'ಕೊಹ್ಲಿಯಲ್ಲಿ ಅಹಂ ಇದೆ': ವಿರಾಟ್ ಔಟ್‌ಗೆ ಐಡಿಯಾಗಳ ಕೊಟ್ಟ ಮುಷ್ತಾಕ್!

ಲಾಹೋರ್: ವಿಶ್ವ ಕ್ರಿಕೆಟ್‌ನಲ್ಲಿ ಸದ್ಯ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಯಾರು ಎಂಬ ಪ್ರಶ್ನೆ ಮುಂದಿಟ್ಟರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಣ್ಣಮುಂದೆ ಬರುತ್ತಾರೆ. ಬ್ಯಾಟಿಂಗ್ ಕೌಶಲ ಮತ್ತು ತನ್ನ ಆಕ್ರಮಣಕಾರಿ ವರ್ತನೆಯಿಂದ ವಿರಾಟ್ ಕೊಹ್ಲಿ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನರಾಗಿ ಕಾಣಿಸುತ್ತಾರೆ. ಹೀಗಾಗಿ ಯಾವುದೇ ಬಲಿಷ್ಠ ತಂಡವೂ ಕೊಹ್ಲಿಯನ್ನು ಕೆಣಕಲು ಮುಂದಾಗಲ್ಲ. ಕೆಣಕಿದರೆ ಕೊಹ್ಲಿ ಬ್ಯಾಟ್ ಮೂಲಕ ಉತ್ತರಿಸುತ್ತಾರೆ. ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿಬಿಡುತ್ತಾರೆ.
ಹಾಗಂತ ಎಲ್ಲಾ ಬ್ಯಾಟ್ಸ್‌ಮನ್‌ಗಳಲ್ಲೂ ಒಂದು ವೀಕ್ ಪಾಯಿಂಟ್ ಇರುತ್ತದೆ. ಭಾವೋದ್ವೇಗಕ್ಕೆ ಒಳಗಾಗುವ ಬ್ಯಾಟ್ಸ್‌ಮನ್‌ಗಳು ಬೇಗನೆ ವಿಕೆಟ್ ಒಪ್ಪಿಸುವ ಸಾಧ್ಯತೆಯಿರುತ್ತದೆ. ಅದಕ್ಕೆ ಕ್ರಿಕೆಟನ್ನು ಮೈಂಡ್‌ಗೇಮ್ ಅಂತ ಕರೆಯುತ್ತಾರೆ.
ಲೇಖಕ ನಿಖಿಲ್ ನಾಝ್ ಜೊತೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡಿದ ಪಾಕ್ ದಂತಕತೆ ಸಕ್ಲೇನ್ ಮುಷ್ತಾಕ್, ವಿರಾಟ್ ಕೊಹ್ಲಿ ಬಗ್ಗೆ ಮತ್ತು ಆತನ ಔಟ್ ಮಾಡಲು ಪರಿಣಾಮಕಾರಿ ಸಲಹೆಗಳನ್ನು ಕೊಟ್ಟಿದ್ದಾರೆ.

ಕೊಹ್ಲಿಯನ್ನು ಇಡೀ ತಂಡವಾಗಿ ಕಾಣಿ
ಕಳೆದ ವರ್ಷ ವಿಶ್ವಕಪ್‌ನಲ್ಲಿ ಸಕ್ಲೇನ್ ಮುಷ್ತಾಕ್ ಇಂಗ್ಲೆಂಡ್ ತಂಡದ ಸ್ಪಿನ್ ಸಲಹೆಗಾರರಾಗಿದ್ದರು. ವಿಶ್ವಕಪ್ ವೇಳೆ ಭಾರತದ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಇಂಗ್ಲೆಂಡ್ ಬೌಲರ್‌ಗಳಾದ ಮೊಯೀನ್ ಅಲಿ ಮತ್ತು ಆದಿಲ್ ರಶೀದ್‌ಗೆ ಕೊಹ್ಲಿಯನ್ನು ಔಟ್ ಮಾಡುವ ಬಗ್ಗೆ ಮುಷ್ತಾಕ್ ಸಲಹೆ ನೀಡಿದ್ದರಂತೆ. ಕೊಹ್ಲಿಯನ್ನು ಒಬ್ಬ ಆಟಗಾರನೆಂಬಂತೆ ನೋಡಬೇಡಿ. ಆತನನ್ನು ಇಡೀ ಒಂದು ತಂಡವಾಗಿ ನೋಡಿ ಎಂದು ಮುಷ್ತಾಕ್ ಹೇಳಿದ್ದರಂತೆ.

