ಟೈಮ್‌ಪಾಸ್ ಮಾಡಲು ರಮೀಜ್ ರಾಜಾ ಪಿಸಿಬಿ ಅಧ್ಯಕ್ಷರಾಗದ್ದಾರೆ: ಕಿಡಿಕಾರಿದ ಪಾಕ್ ಮಾಜಿ ಕ್ರಿಕೆಟಿಗ

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಿಡಿ ಕಾರಿದ್ದಾರೆ. ಈ ಹಿಂದಿನ ಮಂಡಳಿಯ ಅಧ್ಯಕ್ಷರಿಗೂ ರಮೀಜ್ ರಾಜಾ ಅವರಿಗೂ ಯಾವುದೇ ವ್ಯತ್ಯಾಸವಿಲ್ಲ. ಹಿಂದಿನವರಂತೆಯೇ ಅಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ರಮೀಜ್ ರಾಜಾ ಕೂಡ ಟೈಮ್‌ಪಾಸ್ ಮಾಡುತ್ತಿದ್ದಾರೆ ಎಂದಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ಮಂಡಳಿಯ ವಿರುದ್ಧ ಈ ರೀತಿ ಕಿಡಿ ಕಾರಿದ್ದು ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್. ಪಾಕಿಸ್ತಾನ ಕ್ರಿಕೆಟ್ ತಂಡ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ನಿಡುತ್ತಾ ಮಿಂಚುತ್ತಿದ್ದರೂ ಮಂಡಳಿಯ ಅಧ್ಯರಾಗಿ ರಮೀಜ್ ರಾಜಾ ಯಾವುದೇ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ ತನ್ವೀರ್ ಅಹ್ಮದ್.

ಅರ್ಹತೆಯ ಆಧಾರದಲ್ಲಿ ಆಯ್ಕೆ ನಡೆಯುತ್ತಿಲ್ಲ ಎಂದ ಮಾಜಿ ಕ್ರಿಕೆಟಿಗ
ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ತನ್ವೀರ್ ಅಹ್ಮದ್ ತಂಡದಲ್ಲಿನ ಆಟಗಾರರ ಆಯ್ಕೆ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟಗಾರರನ್ನು ಅವರ ಅರ್ಹತೆಯ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತಿಲ್ಲ ಎಂದಿದ್ದಾರೆ. ಮುಂದುವರಿದು ಮಾತನಾಡಿರುವ ಅವರು ರಮೀಜ್ ರಾಜಾ ಮಂಡಳಿಯ ಅಧ್ಯರಾದ ಬಳಿಕ ತೆಗೆದುಕೊಂಡಿರುವ ಒಂದು ಉತ್ತಮ ನಿರ್ಧಾರವನ್ನು ತನಗೆ ಹೇಳಿ ಎಂದು ಸವಾಲು ಹಾಕಿದ್ದಾರೆ.

ರಾಜಾ ಮೇಲೆ ಭಾರೀ ನಿರೀಕ್ಷೆಯಿತ್ತು
ತನ್ವೀರ್ ಅಹ್ಮದ್ ಮಾತನಾಡುತ್ತಾ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ರಮೀಜ್ ರಾಜಾ ಆಯ್ಕೆಯಾದಾದ ಸಾಕಷ್ಟು ನಿರೀಕ್ಷೆಯನ್ನು ಹೊಂದಿದ್ದೆ. ಸಾಕಷ್ಟು ವಿಚಾರಗಳಲ್ಲಿ ಬೆಳವಣಿಗೆ ಕಾಣಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರಮೀಜ್ ರಾಜಾ ಕೂಡ ಈ ಹಿಂದಿನ ಮಂಡಳಿಯ ಅಧ್ಯಕ್ಷರುಗಳ ರೀತಿಯಲ್ಲಿಯೇ ಕೇವಲ ಸಮಯಕಳೆದಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ನ ಬೆಳವಣಿಗೆಗಾಗಿ ಯಾವಿದೇ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ ತನ್ವೀರ್ ಅಹ್ಮದ್.

ಜೂನಿಯರ್ ಪಿಎಸ್‌ಎಲ್ ಆಯೋಜನೆ ಬಗ್ಗೆಯೂ ಕಿಡಿ
ಇನ್ನು ಪಾಖಿಸ್ತಾನದ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಯುವ ಕ್ರಿಕೆಟಿಗರಿಗಾಗಿ ಜೂನಿಯರ್ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯನ್ನು ಆಯೋಜಿಸುವ ಬಗ್ಗೆ ಆಲೋಚನೆಯನ್ನು ಹೊಂದಿದ್ದು ಆ ವಿಚಾರವಾಗಿ ಕಾರ್ಯನಿರತವಾಗಿದ್ದಾರೆ. ಈ ನಿರ್ಧಾರದ ಬಗ್ಗೆಯೂ ತನ್ವೀರ್ ಅಹ್ಮದ್ ಕಿಡಿ ಕಾರಿದ್ದಾರೆ. ಇಂಥಾ ನಿರ್ಧಾರಗಳು ಪಾಕಿಸ್ತಾನ ಕ್ರಿಕೆಟ್‌ನ ಭವಿಷ್ಯವನ್ನು ನಾಶ ಪಡಿಸುತ್ತದೆ. ಯುವ ಆಟಗಾರರು ಟೆಸ್ಟ್ ಕ್ರಿಕೆಟ್‌ನ ಬಗ್ಗೆ ಯೋಚನೆಯನ್ನೇ ಮಾಡದಂತೆ ಈ ಲೀಗ್ ಮಾಡುವ ಸಾಧ್ಯತೆಯಿದೆ ಎಂದಿದ್ದಾರೆ ತನ್ವೀರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications