ಬೂಮ್ರಾರಂತೆ ಬೌಲಿಂಗ್ ಮಾಡ್ತಾನೆ ಪಾಕಿಸ್ತಾನದ ಈ ಬಾಲಕ: ವೈರಲ್ ವಿಡಿಯೋ


ನವದೆಹಲಿ, ಅಕ್ಟೋಬರ್ 24: ಭಾರತದ 'ಡೆತ್ ಓವರ್ ಸ್ಪೆಷಲಿಸ್ಟ್' ಎಂದೇ ಖ್ಯಾತರಾಗಿರುವ ಜಸ್ ಪ್ರೀತ್ ಬೂಮ್ರಾ ತಮ್ಮ ವಿಶಿಷ್ಟ ಬೌಲಿಂಗ್ ಶೈಲಿಗೆ ಹೆಸರಾದವರು. ಇದುವರೆಗಿನ ಯಾವ ಬೌಲರ್‌ಗಳೂ ಈ ರೀತಿಯ ಶೈಲಿ ಹೊಂದಿರಲಿಲ್ಲ.
ಅಪರೂಪದ ಶೈಲಿಯ ಜತೆಗೆ ನಿಖರವಾದ ಯಾರ್ಕರ್‌ಗಳನ್ನು ಹಾಕಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುವುದರಲ್ಲಿಯೂ ಬೂಮ್ರಾ ಹೆಸರುವಾಸಿ. ಅವರ ಬೌಲಿಂಗ್ ಶೈಲಿಯನ್ನು ಅನುಕರಣೆ ಮಾಡುವುದು ಕಷ್ಟ. ಅದಕ್ಕೆ ದೇಹದ ಸಮತೋಲನ ಅತಿ ಮುಖ್ಯ. ಆದರೂ ಬೂಮ್ರಾ ಶೈಲಿಯನ್ನು ಪಾಕಿಸ್ತಾನದ ಬಾಲಕನೊಬ್ಬ ಯಶಸ್ವಿಯಾಗಿ ಅನುಕರಣೆ ಮಾಡಿದ್ದಾರೆ.
ಸಾಮಾನ್ಯವಾಗಿ ಕ್ರಿಕೆಟ್ ಆಸಕ್ತಿಯುಳ್ಳ ಮಕ್ಕಳು ಬಾಲ್ಯದಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡುವಾಗ ತಮ್ಮ ಇಷ್ಟದ ಕ್ರಿಕೆಟಿಗರ ಶೈಲಿಯನ್ನು ಅನುಕರಿಸುತ್ತಾರೆ. ಪಾಕಿಸ್ತಾನ ಈ ಐದು ವರ್ಷದ ಪೋರ ಬೂಮ್ರಾ ಅವರ ಅಭಿಮಾನಿ. ಇನ್ನೂ ಪುಟ್ಟ ಬಾಲಕನಾದರೂ ಬೂಮ್ರಾ ಶೈಲಿಯನ್ನು ಯಥಾವತ್ತಾಗಿ ಅನುಕರಿಸುತ್ತಾನೆ.
ಬೂಮ್ರಾ ಅವರಂತೆ ಬೌಲಿಂಗ್ ಮಾಡುವ ಈತನ ವಿಡಿಯೋ ಈಗ ವೈರಲ್ ಆಗಿದೆ. ಪಾಕಿಸ್ತಾನದ ಉಮೈರ್ ಅಫ್ರಿದಿ ಎಂಬುವವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದರು.
ವೀರೇಂದ್ರ ಸೆಹ್ವಾಗ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದ ಉಮೈರ್ ಅಫ್ರಿದಿ, ಈ ವಿಡಿಯೋವನ್ನು ಸೆಹ್ವಾಗ್ ಮತ್ತು ಬೂಮ್ರಾ ಅವರಿಗೆ ಟ್ಯಾಗ್ ಮಾಡಿದ್ದರು. ಇತ್ತೀಚೆಗೆ ನಡೆದ ಏಷ್ಯಾಕಪ್‌ನಲ್ಲಿ ನಿಮ್ಮ ಬೌಲಿಂಗ್ ನೋಡಿ ನಿಮ್ಮಂತೆ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ಅವರು ಹೇಳಿದ್ದರು.
ಈ ಟ್ವೀಟ್‌ಅನ್ನು ಹಂಚಿಕೊಂಡಿರುವ ಬೂಮ್ರಾ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ. 'ಚಿಕ್ಕ ವಯಸ್ಸಿನಲ್ಲಿ ನನ್ನ ಕ್ರಿಕೆಟ್ ಹೀರೋಗಳ ಶೈಲಿಯನ್ನು ಹೇಗೆ ನಕಲು ಮಾಡುತ್ತಿದ್ದೆ ಎನ್ನುವುದು ನೆನಪಿದೆ. ಈಗ ಈ ಮಕ್ಕಳು ನನ್ನ ಶೈಲಿಯನ್ನು ನಕಲು ಮಾಡುವುದನ್ನು ನೋಡಲು ವಿಶೇಷ ಎನಿಸುತ್ತದೆ' ಎಂದು ಬೂಮ್ರಾ ಹೇಳಿದ್ದಾರೆ.
ತಮ್ಮ ಕಾಮೆಂಟ್‌ನಲ್ಲಿ ಬಾಲ್ಯದ ನೆನಪುಗಳು, ನಾಸ್ಟಾಲ್ಜಿಯಾ ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications