Virat Kohli vs Babar Azam: ಕೊಹ್ಲಿಯನ್ನು ಬಾಬರ್ ಸುಲಭವಾಗಿ ಹಿಂದಿಕ್ಕುತ್ತಾನೆ: ಇಮ್ರಾನ್ ಖಾನ್ ಹೇಳಿಕೆ
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿಯೂ ಆಗಿರುವ ಇಮ್ರಾನ್ ಖಾನ್ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನದ ನಾಯಕ ಬಾಬರ್ ಅಜಂ ನಡುವಿನ ಹೋಲಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಾಬರ್ ಅಜಂ ಈಗ ಇರುವ ಫಾರ್ಮ್‌ನಲ್ಲಿಯೇ ಮುಂದುವರಿದರೆ ಖಂಡಿತವಾಗಿಯೂ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿಯಲಿದ್ದಾರೆ ಎಂದಿದ್ದಾರೆ.
ಬಾಬರ್ ಅಜಂ ಹಾಗೂ ವಿರಾಟ್ ಕೊಹ್ಲಿ ಮಧ್ಯೆ ಬಹಳ ವರ್ಷದಿಂದ ಹೋಲಿಕೆಗಳು ನಡೆಯುತ್ತಿದೆ. ಕ್ರಿಕೆಟ್ ಪಂಡಿತರು ಈ ಇಬ್ಬರು ಆಧುನಿಕ ಶ್ರೇಷ್ಠ ಆಟಗಾರರ ವಿಚಾರವಾಗಿ ಆಗಾಗ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಇಮ್ರಾನ್ ಖಾನ್ ಕೂಡ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಪಾಕಿಸ್ತಾನ ತಂಡವನ್ನು ಮೂರು ಮಾದರಿಯಲ್ಲಿಯೂ ಮುನ್ನಡೆಸುತ್ತಿರುವ ಬಾಬರ್ ಅಜಂ ಸಾಕಷ್ಟು ರನ್‌ಗಳನ್ನು ಕಲೆಹಾಕಿದ್ದು ಪಾಕಿಸ್ತಾನದ ಪರ ಅನೇಕ ದಾಖಲೆಗಳನ್ನು ಬರೆದಿದ್ದರೂ ವಿರಾಟ್ ಕೊಹ್ಲಿಯ ದಾಖಲೆಗಳಿಗಿಂತ ಬಹಳ ಹಿಂದಿದ್ದಾರೆ ಎಂಬುದು ಅಷ್ಟೇ ಸತ್ಯ. ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಎಲ್ಲಾ ಮಾದರಿಗಳಲ್ಲಿ 75 ಶತಕಗಳನ್ನು ಬಾರಿಸಿದ್ದು 25,322 ಅಂತಾರಾಷ್ಟ್ರೀಯ ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಬಾಬರ್ ಅಜಂ ಎಲ್ಲಾ ಮಾದರಿಗಳಲ್ಲಿ 30 ಶತಕಗಳನ್ನು ಸಿಡಿಸಿದ್ದು 12,270 ಅಂತರರಾಷ್ಟ್ರೀಯ ರನ್ ಗಳಿಸಿದ್ದಾರೆ. ಆದರೆ ಬಾಬರ್ ಅಜಂ ವಿರಾಟ್ ಕೊಹ್ಲಿಗಿಂತ 6 ವರ್ಷ ಕಿರಿಯವನಾಗಿದ್ದು ಸಾಕಷ್ಟು ಹೆಚ್ಚು ಕಾಲ ಕ್ರಿಕೆಟ್ ಆಡುವ ಅವಕಾಶ ಹೊಂದಿದ್ದಾರೆ.
"ನಾನು ಇತ್ತೀಚೆಗೆ ಕ್ರಿಕೆಟ್ ನೀಡಿಲ್ಲ. ಆದರೆ ವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಂ ಒಂದೇ ರೀತಿಯ ಆಟಗಾರರು. ಬಾಬರ್ ಅಜಂ ವಿರಾಟ್ ಕೊಹ್ಲಿಯನ್ನು ಸುಲಭವಾಗಿ ಹಿಂದಿಕ್ಕಬಲ್ಲರು. ನಾನು ನೋಡಿರುವ ಪ್ರಕಾರ ಬಾಬರ್ ಅಜಂ ಅಷ್ಟು ಉತ್ತಮವಾದ ಆಟಗಾರ" ಎಂದು ಇಮ್ರಾನ್ ಖಾನ್ ಪ್ರತಿಕ್ರಿಯೆ ನೀಡಿರುವುದಾಗಿ ಕ್ರಿಕೆಟ್ ಪಾಕಿಸ್ತಾನ್ ಉಲ್ಲೇಖಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಪರವಾಗಿ ಬಾಬರ್ ಅಜಂ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಬರ್ ಅಜಂ 276 ರನ್‌ಗಳನ್ನು ಗಳಿಸಿ ಮಿಂಚಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications