PAK vs SL: ಲಂಕಾ ಮಣಿಸಿದ ಪಾಕಿಸ್ತಾನ ಫೈನಲ್ ಪ್ರವೇಶಿಸುವ ಆಸೆ ಜೀವಂತ
ಅಬುದಾಬಿ: ಸಂಘಟಿತ ಆಟದ ಪ್ರದರ್ಶನ ನೀಡಿದ ಪಾಕಿಸ್ತಾನ ಏಷ್ಯಾ ಕಪ್ ಟಿ20 ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ, ಟೂರ್ನಿಯ ಫೈನಲ್‌ಗೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ವಿಫಲಾಗಿರುವ ಶ್ರೀಲಂಕಾ ತಂಡದ ಪ್ರಶಸ್ತಿ ಸುತ್ತು ಪ್ರವೇಶಿಸುವ ಆಸೆ ಕಮರಿದೆ.
ಸಾಧಾರಣ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಸಾಹಿಬ್‌ಜಾದಾ ಫರ್ಹಾನ್ ಹಾಗೂ ಫಖರ್ ಜಮಾನ್ ಜೋಡಿ ಪವರ್ ಪ್ಲೇನಲ್ಲಿ ಪವರ್ ಫುಲ್ ಪ್ರದರ್ಶನ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 5.3 ಓವರ್‌ಗಳಲ್ಲಿ 45 ರನ್ ಸೇರಿಸಿತು. ಸಾಹಿಬ್‌ಜಾದಾ ಫರ್ಹಾನ್ 24 ರನ್ ಬಾರಿಸಿದರೆ, ಫಖರ್ 17 ರನ್ ಬಾರಿಸಿ ಔಟ್ ಆದರು. ಪಾಕಿಸ್ತಾನ ತಂಡ 57 ರನ್ ಆಗುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಒತ್ತಡದಲ್ಲಿತ್ತು.

ಐದನೇ ವಿಕೆಟ್‌ಗೆ ಹುಸೇನ್ ಹಾಗೂ ಮೊಹಮ್ಮದ್ ಹ್ಯಾರೀಸ್ ಜೋಡಿ 18 ಎಸೆತಗಳಲ್ಲಿ 23 ರನ್ ಸೇರಿಸಿತು. 80 ರನ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡ ಸಂಕಷ್ಟದಲ್ಲಿದ್ದ ತಂಡಕ್ಕೆ ಮೊಹಮ್ಮದ್ ನವಾಜ್ ಹಾಗೂ ಹುಸೇನ್ ಜೋಡಿ ಅಮೋಘ ಜತೆಯಾಟ ನೀಡಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಲಂಕಾ ಬೌಲರ್‌ಗಳು ವಿಫಲರಾದರು. ಈ ಜೋಡಿ 41 ಎಸೆತಗಳಲ್ಲಿ ಅಜೇಯ 58 ರನ್‌ಗಳ ಜೊತೆಯಾಟ ನೀಡಿತು. ಹುಸೇನ್ 4 ಬೌಂಡರಿ ನೆರವಿನಿಂದ ಅಜೇಯ 32 ರನ್ ಬಾರಿಸಿ ಜಯದಲ್ಲಿ ಮಿಂಚಿದರೆ, ಮೊಹಮ್ಮದ್ ನವಾಜ್ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 38 ರನ್ ಬಾರಿಸಿ ಗೆಲುವಿನಲ್ಲಿ ಗಮನ ಸೆಳೆದರು. ಅಂತಿಮವಾಗಿ ಪಾಕ್ 18 ಓವರ್‌ಗಳಲ್ಲಿ 5 ವಿಕೆಟ್‌ಗೆ 138 ರನ್ ಸೇರಿಸಿ ಜಯ ಸಾಧಿಸಿತು.
ಮೆಂಡೀಸ್ ಅರ್ಧಶತಕ
ಟಾಸ್ ಸೋತರೂ ಮೊದಲ ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ಜವಾಬ್ದಾರಿ ಮರೆತರು. ಆಂಭಿಕ ಪತನು ನಿಸ್ಸಂಕಾ (8), ಕುಸಾಲ್ ಮೆಂಡೀಸ್ (0), ಕುಸಾಲ್ ಪೆರೆರಾ (15), ಚರಿತ ಅಸಲಂಕ (20) ರನ್ ಕಲೆ ಹಾಕುವಲ್ಲಿ ವಿಫಲರಾದರು. ಉಳಿದಂತೆ ಮಧ್ಯಮ ಕ್ರಮಾಂಕದಲ್ಲೂ ಆಟಗಾರರು ಜವಾಬ್ದಾರಿ ಮರೆತರು. ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಾ ಇದ್ದರೂ ಮನಮೋಹಕ ಬ್ಯಾಟಿಂಗ್ ನಡೆಸಿದ ಕಮಿಂಡು ಮೆಂಡೀಸ್ 44 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿತು. ಅಂತಿಮವಾಗಿ ಶ್ರೀಲಂಕಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ಸೇರಿಸಿತು.

ಪಾಕಿಸ್ತಾನ ತಂಡದ ಭರವಸೆಯ ಬೌಲರ್ ಶಾಹೀನ್ ಶಾ ಆಫ್ರಿದಿ 4 ಓವರ್ ಬೌಲ್ ಮಾಡಿ 28 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ಹ್ಯಾರೀಸ್ ರೌಫ್, ಹುಸೇನ್ ತಲಾ 2 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications