Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೌಸ್‌ಫುಲ್ ಕುರ್ಚಿಗಳು!: ಏಷ್ಯಾಕಪ್ ಆತಿಥ್ಯಕ್ಕೆ ಬಡಿದಾಡಿದ್ದ ಪಾಕಿಸ್ತಾನಕ್ಕೆ ಆರಂಭದಲ್ಲೇ ಅವಮಾನ!

ಏಷ್ಯಾಕಪ್ ಟೂರ್ನಿ ಆರಂಭವಾಗಿದ್ದು ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗುವ ಟೂರ್ನಿಗೆ ಚಾಲನೆ ದೊರೆತಿದೆ. ಆದರೆ ಈ ಟೂರ್ನಿಯ ಆರಂಭಿಕ ಪಂದ್ಯದಲ್ಲಿಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರೀ ಮುಖಭಂಗವೊಂದು ಉಂಟಾಗಿದೆ. ತನ್ನದೇ ನೆಲದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಸ್ವತಃ ಆತಿಥೇಯ ಪಾಕಿಸ್ತಾನ ಭಾಗವಹಿಸಿದ್ದರೂ ಕೂಡ ಮೊದಲ ಪಂದ್ಯದಲ್ಲಿ ಖಾಲಿ ಕುರ್ಚಿಗಳೇ ಕಾಣಿಸಿಕೊಂಡಿದೆ. ಪಂದ್ಯಕ್ಕೂ ಮುನ್ನ ಮನರಂಜನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಕಾರ್ಯಕ್ರಮ ಖಾಲಿ ಸ್ಟೇಡಿಯಂನಲ್ಲಿ ಆಯೋಜನೆಯಾಗಿದೆ.

ಏಷ್ಯಾಕಪ್ ಟೂರ್ನಿಯನ್ನು ತನ್ನ ನೆಲದಲ್ಲಿಆಯೋಜನೆ ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಟ್ಟ ಸಾಹಸ ಅಷ್ಟಿಷ್ಟಲ್ಲ. ಪಾಕಿಸ್ತಾನದಲ್ಲಿ ಆಡಲಿ ಬಿಸಿಸಿಐ ಯಾವುದೇ ಕಾರಣಕ್ಕೂ ಒಪ್ಪದಿದ್ದರೂ ಹೈಬ್ರಿಡ್ ಮಾದರಿಯಲ್ಲಿ ನಾಲ್ಕು ಪಂದ್ಯಗಳನ್ನು ತನ್ನ ನೆಲದಲ್ಲಿ ಆಯೋಜನೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆ ನಾಲ್ಕು ಪಂದ್ಯಗಳ ಪೈಕಿ ಉದ್ಘಾಟನಾ ಪಂದ್ಯ ಕೂಡ ಒಂದಾಗಿದೆ.

Pakistan vs Nepal Asia cup match

ಪಾಕಿಸ್ತಾನ ಹಾಗೂ ನೇಪಾಳ ವಿರುದ್ಧದ ಪಂದ್ಯ ಮುಲ್ತಾನ್‌ನಲ್ಲಿ ಆಯೋಜನೆಯಾಗಿದೆ. ಆದರೆ ಈ ಪಂದ್ಯವನ್ನು ವೀಕ್ಷಿಸಲು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳೇ ಆಸಕ್ತಿ ವಹಿಸದಿರುವುದು ಕುತೂಹಲ ಮೂಡಿಸಿದೆ. ಪಾಕ್ ನೆಲದಲ್ಲಿ ಕೇವಲ ನಾಲ್ಕು ಪಂದ್ಯಗಳು ಆಯೋಜನೆಯಾಗಿದ್ದರೂ ಕೂಡ ಪಾಕ್ ಕ್ರಿಕೆಟ್ ಪ್ರೇಮಿಗಳು ಆಸಕ್ತಿವಹಿಸದಿರುವುದು ಅಚ್ಚರಿ ಮೂಡಸಿದೆ. ಹೀಗಾಗಿ ಖಾಲಿ ಖಾಲಿ ಕುರ್ಚಿಗಳ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಖಾಲಿ ಸ್ಟೇಡಿಯಂನಲ್ಲಿ ನಡೆಯಿತು ಮನರಂಜನಾ ಕಾರ್ಯಕ್ರಮ
ಇನ್ನು ಏಷ್ಯಾಕಪ್ ಟೂರ್ನಿಯ ಉದ್ಘಾಟನೆಯ ಹಿನ್ನೆಲೆಯಲ್ಲಿ ಮೊದಲ ಪಂದ್ಯದ ಆರಂಭಕ್ಕೂ ಮುನ್ನ ಮನರಂಜನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನಿ ಗಾಯಕಿ ಐಮಾ ಬೇಗ್ ಹಾಗೂ ನೇಪಾಳಿ ಯುವ ಗಾಯಕಿ ತ್ರಿಶಾಲಾ ಗುರುಂಗ್ ಭಾಗವಹಿಸಿದ್ದರು. ಆದರೆ ಈ ಗಾಯಕಿಯರು ಖಾಲಿ ಕುರ್ಚಿಗಳ ಮುಂದೆ ಕಾರ್ಯಕ್ರಮ ನಿಡುವಂತಾಗಿತ್ತು.

ಇನ್ನು ಮೊದಲ ಪಂದ್ಯದಲ್ಲಿ ನೇಪಾಳ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸಿದ್ದು ಭರ್ಜರಿ ಪ್ರದರ್ಶನ ನೀಡಿದೆ.

ನೇಪಾಳ (ಪ್ಲೇಯಿಂಗ್ XI): ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಆರಿಫ್ ಶೇಖ್, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಮಿಚಾನೆ, ಲಲಿತ್ ರಾಜಬನ್ಶಿ

ಪಾಕಿಸ್ತಾನ (ಪ್ಲೇಯಿಂಗ್ XI): ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್(ಸಿ), ಮೊಹಮ್ಮದ್ ರಿಜ್ವಾನ್(ಡಬ್ಲ್ಯೂ), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್

Story first published: Wednesday, August 30, 2023, 19:06 [IST]
Other articles published on Aug 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+