For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ನಲ್ಲೂ ನ್ಯೂಜಿಲ್ಯಾಂಡ್ ಕಾಡಿಸ್ತಾರಾ ಪಾಕ್ ಯುವ ವೇಗಿ ಶಹೀನ್ ಅಫ್ರಿದಿ?!

Pakistan include teen paceman Shaheen Afridi for New Zealand Tests

ದುಬೈ, ನವೆಂಬರ್ 10: ಮುಂದಿನ ವಾರ ಯುಎಇಯ ಅಬುಧಾಬಿಯಲ್ಲಿ ನಡೆಯಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕಾಗಿ ಪಾಕಿಸ್ತಾನ, 15 ಜನರನ್ನೊಳಗೊಂಡ ತನ್ನ ತಂಡದಲ್ಲಿ ಯುವ ವೇಗಿ ಶಹೀನ್ ಅಫ್ರಿದಿ ಅವರ ಹೆಸರನ್ನು ಸೇರ್ಪಡೆಗೊಳಿಸಿದೆ. ಶನಿವಾರ (ನವೆಂಬರ್ 10) ಪ್ರಕಟಿಸಲಾಗಿರುವ ಪಾಕ್ ತಂಡದಲ್ಲಿ ಶಹೀನ್ ಹೆಸರೂ ಇದೆ.

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44248

ಈಗಿನ್ನು 18ರ ಹರೆಯದವರಾಗಿರುವ ಶಹೀನ್ ಅಫ್ರಿದಿ, ಯುಎಇಯಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ 46ಕ್ಕೆ 4, 38ಕ್ಕೆ 4 ನ್ಯೂಜಿಲ್ಯಾಂಡ್ ವಿಕೆಟ್ ಉರುಳಿಸಿ ಪಾಕ್ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು. ಭಾನುವಾರ (ನವೆಂಬರ್ 11) ನಡೆಯುವ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲೂ ಅಫ್ರಿದಿ ಮಿಂಚುವ ಸಂಭವವಿದೆ.

ಯುಎಇಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧವೇ ನಡೆದಿದ್ದ ಟಿ20 ಸರಣಿಯ ಒಂದು ಪಂದ್ಯದಲ್ಲಿ ಶಹೀನ್, 20ಕ್ಕೆ 3 ವಿಕೆಟ್ ಕೆಡವಿದ್ದರು. ಕಳೆದು ತಿಂಗಳು ಯುಎಇಯಲ್ಲೇ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲೂ ಅಫ್ರಿದಿ 4 ವಿಕೆಟ್ ಉರುಳಿಸಿ ಪಾರಮ್ಯ ಮೆರೆದಿದ್ದರು.

ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿ ಗೆದ್ದಿರುವ ಪಾಕಿಸ್ತಾನ ಏಕದಿನ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಯುವ ವೇಗಿ ಶಹೀನ್ ನೆರವಿನಿಂದ ಮೂರನೇ ಪಂದ್ಯ ಗೆದ್ದು ಏಕದಿನ ಸರಣಿ ವಶ ಪಡಿಸಿಕೊಳ್ಳುವತ್ತ ಪಾಕ್ ಕಣ್ಣಿಟ್ಟಿದೆ. ಟೆಸ್ಟ್ ನಲ್ಲೂ ಶಹೀನ್ ಅವರನ್ನು ಬಳಸಿಕೊಳ್ಳುವ ಯೋಜನೆ ಪಾಕ್ ತಂಡದ್ದು.

Story first published: Saturday, November 10, 2018, 21:38 [IST]
Other articles published on Nov 10, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+