ಪಾಕ್ ಅಟಗಾರರ ದುರ್ವರ್ತನೆ, ಫೀಲ್ಡಿಂಗ್ ಕೋಚ್ ಔಟ್
ಕ್ರೈಸ್ಟ್ ಚರ್ಚ್, ಫೆ.18: ವಿಶ್ವಕಪ್ 2015 ಟೂರ್ನಿಯಲ್ಲಿ ಭಾರತ ವಿರುದ್ಧದ ಮೊದಲ ಪಂದ್ಯಲ್ಲಿ ಮತ್ತೊಮ್ಮೆ ಸೋಲು ಕಂಡ ಪಾಕಿಸ್ತಾನ ತಂಡದಲ್ಲಿ ಈಗ ಭಾರಿ ಗೊಂದಲ, ಗಲಾಟೆ, ರಾದ್ಧಾಂತಗಳು ಜರುಗುತ್ತಿದೆ. ಪಾಕಿಸ್ತಾನ ಆಟಗಾರರ ದುರ್ವರ್ತನೆಯಿಂದ ಬೇಸತು ಫೀಲ್ಡಿಂಗ್ ಕೋಚ್ ಕಮ್ ಟ್ರೈನರ್ ಗ್ರ್ಯಾಂಟ್ ಲೂಡೆನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಲುಡೆನ್ ಅವರು ಮೂವರು ಆಟಗಾರರ ದುರ್ವರ್ತನೆಯಿಂದ ಬೇಸತ್ತು ರಾಜೀನಾಮೆ ಸಲ್ಲಿಸಿದ್ದಾರೆ. ಅವರನ್ನು ಸಂತೈಸಲು ಪಿಸಿಬಿ ಯತ್ನಿಸಿ ವಿಫಲವಾಗಿದೆ ಎಂದು ಪಾಕಿಸ್ತಾನ ಪತ್ರಿಕೆ ಡಾನ್ ಬುಧವಾರ ವರದಿ ಮಾಡಿದೆ.

ಹಿರಿಯಾ ಆಟಗಾರ ಶಾಹಿದ್ ಅಫ್ರಿದಿ, ಆರಂಭಿಕ ಬ್ಯಾಟ್ಸ್ ಮನ್ ಅಹಮದ್ ಶೆಹಜಾದ್ ಮತ್ತು ವಿಕೆಟ್ ಕೀಪರ್ ಉಮರ್ ಅಕ್ಮಲ್ ಅವರು ತರಬೇತಿಯ ವೇಳೆ ಲೂಡೆನ್ ಅವರೊಂದಿಗೆ ಅನುಚಿತ ರೀತಿಯಲ್ಲಿ ವರ್ತಿಸಿ ,ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಇದರಿಂದ ಬೇಸತ್ತ ಲೂಡೆನ್ ರಾಜೀನಾಮೆ ನೀಡಿದ್ದಾರೆ. ಈ ಮೂವರು ಆಟಗಾರರ ವಿರುದ್ಧ ಪಾಕ್ ಕ್ರಿಕೆಟ್ ಮಂಡಳಿಗೆ ದೂರು ಸಲ್ಲಿಸಿದ್ದಾರೆ ಅದರೆ, ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಲೂಡೆನ್ ಗೆ ಇನ್ನಷ್ಟು ಬೇಸರ ತಂದಿದೆ ಎಂದು ಪತ್ರಿಕೆ ಹೇಳಿದೆ.
ಅಡಿಲೇಡ್ ನಲ್ಲಿ ನಡೆದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಫೆ.15ರಂದು ಪಾಕಿಸ್ತಾನ ತಂಡ 76 ರನ್ ಗಳಿಂದ ಸೋಲು ಕಂಡಿತ್ತು.
ಭಾರತದ ವಿರುದ್ಧ ಪಾಕಿಸ್ತಾನ ತಂಡ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡಿದ್ದಕ್ಕೆ ಲೂಡೆನ್ ಬೇಸರ ವ್ಯಕ್ತಪಡಿಸಿ ಈ ಬಗ್ಗೆ ಆಟಗಾರರನ್ನು ಪ್ರಶ್ನಿಸಿದ್ದರು. ಅದರೆ, ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯೆ ನೀಡಿದ ಕಾರಣಕ್ಕೆ ಲೂಡೆನ್ ರಾಜೀನಾಮೆ ನೀಡಿದ್ದಾರೆ.
2014 ಟ್ವೆಂಟಿ 20 ಸಮಯದಲ್ಲಿ ಬಾಂಗ್ಲಾದೇಶದ ಫೀಲ್ಡಿಂಗ್ ಕೋಚ್ ಆಗಿದ್ದ ಲೂಡೆನ್ ಅವರನ್ನು ಮೇ 30, 2014ರಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಜಮ್ ಸೇಠಿ ಅವರು ನೇಮಕ ಮಾಡಿದ್ದರು. ವಖಾರ್ ಯೂನಿಸ್ ಅವರು ಪಾಕಿಸ್ತಾನದ ಮುಖ್ಯ ಕೋಚ್ ಆಗಿದ್ದು, ಮುಷ್ತಾಕ್ ಅಹ್ಮದ್ ಅವರು ಬೌಲಿಂಗ್ ಕೋಚ್ ಹಾಗೂ ಗ್ರಾಂಟ್ ಫ್ಲವರ್ ಅವರು ಬ್ಯಾಟಿಂಗ್ ಕೋಚ್ ಆಗಿದ್ದಾರೆ. (ಐಎಎನ್ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications