಕಿಸ್ತಾನ ಕೈಚೆಲ್ಲಿ ಸೋಲುಂಡ ಬಳಿಕ ಪಾಕ್‌ ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೊಲ್‌ಗೆ ಗುರಿಯಾಗಿದ್ದಾನೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪಂದ್ಯದಲ್ಲಿ ಪಾಕಿಸ್ತಾನ ತಂಡ ಮೂಡಿಸಿದ ನಿರಾಸೆಯನ್ನು ಪ್ರತಿಬಿಂಬಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಕೂಡ ಪಾಕ್‌ ಅಭಿಮಾನಿಯೊಬ್ಬನ ಜಿಫ್‌ ಇಮೇಜ್‌ ಬಳಕೆ ಮಾಡಿ ಟ್ರೋಲ್‌ ಮಾಡಿದೆ. ಪಂದ್ಯದ ವೇಳೆ ಗ್ಯಾಲರಿಯಲ್ಲಿ ಇದ್ದ ಪಾಕಿಸ್ತಾನ ತಂಡದ ಅಭಿಮಾನಿಯೊಬ್ಬ ಬೇಸರಗೊಂಡು ಮುಖ ತಿರಿಗಿಸಿಕೊಂಡ ವಿಡಿಯೊ, ಪಾಕ್‌ ತಂಡದ ಸ್ಥಿತಿಯನ್ನು ಸರಿಯಾಗಿ ಸೂಚಿಸುತ್ತದೆ ಎಂದು ಭಾರಿ ಟ್ರೋಲ್‌ ಆಗಿದೆ.

ಪಾಕ್‌ ಅಭಿಮಾನಿಯ ಟ್ರೋಲ್‌ ವಿಡಿಯೊಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

https://twitter.com/ICC/status/1138798036103118850

Pakistan fan was trolled

ಇದಾದ ಬಳಿಕ ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಪಾಕ್‌ ಅಭಿಮಾನಿಯ ಈ ಚಿತ್ರದ ಮೆಮ್‌ಗಳು ಹಿಗ್ಗಾಮಗ್ಗ ಹರಿದಾಡಿದವು. ಪಾಕಿಸ್ತಾನ ತಂಡ ಗೆಲ್ಲುವ ಹೊಸ್ತಿಲಿಗೆ ಬಂದು ಮುಗ್ಗರಿಸುವುದನ್ನು ಈ ಚಿತ್ರ ಸರಿಯಾಗಿ ಸೂಚಿಸುತ್ತದೆ ಎಂದೆಲ್ಲಾ ವ್ಯಂಗ್ಯ ಮಾಡಲಾಗಿದೆ.

ಪಂದ್ಯದಲ್ಲಿ ಪಾಕ್‌ ತಂಡದ ವೇಗಿ ಮೊಹಮ್ಮದ್‌ ಆಮಿರ್‌ ತಮ್ಮ ವೃತ್ತಿ ಬದುಕಿ ಶ್ರೇಷ್ಠ ಬೌಲಿಂಗ್‌ (30ಕ್ಕೆ 5) ಹೊರತಂದರು ಆಸೀಸ್‌ ತಂಡವನ್ನು 49 ಓವರ್‌ಗಳಲ್ಲಿ 307ಕ್ಕೆ ಆಲ್‌ಔಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಗುರಿ ಬೆನ್ನತ್ತಿದ ಪಾಕ್‌, 166ಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡಿತಾದರೂ ಇನಿಂಗ್ಸ್‌ ಅಂತ್ಯದಲ್ಲಿ ನಾಯಕ ಸರ್ಫರಾಝ್‌ ಅಹ್ಮದ್‌ (40*), ಹಸನ್‌ ಅಲಿ (32) ಮತ್ತು ವಹಾಬ್‌ ರಿಯಾಝ್‌ (45) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಗೆಲುವಿನ ಸಮೀಪಕ್ಕೆ ಸಾಗಿತ್ತು. ಆದರೆಮ ಮಿಚೆಲ್‌ ಸ್ಟಾರ್ಕ್‌ ವಹಾಬ್‌ ರಿಯಾಝ್‌ ಮತ್ತು ಮೊಹಮ್ಮದ್‌ ಆಮಿರ್‌ ವಿಕೆಟ್‌ ಪಡೆದು ಪಾಕ್‌ ಸೋಲಿಗೆ ಖೆಡ್ಡಾ ತೋಡಿಬಿಟ್ಟರು.

ಪಾಕಿಸ್ತಾನ ತಂಡ ತನ್ನ ಮುಂದಿನ ಪಂದ್ಯದಲ್ಲಿ ಜೂನ್‌ 16ರಂದು ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಪೈಪೋಟಿ ನಡೆಸಲಿದ್ದು, ಇಡೀ ಕ್ರಿಕೆಟ್‌ ಜಗತ್ತು ಈ ಪಂದ್ಯ ವೀಕ್ಷಣೆಗಾಗಿ ಕಾದು ಕುಳಿತಿದೆ.

Story first published: Thursday, June 13, 2019, 18:09 [IST]
Other articles published on Jun 13, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+