ಭವಿಷ್ಯದಲ್ಲಿ ಲೆಜೆಂಡ್ ಎನಿಸಬಲ್ಲ ಆಟಗಾರ ಸದ್ಯ ಈತನೊಬ್ಬನೇ: ಪಾಕ್ ಮಾಜಿ ನಾಯಕ ಹೊಗಳಿದ್ದು ಭಾರತೀಯನನ್ನು!

ಪಾಕಿಸ್ತಾನದ ಮಾಜಿ ನಾಯಕ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಪ್ರಸಕ್ತ ವಿಶ್ವ ಕ್ರಿಕಟ್‌ನಲ್ಲಿ ಲೆಜೆಂಡ್ ಎನಿಸಬಲ್ಲ ಓರ್ವನೇ ಆಟಗಾರ ಮಾತ್ರವೇ ಇದ್ದಾನೆ ಎಂದಿದ್ದಾರೆ. ಹೀಗಂದಿದ್ದು ಪಾಕಿಸ್ತಾನದ ಮಾಜಿ ನಾಯಕ ಮೊಯಿನ್ ಖಾನ್. ಪಾಕಿಸ್ತಾನದ ಮಾಜಿ ನಾಯಕ ಹೀಗೆ ಹೊಗಳಿಕೆಯ ಮಾತುಗಳನ್ನಾಡಿದ್ದು ಭಾರತೀಯ ಕ್ರಿಕೆಟಿಗನ ಬಗ್ಗೆ.
ಪ್ರಸಕ್ತ ವಿಶ್ವ ಕ್ರಿಕೆಟ್‌ನಲ್ಲಿ ಕ್ರಿಕೆಟಿಗರು ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ನಾಯಕ ಭಾರತದ ಈ ಆಟಗಾರನನ್ನು ಮನಸಾರೆ ಮೆಚ್ಚಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿರುವ ಬಾಬರ್ ಅಜಂನಂತಾ ಆಟಗಾರನಿದ್ದರೂ ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ನಾಯಕ ತನ್ನ ಪ್ರಾಮಾಣಿಕ ಉತ್ತರವನ್ನು ನೀಡಿದ್ದಾರೆ. ಮೊಯಿನ್ ಖಾನ್ ಮೆಚ್ಚುಗೆಗೆ ಪಾತ್ರವಾದ ಆ ಭಾರತೀಯ ಆಟಗಾರ ಯಾರು ಗೊತ್ತಾ.

ವಿರಾಟ್ ಕೊಹ್ಲಿ ಬಗ್ಗೆಯೇ ಆಡಿದ ಮಾತುಗಳಿವು:
ಹೌದು, ಪಾಕಿಸ್ತಾನದ ಮಾಜಿ ನಾಯಕ ಮೊಯಿನ್ ಖಾನ್ ಆಡಿದ ಮಾತುಗಳು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ. ಕೊಹ್ಲಿಯ ಅದ್ಭುತ ಪ್ರದರ್ಶನಕ್ಕೆ ಮೊಯಿನ್ ಖಾನ್ ತಲೆ ಬಾಗಿದ್ದಾರೆ. ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿ ಭವಿಷ್ಯದಲ್ಲಿ ಲೆಜೆಂಡ್ ಎನಿಸಬಲ್ಲ ಆಟಗಾರ ವಿರಾಟ್ ಕೊಹ್ಲಿ ಮಾತ್ರ ಎಂದಿದ್ದಾರೆ.

ಟೆಸ್ಟ್ ಮತ್ತು ಏಕದಿನದಲ್ಲಿನಂ.1
ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ ವಿರಾಟ್ ಕೊಹ್ಲಿ 21,000 ರನ್ ಗಳಿಸಿದ್ದಾರೆ. ಮತ್ತು 70 ಅಂತಾರಾಷ್ಟ್ರೀಯ ಶತಕಗಳನ್ನು ದಾಖಲಿಸಿ ವಿಶ್ವ ಕ್ರಿಕೆಟನ್ನು ಆಳುತ್ತಿದ್ದಾರೆ.

ಭಾರತೀಯ ಕ್ರಿಕೆಟಿಗರನ್ನು ಹೊಗಳುತ್ತಿರುವ ಪಾಕ್ ಮಾಜಿ ಆಟಗಾರರು
ಪಾಕಿಸ್ತಾನದ ಮಾಜಿ ಆಟಗಾರರು ಇತ್ತೀಚೆಗೆ ಭಾರತದ ಆಟಗಾರರನ್ನು ಹೊಗಳುವಲ್ಲಿ ನಿರತರಾಗಿದ್ದಾರೆ. ಈ ಮೂಲಕ ಪಾಕಿಸ್ತಾನದ ಕ್ರಿಕೆಟ್ ಮಂಡಳಿಯ ಬಗ್ಗೆ ಜರಿಯಲು ಭಾರತವನ್ನು ಮುಂದಿಟ್ಟುಕೊಳ್ಳುತ್ತಿದ್ದಾರೆ ಎನ್ನುವ ಆಪಾದನಯೂ ಕೇಳಿ ಬರುತ್ತಿದೆ. ಇತ್ತೀಚೆಗೆ ಶೋಯೆಬ್ ಅಖ್ತರ್ ಇದೇ ರೀತಿ ಹೊಗಳಿಕೆಯ ಮಾತುಗಳನ್ನಾಡಿದ್ದರು.

ಗುಣಮಟ್ಟದ ಆಟಗಾರರನ್ನು ಸಿದ್ಧಪಡಿಸುತ್ತಿಲ್ಲ ಪಿಸಿಬಿ
1992ರ ವಿಶ್ವಕಪ್‌ನಲ್ಲಿ ಗೆದ್ದ ಪಾಕಿಸ್ತಾನ ತಂಡದ ಸದಸ್ಯರಾಗಿದ್ದ ಮೊಯಿನ್ ಖಾನ್ ಪಾಕ್ ಕ್ರಿಕೆಟ್ ಮಂಡಳಿಯ ಬಗ್ಗೆ ಅಸಮಾಧಾವನ್ನು ವ್ಯಕ್ತಪಡಿಸಿದ್ದಾರೆ. ಉತ್ತಮ ಗುಣಮಟ್ಟದ ಕ್ರಿಕೆಟಿಗರನ್ನು ತಯಾರು ಮಾಡುವಲ್ಲಿ ಮಂಡಳಿ ವಿಫಲವಾಗುತ್ತಿದ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications