For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧ ಪಾಕ್ ಈ ಗೆಲುವು ಶ್ರೇಷ್ಠ ಗೆಲುವೆಂದ ಪಾಕ್ ಅಭಿಮಾನಿಗಳು!

Pakistan fans pick 1999 Chennai Test win against India as greatest of Pakistan

ಇಸ್ಲಮಾಬಾದ್, ಜುಲೈ 30: ಚೆನ್ನೈನಲ್ಲಿ 1999ರಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ವಿರುದ್ಧ ಪಾಕಿಸ್ತಾನ ದಾಖಲಿಸಿದ 12 ರನ್‌ಗಳ ಗೆಲುವು, ಪಾಕಿಸ್ತಾನ ಕ್ರಿಕೆಟ್ ತಂಡದ ಶ್ರೇಷ್ಠ ಗೆಲುವು ಎಂದು ಪಾಕ್ ಕ್ರಿಕೆಟ್ ಅಭಿಮಾನಿಗಳು ಹೇಳಿದ್ದಾರೆ.

ಆಗಸ್ಟ್ 1ರಿಂದ ಆರಂಭಗೊಳ್ಳಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಗಮನದಲ್ಲಿಟ್ಟು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಪೋಲ್ ಒಂದನ್ನು ಹಾಕಿತ್ತು. ನಾಲ್ಕು ಟೆಸ್ಟ್ ಪಂದ್ಯಗಳನ್ನು ಹೆಸರಿಸಿ ಇವುಗಳಲ್ಲಿ ಶ್ರೇಷ್ಠ ಟೆಸ್ಟ್ ಜಯ ಯಾವುದು, ಓಟ್ ಮಾಡಿ ಎಂದು ಕೇಳಿಕೊಂಡಿತ್ತು.

ಪಿಸಿಬಿ ಹಾಕಿಕೊಂಡಿದ್ದ ಪೋಲ್‌ನಲ್ಲಿ ಚೆನ್ನೈ ಟೆಸ್ಟ್ ಸೇರಿಸಿ ಇನ್ನೂ 3 ಟೆಸ್ಟ್ ಪಂದ್ಯಗಳನ್ನು ಆಯ್ಕೆಗಳಾಗಿ ಕೊಡಲಾಗಿತ್ತು. ಆದರೆ ಹೆಚ್ಚಿನವರು ಚೆನ್ನೈ ಟೆಸ್ಟ್ ಜಯವನ್ನು ಆರಿಸಿದ್ದು ಯಾಕಿರಬಹುದು?!

ಚೆನ್ನೈ ಟೆಸ್ಟೇ ಯಾಕೆ?!

ಚೆನ್ನೈ ಟೆಸ್ಟೇ ಯಾಕೆ?!

ಪಿಸಿಬಿ ಅಭಿಮಾನಿಗಳು ಓಟ್‌ ಮಾಡಲು ಕೊಟ್ಟಿದ್ದ ನಾಲ್ಕು ಆಯ್ಕೆಗಳಲ್ಲಿ ಚೆನ್ನೈ ಟೆಸ್ಟ್ ಸೇರಿ, 1987ರ ಬೆಂಗಳೂರು ಟೆಸ್ಟ್ ನಲ್ಲಿ ಭಾರತ ವಿರುದ್ಧ ಜಯ, ಕರಾಚಿಯಲ್ಲಿ 1994ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಪಾಕ್ ಗೆಲುವು ಮತ್ತು ಓವಲ್ ನಲ್ಲಿ 1954ರಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧ ಪಾಕ್‌ ತಂಡದ ಫೇಮಸ್ ಟೆಸ್ಟ್ ಗೆಲುವುಗಳನ್ನು ಸೇರಿಸಲಾಗಿತ್ತು. ಆದರೆ ಅವೆಲ್ಲದ್ದಕ್ಕಿಂತಲೂ ಪಾಕ್ ಕ್ರಿಕೆಟ್ ಅಭಿಮಾನಿಗಳು ಚೆನ್ನೈ ಟೆಸ್ಟ್‌ಗೆ ಹೆಚ್ಚು ಓಟ್ ಮಾಡಿದ್ದಾರೆ.

ಶೇ. 65 ಮಂದಿ ಓಟ್

ಶೇ. 65 ಮಂದಿ ಓಟ್

ಪಾಕಿಸ್ತಾನ ಕ್ರಿಕೆಟ್ ತಂಡದ ಶ್ರೇಷ್ಠ ಗೆಲುವು ಯಾವುದು ಎಂದು ಕೇಳಿ, ಜುಲೈ 26ರಿಂದ 29ರ ವರೆಗೆ ತನ್ನ ಅಧಿಕೃತ ಫೇಸ್ಬುಕ್‌ ಖಾತೆಯಲ್ಲಿ ಪಿಸಿಬಿ ಪೋಲ್ ಹಾಕಿಕೊಂಡಿತ್ತು. ಇದರಲ್ಲಿ ಸುಮಾರು 15,847 ಕ್ರಿಕೆಟ್ ಅಭಿಮಾನಿಗಳು ಓಟ್ ಮಾಡಿದ್ದರು. ಓಟ್ ಮಾಡಿದವರಲ್ಲಿ ಶೇ.65ರಷ್ಟು ಮಂದಿ 1999ರ ಚೆನ್ನೈ ಟೆಸ್ಟ್‌ಗೆ ಓಟ್ ಮಾಡಿದ್ದರು. ಇನ್ನುಳಿದಂತೆ 1987ರ ಬೆಂಗಳೂರು ಟೆಸ್ಟ್‌ಗೆ ಶೇ. 15, 1954ರ ಓವಲ್ ಟೆಸ್ಟ್‌ಗೆ ಶೇ. 11 ಮತ್ತು 1994ರ ಕರಾಚಿ ಟೆಸ್ಟ್‌ಗೆ ಶೇ.10 ಓಟ್‌ಗಳು ಸಿಕ್ಕಿವೆ.

ತೆಂಡೂಲ್ಕರ್ ಶತಕ ವ್ಯರ್ಥ

ತೆಂಡೂಲ್ಕರ್ ಶತಕ ವ್ಯರ್ಥ

1999ರಲ್ಲಿ ಜನವರಿ 28ರಿಂದ 31ರ ವರೆಗೆ ಭಾರತದ ಚೆನ್ನೈನಲ್ಲಿ ಪ್ರವಾಸಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡಿತ್ತು. ಟಾಸ್ ಗೆದ್ದು ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿತ್ತು. ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸಚಿನ್ ತೆಂಡೂಲ್ಕರ್ ಶತಕ ಬಾರಿಸಿದ್ದರಾದರೂ ಪಂದ್ಯವನ್ನು ಗೆದ್ದುಕೊಳ್ಳಲಾಗಲಿಲ್ಲ. ಮೊಹಮ್ಮದ್ ಅಝರುದ್ದೀನ್ ಬಳಗ ಈ ಪಂದ್ಯವನ್ನು 12 ರನ್‌ಗಳಿಂದ ಸೋತಿತ್ತು.

ಭಾರತದ ಬ್ಯಾಟಿಂಗ್ ವೈಫಲ್ಯ

ಭಾರತದ ಬ್ಯಾಟಿಂಗ್ ವೈಫಲ್ಯ

ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ, ಮೊಹಮ್ಮದ್ ಯೂಸುಫ್ 53, ಮೋಯೀನ್ ಖಾನ್ 60 ರನ್‌ನೊಂದಿಗೆ 79.5 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 238 ರನ್ ಬಾರಿಸಿತ್ತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ರಾಹುಲ್ ದ್ರಾವಿಡ್ 53, ಸೌರವ್ ಗಂಗೂಲಿ 54 ರನ್‌ ಸೇರ್ಪಡೆಯೊಂದಿಗೆ 254 ರನ್ ಪೇರಿಸಿ ಮುನ್ನಡೆ ಸಾಧಿಸಿತ್ತು. ಪಾಕ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶಾಹಿದ್ ಅಫ್ರಿದಿ 141 ರನ್‌ ಕೊಡುಗೆಯೊಂದಿಗೆ 286 ರನ್ ಗಳಿಸಿತು. ಭಾರತದ ಅಂತಿಮ ಇನ್ನಿಂಗ್ಸ್‌ನಲ್ಲಿ ಸಚಿನ್ 136, ನಯನ್ ಮೋಂಗಿಯಾ 52 ರನ್ ಬಿಟ್ಟರೆ ಉಳಿದ ಯಾರೂ 10ಕ್ಕೂ ಮಿಕ್ಕಿ ರನ್ ಕೊಡುಗೆ ನೀಡಲಿಲ್ಲ. ಭಾರತ 258 ರನ್‌ಗೆ ಆಲ್ ಔಟ್ ಆಗಿತ್ತು.

Story first published: Tuesday, July 30, 2019, 12:01 [IST]
Other articles published on Jul 30, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+