ಕೊಹ್ಲಿ ಬೇಗ ಔಟಾದರೆ ಭಾರತ ಸೋಲುತ್ತೆ
'ಆತ (ಕೊಹ್ಲಿ) ಒಬ್ಬನೇ ಅಲ್ಲ, 11 ಮಂದಿಯಿದ್ದಂತೆ. ವಿರಾಟ್ ಕೊಹ್ಲಿ ವಿಕೆಟ್ ಪಡೆದರೆ ಇಡೀ ತಂಡದ ವಿಕೆಟ್ ಉರುಳಿಸಿದಂತೆ ಎಂದು ಮೊಯೀನ್ ಅಲಿ ಮತ್ತು ಆದಿಲ್ ರಶೀದ್‌ಗೆ ಆವತ್ತು ಹೇಳಿದ್ದೆ. ಕೊಹ್ಲಿ ಅಂದರೆ 11 ಆಟಗಾರರೂ ಒಟ್ಟಾಗಿ ಇದ್ದಂತೆ. ನೀವು ಆತನನ್ನು ಹಾಗೇ ನೋಡಬೇಕು ಎಂದಿದ್ದೆ,' ಎಂದು ಸಕ್ಲೇನ್ ವಿವರಿಸಿದರು. ಅಂದ್ಹಾಗೆ ಮೊಯೀನ್ ಮತ್ತು ರಶೀದ್ ಇಬ್ಬರೂ ಕೊಹ್ಲಿಯನ್ನು ಒಟ್ಟು 6 ಬಾರಿ ಔಟ್ ಮಾಡಿದ್ದಾರೆ.

ಆತನಲ್ಲಿ ಅಹಂ ಇರುತ್ತದೆ
'ಹೌದು, ಆತ ನಂ.1 ಬ್ಯಾಟ್ಸ್‌ಮನ್. ಆದರೆ ನಿಮ್ಮ ಕಲ್ಪನೆ, ಭಾವನೆ, ಉತ್ಸಾಹವನ್ನು ಚೆಂಡಿನೊಳಕ್ಕೆ ತಂದರೆ ನೀವೂ ವಿಶ್ವ ನಂ.1ಗಿಂತ ಕಡಿಮೆ ಅನ್ನಿಸಲ್ಲ. ವಿಶ್ವ ನಂ.1 ಬ್ಯಾಟ್ಸ್‌ಮನ್ ಆಗಿ ಆತನಲ್ಲಿ ಅಹಂ ಇರುತ್ತದೆ. ನೀವು ಒಂದು ಎಸೆತ ಡಾಟ್ ಮಾಡಿದರೆ ಆತನಿಗೆ ಸದು ತಾಗುತ್ತದೆ. ಆತನ ಕಟ್ಟಿಹಾಕಿ ನೀವೇನಾದರೂ ಆತನನ್ನು ಔಟ್ ಮಾಡಿದರೆ ಆತ ನಿಜಕ್ಕೂ ಬೇಸರಗೊಳ್ಳುತ್ತಾನೆ. ಇದೊಂಥರಾ ಮೈಂಡ್ ಗೇಮ್. ನಿಮ್ಮ ಗುಣಮಟ್ಟವನ್ನು ನೀವು ಎತ್ತರದಲ್ಲಿ ಇಡಬೇಕಾಗುತ್ತದೆ,' ಎಂದು ಮುಷ್ತಾಕ್ ಹೇಳಿಕೊಂಡಿದ್ದಾರೆ.

ಸ್ಪಿನ್ ಬೌಲಿಂಗ್‌ಗೆ ಇಂಡಿಯಾ ಬೆಸ್ಟ್
ಪಾಕ್ ಅಂತಾರಾಷ್ಟ್ರೀಯ ಕ್ರಿಕೆಟರ್‌ಗಳ ಅಭಿವೃದ್ಧಿ ಮುಖ್ಯಾಸ್ಥರಾಗಿರುವ ಸಕ್ಲೇನ್, ಕೊಹ್ಲಿ ವಿರುದ್ಧ ಆಡಲು ಇಂಗ್ಲೆಂಡ್ ತಂಡ ಹೇಗೆ ಅಭ್ಯಾಸ ನಡೆಸಿತು ಅನ್ನೋದನ್ನು ಹೇಳಿಕೊಂಡಿದ್ದಾರೆ. 'ನಾವು ಕೊಹ್ಲಿಯ ಎಲ್ಲಾ ಬ್ಯಾಟಿಂಗ್ ಹಂತಗಳನ್ನು ಅಭ್ಯಾಸ ಮಾಡಬೇಕು. ಆಟವನ್ನು ಹೇಗೆ ಶುರು ಮಾಡುತ್ತಾನೆ, ಗಟ್ಟಿಗೊಳಿಸುತ್ತಾನೆ, ಮುಗಿಸುತ್ತಾನೆ ಎಂದು ಗಮನಿಸಬೇಕು. ನಾನು ಈ ಹುಡುಗರೊಂದಿಗೆ (ಭಾರತದೊಂದಿಗೆ) ಪ್ರೀತಿಯ ಕ್ಷಣಗಳನ್ನು ಕಳೆದಿದ್ದೇನೆ. ಭಾರತೀಯರು ಸ್ಪಿನ್ನರ್ ವಿರುದ್ಧ ಅತ್ಯುತ್ತಮ ಆಟವಾಡುತ್ತಾರೆ. ಹೀಗಾಗಿ ನೀವು ಅವರ ವಿರುದ್ಧ ಆಡಲು ಎದುರು ನೋಡಬೇಕು,' ಎಂದು ಸಕ್ಲೇನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications