Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy: ಟೂರ್ನಿ ಆರಂಭಕ್ಕೂ ಮುನ್ನ ದೊಡ್ಡ ಹೆಜ್ಜೆ ಇಟ್ಟ ಪಾಕಿಸ್ತಾನ

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಈ ಮೆಗಾ ಟೂರ್ನಿಗೆ ಆತಿಥೇಯ ಪಾಕಿಸ್ತಾನ. ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿ ಮೈದಾನಗಳಲ್ಲಿ ನಡೆಯಲಿವೆ. ಆದರೆ, ಟೀಮ್ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಇದರ ನಡುವೆ ಪಾಕಿಸ್ತಾನ ಒಂದು ದೊಡ್ಡ ಹೆಜ್ಜೆ ಇಟ್ಟಿದೆ.

ಪಾಕಿಸ್ತಾನ ಸರ್ಕಾರವು ದೇಶದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭದ್ರತೆಯನ್ನು ಹೆಚ್ಚಿಸಲು ಮಿಲಿಟರಿ ಮತ್ತು ಪ್ಯಾರಾಮಿಲಿಟರಿ ರೇಂಜರ್‌ಗಳನ್ನು ಬಳಸಲು ಅನುಮೋದನೆ ನೀಡಿದೆ. ವರದಿಗಳ ಪ್ರಕಾರ, ಈ ಮೆಗಾ ಟೂರ್ನಿಗೆ ಫೆಡರಲ್ ಕ್ಯಾಬಿನೆಟ್ ಬಲಿಷ್ಠ ಭದ್ರತಾ ಯೋಜನೆಯನ್ನು ಅನುಮೋದಿಸಿದೆ. ಇದು ಸೈನ್ಯ ಮತ್ತು ರೇಂಜರ್‌ಗಳ ಬಳಕೆಯನ್ನು ಒಳಗೊಂಡಿರಲಿದೆ.

Pakistan government takes major decision to enhance security for ICC Champions Trophy

ಫೆಬ್ರವರಿ 19 ರಿಂದ ಪ್ರಾರಂಭವಾಗುವ ಟೂರ್ನಿಗಾಗಿ ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿರುವ ಮೈದಾನಗಳು ಮತ್ತು ತಂಡದ ಹೋಟೆಲ್‌ಗಳಲ್ಲಿ ಭದ್ರತೆ ಒದಗಿಸಲು ಸರ್ಕಾರ ಈಗಾಗಲೇ ಕಮಾಂಡೋ ಘಟಕಗಳು ಸೇರಿದಂತೆ 10000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ದೇಶದ ಗೃಹ ಸಚಿವರೂ ಆಗಿದ್ದಾರೆ. ಟೂರ್ನಿಯ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಅವರು ವೈಯಕ್ತಿಕವಾಗಿ ನೋಡಿಕೊಳ್ಳುತ್ತಿದ್ದಾರೆ.

ಭದ್ರತಾ ಕಾರಣಗಳನ್ನು ನೀಡಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿತ್ತು. ಹೀಗಾಗಿ ಭಾರತ ತಂಡವು ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳದೆ ಪಂದ್ಯಗಳಿಗೆ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಸುಗಮ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಉತ್ತಮ ಮಾರ್ಗವನ್ನು ನಖ್ವಿ ಹಿರಿಯ ಭದ್ರತಾ ಮತ್ತು ಕಾನೂನು ಜಾರಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ. ಐಸಿಸಿ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ನಿರ್ದಿಷ್ಟ ಸಂಖ್ಯೆಯ ಮಿಲಿಟರಿ ಮತ್ತು ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ವರದಿಗಳಾಗಿವೆ.

ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ

  • ಫೆಬ್ರವರಿ 19: ಪಾಕಿಸ್ತಾನ vs ನ್ಯೂಜಿಲೆಂಡ್, ಕರಾಚಿ
  • ಫೆಬ್ರವರಿ 20: ಬಾಂಗ್ಲಾದೇಶ vs ಭಾರತ, ದುಬೈ
  • ಫೆಬ್ರವರಿ 21: ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ, ಕರಾಚಿ
  • ಫೆಬ್ರವರಿ 22: ಆಸ್ಟ್ರೇಲಿಯಾ vs ಇಂಗ್ಲೆಂಡ್, ಲಾಹೋರ್
  • ಫೆಬ್ರವರಿ 23: ಪಾಕಿಸ್ತಾನ vs ಭಾರತ, ದುಬೈ
  • ಫೆಬ್ರವರಿ 24: ಬಾಂಗ್ಲಾದೇಶ vs ನ್ಯೂಜಿಲೆಂಡ್, ರಾವಲ್ಪಿಂಡಿ
  • ಫೆಬ್ರವರಿ 25: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ
  • ಫೆಬ್ರವರಿ 26: ಅಫ್ಘಾನಿಸ್ತಾನ vs ಇಂಗ್ಲೆಂಡ್, ಲಾಹೋರ್
  • ಫೆಬ್ರವರಿ 27: ಪಾಕಿಸ್ತಾನ vs ಬಾಂಗ್ಲಾದೇಶ, ರಾವಲ್ಪಿಂಡಿ
  • ಫೆಬ್ರವರಿ 28: ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ, ಲಾಹೋರ್
  • ಮಾರ್ಚ್ 1: ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್, ಕರಾಚಿ
  • ಮಾರ್ಚ್ 2: ನ್ಯೂಜಿಲೆಂಡ್ vs ಭಾರತ, ದುಬೈ
  • ಮಾರ್ಚ್ 4: ಸೆಮಿಫೈನಲ್ 1, ದುಬೈ
  • ಮಾರ್ಚ್ 5: ಸೆಮಿಫೈನಲ್ 2, ಲಾಹೋರ್
  • ಮಾರ್ಚ್ 9: ಫೈನಲ್ - ಲಾಹೋರ್ (ಭಾರತ ಫೈನಲ್ ತಲುಪಿದರೆ ದುಬೈನಲ್ಲಿ ಪಂದ್ಯ ನಡೆಯಲಿದೆ)

Story first published: Monday, February 10, 2025, 8:00 [IST]
Other articles published on Feb 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+