Champions Trophy 2025 Pakistan: ಲೀಗ್ ಹಂತದಲ್ಲೇ ಪಾಕಿಸ್ತಾನ ಔಟ್?
ಚಾಂಪಿಯನ್ಸ್ ಟ್ರೋಫಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಪಾಕ್‌ಗೆ ಶಾಕ್ ಕಾದಿದೆ. ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಜಯ ದಾಖಲಿಸಿದೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಪಾಕ್ ನಿರಾಸೆ ಅನುಭವಿಸಿದೆ. ಪಾಕಿಸ್ತಾನ ಒಂದು ಪಂದ್ಯ ಸೋಲುತ್ತಿದ್ದಂತೆ ತಂಡದ ಮೇಲೆ ಹಲವು ಪ್ರಶ್ನೆಗಳು ಏಳುತ್ತಿವೆ. ಪಾಕಿಸ್ತಾನ ಪ್ರಸಕ್ತ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೆ ತಲುಪುತ್ತದಾ ಎಂಬ ಚರ್ಚೆಗಳು ಆರಂಭವಾಗಿವೆ.
ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ಶುಭಾರಂಭ ಮಾಡಿದೆ. ಮೊದಲ ಪಂದ್ಯವನ್ನು ಪಾಕಿಸ್ತಾನ 60 ರನ್‌ಗಳಿಂದ ಪಂದ್ಯವನ್ನು ಸೋತಿದೆ. ಈ ಒಂದು ಸೋಲು ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿಯ ಪಯಣವನ್ನೇ ಮುಗಿಸುವ ಹಾಗೆ ಕಾಣುತ್ತಿದೆ. ಹೀಗೆ ಹೇಳಲು ಏನು ಕಾರಣ ಎಂಬ ಬಗ್ಗೆ ವರದಿ ಇಲ್ಲಿದೆ.

ಚಾಂಪಿಯನ್ಸ್ ಟ್ರೋಫಿಯ ಎರಡು ಗುಂಪುಗಳಲ್ಲಿ ಅಗ್ರ ಎರಡು ತಂಡಗಳು ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಪಡೆಯುತ್ತವೆ. ಹೀಗಾಗಿ ಈ ಟೂರ್ನಿಯಲ್ಲಿ ಪ್ರತಿಯೊಂದು ಪಂದ್ಯವೂ ನಾಕೌಟ್ ಪಂದ್ಯ. ಪಾಕ್ ಈ ಒಂದು ಸೋಲಿನಿಂದ ಸದ್ಯ ಅಂಕ ಪಟ್ಟಿಯಲ್ಲಿ ಕೆಳಗಿದೆ. ಪಾಕಿಸ್ತಾನ ಗುಂಪುಹಂತದಲ್ಲಿ ತನ್ನ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲುವ ಒತ್ತಡದಕ್ಕೆ ಸಿಲುಕಿದೆ. ಇದರಲ್ಲಿ ಒಂದು ಪಂದ್ಯ ಭಾರತ ವಿರುದ್ಧ ಇದ್ದರೆ, ಇನ್ನೊಂದು ಪಂದ್ಯ ಬಾಂಗ್ಲಾದೇಶ ವಿರುದ್ಧ ಇದೆ.
ಫೆಬ್ರವರಿ 23 ರಂದು ದುಬೈನಲ್ಲಿ ಪಾಕಿಸ್ತಾನ ಹಾಗೂ ಭಾರತ ತಂಡಗಳು ಕಾದಾಟ ನಡೆಸಲಿವೆ. ಇನ್ನು ಫೆಬ್ರವರಿ 27 ರಂದು ಬಾಂಗ್ಲಾದೇಶ ವಿರುದ್ಧ ಆತಿಥೇಯ ತಂಡ ಫೈಟ್ ನಡೆಸಲಿದೆ. ಈ ಎರಡೂ ಪಂದ್ಯಗಳು ಪಾಕ್ ಪಾಲಿಗೆ ಮಹತ್ವದಾಗಿದೆ. ಇನ್ನು ಪಾಕ್‌ಗೆ ವಾತಾವರಣ ಸಹ ವರದಾನ ವಾಗಬೇಕಿದೆ. ಇಲ್ಲದೆ ಇದ್ದಲ್ಲಿ ಪಾಕ್ ಸೆಮಿಫೈನಲ್ ಆಸೆಗೆ ಭಾರೀ ಪೆಟ್ಟು ಬೀಳುವುದು ಫಿಕ್ಸ್.
ಸೆಮಿಫೈನಲ್ ಪ್ರವೇಶಿಸುವುದು ಹೇಗೆ?
ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ಪ್ರವೇಶಿಸುವ ಕನಸು ಕಾಣುತ್ತಿದ್ದರೆ, ಉಳಿದ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸುವುದು ಅನಿವಾರ್ಯ. ಈ ಎರಡೂ ಪಂದ್ಯಗಳಲ್ಲಿ ಗೆದ್ದಲ್ಲಿ ಸೆಮೀಸ್‌ಗೆ ಪಕ್ಕಾ ಹೋಗುತ್ತಾ ಎಂದು ಕೇಳಿದ್ರೆ, ಡೌಟ್ ಎಂದು ಹೇಳಬಹುದು. ಏಕೆಂದರೆ ಈ ವೇಳೆ ರನ್ ರೇಟ್ ಸಹ ಮುಖ್ಯ. ಪಾಕ್ ಈ ಎರಡೂ ಪಂದ್ಯಗಳನ್ನು ಉತ್ತಮ ರನ್ ರೇಟ್‌ನಿಂದ ಗೆಲ್ಲುವುದು ಅನಿವಾರ್ಯ.
ಫೆ.23 ಮಾಡು ಇಲ್ಲವೇ ಮಡಿ ಪಂದ್ಯ
ಈಗಾಗಲೇ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಪಾಕಿಸ್ತಾನ, ಭಾನುವಾರ (ಫೆ.23 ರಂದು) ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಹತ್ವದ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಪಾಕ್ ಗೆಲ್ಲುವುದು ಅನಿವಾರ್ಯ. ಆದರೆ ಅಂಕಿ ಅಂಶಗಳು ಟೀಮ್ ಇಂಡಿಯಾ ಪರವಾಗಿ ನಿಲ್ಲುತ್ತವೆ. ಅಲ್ಲದೆ ಸದ್ಯ ಟೀಮ್ ಇಂಡಿಯಾದ ಎಲ್ಲ ವಿಭಾಗಗಳಲ್ಲೂ ಬಲಾಢ್ಯವಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಪಾಕ್ ಗೆಲ್ಲುವುದು ಕಷ್ಟ. ಈ ಪಂದ್ಯದಲ್ಲಿ ಪಾಕ್ ಗೆಲುವು ಸಾಧಿಸಿದರೆ ಮಾತ್ರ ಉಪಾಂತ್ಯದ ಕನಸು ಜೀವಂತ. ಇಲ್ಲದೇ ಇದ್ದಲ್ಲಿ ಆತಿಥೇಯ ತಂಡ ಲೀಗ್ ಹಂತದಲ್ಲಿ ಗುಡ್ ಬಾಯ್ ಹೇಳಬೇಕಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications